SYS SSF SBS ಉಳ್ಳಾಲಬೈಲು ಶಾಖೆಯ ವತಿಯಿಂದ ಉಳ್ಳಾಲ ಸುನ್ನತ್ ಜಮಾಅತಿನ ಕೇಂದ್ರವಾದ ಮಾಸ್ತಿಕಟ್ಟೆ ಆಝಾದ್ ನಗರದ ಇಸ್ಲಾಮಿಕ್ ನಾಲೇಜ್ ಸೆಂಟರಿಗೆ ಇನ್ವರ್ಟರ್ ಅಳವಡಿಸಲಾಯಿತು.
SSF ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಇಸ್ಲಾಮಿಕ್ ನಾಲೇಜ್ ಸೆಂಟರ್ ಸುನ್ನತ್ ಜಮಾಅತಿನ ಆಶಯಾದರ್ಶಗಳನ್ನು ಪ್ರಚುರಪಡಿಸುವತ್ತ ಸದಾ ಸಮಯ ತೆರೆದಿರುತ್ತದೆ. ಸುನ್ನತ್ ಜಮಾಅತಿನ ಕಾರ್ಯಚಟುವಟಿಕೆಗಳು ನಿಷ್ಕ್ರಿಯವಾಗಬಾರದೆಂಬ ನಿಟ್ಟಿನಲ್ಲಿ SYS SSF SBS ಉಳ್ಳಾಲಬೈಲು ಬೊಟ್ಟು ಶಾಖೆಯ ವತಿಯಿಂದ INVERTER ಕೊಡುಗೆಯಾಗಿ ನೀಡಿದ್ದು, ಅವರಿಗೆ ಕ್ರತಜ್ಞರಾಗಿದ್ದೇವೆ ಎಂದು ತಿಳಿಸಿದರು. SYS ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. SYS ಅಕ್ಕರೆಕೆರೆ ಬ್ರಾಂಚ್ ಮಾಜಿ ಅಧ್ಯಕ್ಷರಾದ ಉಸ್ಮಾನ್ ಸಖಾಫಿ ಪೊಳಲಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ಶಾಖಾಧ್ಯಕ್ಷ ಇಸ್ಮಾಯಿಲ್, ಇಬ್ರಾಹಿಂ, ದಾವೂದ್ ಹಾಗು ಇನ್ನಿತರ ನಾಯಕರು, ಕಾರ್ಯಕರ್ತರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಸ್ವಾಗತಿಸಿ ಕೊನೆಗೆ ಧನ್ಯವಾದಗೈದರು
Monday, 21 August 2017
ಉಳ್ಳಾಲ ಆಝಾದ್ ನಗರದ ಇಸ್ಲಾಮಿಕ್ ನಾಲೇಜ್ ಸೆಂಟರಿಗೆ ಇನ್ವರ್ಟರ್ ಕೊಡುಗೆ
Subscribe to:
Posts (Atom)