Share To

Monday, 31 October 2016

ಸುಂದರಬಾಗ್ ಉಳ್ಳಾಲ, ಅಸ್ಸುಫ್ಫ ತರಗತಿಗೆ ಚಾಲನೆ ಮತ್ತು ಸೆಕ್ಟರ್ ಅಧ್ಯಕ್ಷರಿಗೆ ಸನ್ಮಾನ..31-10-2016

ಎಸ್ ಎಸ್ ಎಫ್ ಸುಂದರಬಾಗ್ ಶಾಖೆಯಿಂದ ಅಸ್ಸುಫ್ಫ ಉದ್ಘಾಟನಾ ಸಮಾರಂಭವು ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಸುಂದರಬಾಗ್ ಹಂಝ ಆಡಿಟೋರಿಯಂ ನಲ್ಲಿ ನಡೆಯಿತು.
ಹಂಝ ಯು.ಬಿ ಕಾರ್ಯಕ್ರಮ ಉದ್ಘಾಟಿಸಿದರು.ಅಸ್ಸುಫ್ಫ ಉಳ್ಳಾಲ ಡಿವಿಷನ್ ಕೋ ಆರ್ಡಿನೇಟರ್ ಮುನೀರ್ ಸಖಾಫಿ ಉಳ್ಳಾಲ ಮುಖ್ಯ ಪ್ರಭಾಷಣ ಮಾಡಿ ಅಸ್ಸುಫ್ಫ ತರಗತಿಗೆ ಚಾಲನೆ ನೀಡಿದರು.ಬಳಿಕ ನಡೆದ ಸನ್ಮಾನ ಸಮಾರಂಭದಲ್ಲಿ ಎಸ್ಸೆಸ್ಸೆಫ್ ಸುಂದರಬಾಗ್ ಶಾಖೆ ವತಿಯಿಂದ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಸುಂದರಬಾಗ್ ಅಧ್ಯಕ್ಷ ಸೀದಿಯಾಕ,ಕಾರ್ಯದರ್ಶಿ ಹೈದರ್ ಹಾಜಿ,ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ,ಕೋಶಾಧಿಕಾರಿ ಇಲ್ಯಾಸ್ ಕೈಕೋ,ಅಶ್ರಫ್ ಸುಂದರಬಾಗ್,ಹೈದರಾಕ ಮುಕ್ಕಚ್ಚೇರಿ ಹಾಗು ಕಬೀರ್ ಸುಂದರಬಾಗ್ ಉಪಸ್ಥಿತರಿದ್ದರು.ಹಂಝ ಸಯ್ಯಿದ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಮುಕ್ಕಚ್ವೇರಿ, ಅಸ್ಸುಫ್ಫ ಉದ್ಘಾಟನಾ ಸಮಾರಂಭ, ಅಕ್ಟೋಬರ್ - 30-2016

ಎಸ್ ಎಸ್ ಎಫ್ ಮುಕ್ಕಚ್ಚೇರಿ ಶಾಖೆಯ ಅಸ್ಸುಫ್ಫ ತರಗತಿಯ ಉದ್ಘಾಟನಾ ಸಮಾರಂಭ ಎಸ್ ವೈ ಎಸ್ ಮುಕ್ಕಚ್ಚೇರಿ ಕಾರ್ಯದರ್ಶಿ ಹೈದರಾಕ ರವರ ಅಧ್ಯಕ್ಷತೆಯಲ್ಲಿ ಕೈಕೋದಲ್ಲಿರುವ ಇಲ್ಯಾಸ್ ಪ್ಯಾಲೇಸ್ ನಲ್ಲಿ ನಡೆಯಿತು.
ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಕಾರ್ಯಕ್ರಮ ಉದ್ಘಾಟಿಸಿದರು.ಅಸ್ಸುಫ್ಫ ಉಳ್ಳಾಲ ಡಿವಿಷನ್ ಸಂಚಾಲಕ ಮುನೀರ್ ಕಾಮಿಲ್ ಸಖಾಫಿ ಮುಖ್ಯ ಪ್ರಭಾಷಣ ಮಾಡಿ ಅಸ್ಸುಫ್ಫ ತರಗತಿಗೆ ಚಾಲನೆ ನೀಡಿದರು.ಅಸ್ಸುಫ್ಫ ಸೆಕ್ಟರ್ ಅಮೀರ್ ಮುಝಮ್ಮಿಲ್ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಪ್ರಸ್ತುತ ಸಂದರ್ಭದಲ್ಲಿ ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ,ಮನ್ಸೂರ್,ಹೈದರ್,ಮಿಕ್ದಾದ್,ಅಬ್ದುಲ್ಲಾ ಹಾಗು ಆಸಿಫ್ ಉಪಸ್ಥಿತರಿದ್ದರು. ಮುಕ್ಕಚ್ಚೇರಿ ಶಾಖಾ ಕಾರ್ಯದರ್ಶಿ ಮುಹಮ್ಮದ್ ಕೈಕೋ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

Saturday, 29 October 2016

ಮದನಿ ಮೌಲಿದ್ ಮಜ್ಲಿಸ್ ಮತ್ತು ಪ್ರಾರ್ಥನಾ ಸಂಗಮ..27-10-2016

ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಮತ್ತು ಮೇಲಂಗಡಿ ಶಾಖೆ ಜಂಟಿ ಆಶ್ರಯದಲ್ಲಿ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ರವರ ಅನುಸ್ಮರಣಾ ಪ್ರಯುಕ್ತ ಮದನಿ ಮೌಲಿದ್ ಮಜ್ಲಿಸ್ ಮತ್ತು ಬ್ರಹತ್ ಪ್ರಾರ್ಥನಾ ಸಂಗಮ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ನೇತ್ರತ್ವದಲ್ಲಿ ಎಸ್ ಎಸ್ ಎಫ್ ಮೇಲಂಗಡಿ ಶಾಖೆಯ ಫಿರ್ದೌಸ್ ವರಾಂಡದಲ್ಲಿ ನಡೆಯಿತು.
ಬಶೀರ್ ಸಖಾಫಿ ಉಳ್ಳಾಲ ಮದನಿ ಮೌಲಿದ್ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಿದರು.ಪ್ರಾರ್ಥನಾ ಸಂಗಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮಾಜಿ ಅಧ್ಯಕ್ಷರಾದ ಮುಸ್ತಫ ಮದನಿ ಉಳ್ಳಾಲ ಎಸ್ಸೆಸ್ಸೆಫ್ಫಿನ ಗತಕಾಲದ ಅನುಭವಗಳನ್ನು ಹಂಚಿಕೊಂಡರು.ಅಕ್ಟೋಬರ್ 26-2016 ಕ್ಕೆ ಎಸ್ಸೆಸ್ಸೆಫ್ ಉಳ್ಳಾಲ ರಚನೆಗೊಂಡು ಮೂವತ್ತು ವರ್ಷಗಳು ತುಂಬಿದ್ದು ಕರ್ನಾಟಕದಲ್ಲಿ ಎಸ್ಸೆಸ್ಸೆಫ್ ಅಧಿಕ್ರತವಾಗಿ ರಚನೆಗೊಳ್ಳುವುದಕ್ಕಿಂತ ಮುಂಚೆಯೇ ಕೇರಳದಲ್ಲಿ ಪ್ರಖ್ಯಾತ ಉಲಮಾಗಳ ಸಾರಥ್ಯದಲ್ಲಿ ಜನ್ಮ ತಾಳಿದ ಎಸ್ಸೆಸ್ಸೆಫ್ಫನ್ನು ಅವಲಂಬಿಸಿ ಕೇವಲ ನಾಲ್ಕು ಜನರ ಮೂಲಕ ಮೂವತ್ತು ವರ್ಷಗಳ ಮುಂಚೆ ಉಳ್ಳಾಲದಲ್ಲಿ ಎಸ್ಸೆಸ್ಸೆಫ್ಫನ್ನು ಪ್ರಾರಂಭಿಸಿದ್ದೇವೆ ಅಂದರು.ಉಳ್ಳಾಲ ಅಳೇಕಲ ಖತೀಬರಾದ ಅಬೂ ಝಿಯಾದ್ ಮದನಿ ಪಟ್ಟಾಂಬಿ ಉಸ್ತಾದರ ನೇತ್ರತ್ವದಲ್ಲಿ ಎಸ್ಸೆಸ್ಸೆಫ್ಫನ್ನು ಆರಂಭಿಸಲಾಗಿದ್ದು ಹಲವಾರು ಉಲಮಾಗಳು ಸೆಕ್ಟರ್ ಅಧ್ಯಕ್ಷರಾಗಿದ್ದರು ಅಂದರು.
ಪ್ರಾರ್ಥನಾ ಸಂಗಮದಲ್ಲಿ ಉಸ್ಮಾನ್ ಸಖಾಫಿ ಪೊಳಲಿ ಮುಖ್ಯ ಪ್ರಭಾಷಣ ಮಾಡಿದರು.ಹಾಫಿಝ್ ಮುಈನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಅಸ್ಸುಫ್ಫ ಸೆಕ್ಟರ್ ಅಮೀರ್ ಮುಝಮ್ಮಿಲ್ ಉಸ್ತಾದ್ ಕೋಟೆಪುರ ಧನ್ಯವಾದಗೈದರು.
ಸೆಕ್ಟರ್ ಉಪಾಧ್ಯಕ್ಷ ನವಾಝ್ ಸಖಾಫಿ ಉಳ್ಳಾಲ,ಹಾಫಿಝ್ ಅಸ್ಲಂ ಉಳ್ಳಾಲ,ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ,ಮೇಲಂಗಡಿ ಶಾಖಾಧ್ಯಕ್ಷ ಶಫೀಖ್ ಮೇಲಂಗಡಿ,ಕಾರ್ಯದರ್ಶಿ ತಶ್ರೀಫ್,ಸತ್ತಾರ್ ಮೇಲಂಗಡಿ ಹಾಗು ನೌಫಲ್ ಕೋಟೆಪುರ ಉಪಸ್ಥಿತರಿದ್ದರು.

ಮಂಗಳೂರನ್ನು ನಿಬ್ಬೆರಗಾಗಿಸಿದ ಸುನ್ನೀ ಒಕ್ಕೂಟ ಹಮ್ಮಿಕೊಂಡ ಪ್ರತಿಭಟನೆ...ಮಂಗಳೂರನ್ನು ನಡುಗಿಸಿದ ಸುನ್ನೀ ಸೇನಾನಿಗಳು.ಕೆಲವೊಂದು ಫೋಟೋಗಳು..28-10-2016

*ಮಂಗಳೂರನ್ನೇ ನಿಬ್ಬೆರಗಾಗಿಸಿದ ಧೀರ ಧ್ವನಿಯಾಗಿತ್ತು ನಿನ್ನೆ ಮಂಗಳೂರಿನಲ್ಲಿ ಸುನ್ನೀ ಒಕ್ಕೂಟ ಮೊಳಗಿಸಿದ್ದು...!!*

ಹೌದು ಏಕರೂಪನಾಗರಿಕ ಸಂಹಿತೆ ಮತ್ತು ತ್ರಿವಳಿ ತಲಾಖ್ ಎಂಬ ಬೊಮ್ಮನನ್ನು ತೋರಿಸಿ ಶರೀಅ ನಿಯಮಕ್ಕೆ ಕೈ ತೂರಿಸುವ ಕೇಂದ್ರ ಸರಕಾರದ ಉದ್ದಟತನದ ನಿಲುವನ್ನು ಸುನ್ನೀ ಸಂಘಟನೆಗಳ ಒಕ್ಕೂಟ ತೀವ್ರವಾಗಿ ಖಂಡಿಸಿ ನಿನ್ನೆ ಡಿ ಸಿ ಕಛೇರಿ ಮುಂದೆ ನಡೆಸಿದ ಪ್ರತಿಭಟನೆ ಅತ್ಯಂತ ಯಶಸ್ವಿಯಾಗಿ ಮುಗಿಯಿತು.
ಮುಸ್ಲಿಮರೆಡೆಯಲ್ಲಿರುವ ಸಣ್ಣ ಸಣ್ಣ ಭಿನ್ನಮತಗಳನ್ನು ಮತ್ತು ಕೆಲವೊಂದು ನಾಮದಾರಿ ಮುಸ್ಲಿಂ ಬಂಡಾಯ ಮಹಿಳಾ ನಾರಿಗಳನ್ನು ತೋರಿಸಿ ಇಸ್ಲಾಮಿನ ಶರೀಅ ಎಂಬ ಬುಡಕ್ಕೆ ಕೊಡಲಿಯೇಟು ನೀಡುವ ಸರಕಾರದ ಹುನ್ನಾರವನ್ನು *ನಾವು ಭಿನ್ನತೆಯಲ್ಲೂ ಐಕ್ಯರಾಗಿದ್ದೇವೆ* ಎಂಬ  ಮಹಾನ್ ಖಾಝಿಯವರಾದ ಬೇಕಲ್ ಉಸ್ತಾದ್ ರವರು ರವಾನಿಸಿದ ಸಂದೇಶ ಸರಕಾರದ ಕುತಂತ್ರ ನೀತಿಯ ಬುಡವನ್ನೇ ಕಿತ್ತೆಸೆಯುವಂತಿತ್ತು.
ಜೊತೆಗೆ ಮುಸ್ಲಿಮರೆಡೆಯಲ್ಲಿರುವ ಸಣ್ಣ ಸಣ್ಣ ಭಿನ್ನತೆಯನ್ನೇ ವೈಭವೀಕರಿಸಿ ಪದೇ ಪದೇ ಅದನ್ನೇ ಎಲ್ಲಾ ಕಡೆ ಡಿಸ್ಪ್'ಳೆ ಮಾಡುತ್ತಾ ಕೀಳರಿಮೆ ಸೃಷ್ಟಿಸುವ ಸಮುದಾಯ 'ಹೀರೋ'ಗಳಿಗೂ ಬೇಕಲ ಉಸ್ತಾದ್ ನಿನ್ನೆ ಚಾಟಿಯೇಟು ಬೀಸಿದರು.

*ಮುಸ್ಲಿಂ ಸಮುದಾಯ ಭಿನ್ನತೆಯಲ್ಲಿ ಹಂಚಿಹೋಗಿದ್ದಾರೆ ಎಂಬ ಕೀಳರಿಮೆ ಬೇಡ.ನಾವು ಭಿನ್ನತೆಯಲ್ಲೂ ಐಕ್ಯರಾಗಿದ್ದೇವೆ*ಎಂಬ ಖಾಝಿಯವರ ತೂಕದ ಮಾತು ಮುಸ್ಲಿಂ ಸಮುದಾಯವನ್ನು ನೆಕ್ಕಿ ತಿನ್ನಲು ಹವಣಿಸುತ್ತಿರುವ ಶತ್ರುಪಾಳಯಕ್ಕೆ ಎಚ್ಚರಿಕೆಯ ಘಂಟೆಯಾಗಿತ್ತು!

ಪ್ರೊಟಸ್ಟ್ ಸಭೆಯನ್ನು ಉದ್ಘಾಟನೆಗೈದು ಮಾತನಾಡಿದ ಮೌಲಾನಾ ಶಾಫಿ ಸಹದಿ ಉಸ್ತಾದ್ ತನ್ನ ಭಾಷಣದುದ್ದಕ್ಕೂ ತನ್ನ ಬಟ್ಟಲಲ್ಲಿ ಹೆಗ್ಗಣ ಬಿದ್ದಿದ್ದರೂ ಮತ್ತೊಬ್ಬರ ಬಟ್ಟಲಲ್ಲಿ ಬಿದ್ದಿರುವ ನೊಣವನ್ನು ತೋರಿಸುವ ವೀರ ಶೂರ ದೊರೆಗಳನ್ನು ಕೆಣಕಿಸುತ್ತಿದ್ದರು.

ಅದಕ್ಕವರು *ಅಖ್ಲಾಕ್ ಪತ್ನಿ,ಗುಜರಾತ್ ಸಂತ್ರಸ್ಥೆ ಕೌಸರ್ ಬಾನು,ಜಾರ್ಖಂಡ್ ನಲ್ಲಿ ಕೊಂದು ಹಿಸುಕಿ ಹಾಕಿದ ಇಬ್ಬರು  ಸಹೋದರರ ಕುಟುಂಬದ ಅನಾಥೆಗಳಾದ ಮುಸ್ಲಿಂ ಮಹಿಳೆಯರು,ಇಹ್ಸಾನ್ ಜಾಫ್ರಿಯ ಪತ್ನಿಯಾದ ಮುಸ್ಲಿಂ ಸಂತ್ರಸ್ಥೆ ಮಹಿಳೆ ಮುಂತಾದ ಅನೇಕ ಉದಾಹರಣೆಗಳನ್ನು ಎಳೆಎಳೆಯಾಗಿ ಬಿಡಿಸಿ ಮುಸ್ಲಿಂ ಮಹಿಳೆಯರ ಕುರಿತು ಮೊಸಳೆ ಕಣ್ಣೀರು ಸುರಿಸುವ ಆಡಳಿತರೂಡ ವೃಂದಕ್ಕೆ ಸಖತ್ತ್ ಟಾಂಗ್ ಕೊಟ್ಟರು*

ಇಷ್ಟೆಲ್ಲಾ ರಾದ್ದಾಂತ ನಡೆಯುವಾಗಲೂ ತುಟಿಕ್ ಪಿಟಿಕ್ ಎನ್ನದೆ ಗುಮ್ಮನಂತೆ ಕೂತಿರುವ ಕಾಂಗ್ರೆಸ್ ಪಕ್ಷವನ್ನು ತರಾಟೆಗೆ ತೆಗೆದುಕೊಂಡ ಶಾಫಿಸಹದಿ ಉಸ್ತಾದ್,ನಿಮ್ಮ ಈ ಅಸಹ್ಯ ಮೌನವನ್ನು ಕೈ ಬಿಡದಿದ್ದಲ್ಲಿ ಭವಿಷ್ಯದಲ್ಲಿ ನೀವು ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ನೇರವಾಗಿ ಎಚ್ಚರಿಕೆ ಕೊಡುವ ಮೂಲಕ ಸುನ್ನೀ ಸಮೂಹ ಯಾವುದೇ ಪಕ್ಷದ ಜೀತದಾಳುಗಳಲ್ಲ ಎಂಬ ಸ್ಪಷ್ಟ ಸಂದೇಶ ನೀಡಿದರು.
ತ್ರಿವಳಿ ತಲಾಖ್ ಮತ್ತು ಏಕರೂಪ ಸಂಹಿತೆ ವಿವಾದ ವಿರುದ್ದ ನಡೆಯುವ ಪ್ರತಿಭಟನೆಯು ಬಿಜೆಪಿ ವಿರುದ್ದ ವೆಂದು ವ್ಯಾಖ್ಯಾನಿಸಿ ಅದನ್ನು ರಾಜಕೀಯಗೊಳಿಸಿ ಲಾಭ ಪಡೆಯಲು ಹುನ್ನಾರ ನಡೆಸುವವರ ಕುತಂತ್ರವನ್ನು ಅರಿತುಕೊಂಡೇ ಶಾಫಿ ಸಹದಿ ಉಸ್ತಾದ್ ಇದ್ಯಾವುದೇ ರಾಜಕೀಯ ಪಕ್ಷದ ವಿರುದ್ದ ಅಲ್ಲ 85 ರ ಕಾಲದಲ್ಲಿ ರಾಜೀವ್ ಗಾಂಧಿಯವರ ಕಾಂಗ್ರೆಸ್ ಸರಕಾರದ ಕಾಲದಲ್ಲೂ ಇದೇ ವಿಷಯ ಬಂದಾಗ ನಾವೆಲ್ಲಾ ಒಗ್ಗಟ್ಟಾಗಿ ಪ್ರತಿಭಟಿಸಿದ್ದೇವೆ ಎಂದು ಹೇಳುವ ಮೂಲಕ ಅವರ ಕುಪ್ರಚಾರಗಳಿಗೂ ಗತಿ ತೋರಿಸಿದರು.

*ಶರೀಅತ್ ಅದು ನಮ್ಮ ಉಸಿರು ಅದರ ವಿರುದ್ದ ಯಾರು ಕೈ ಹಾಕಿದರೂ ನಾವು ಪ್ರತಿಭಟಿಸಿಯೇ ತೀರುತ್ತೇವೆ* ಎಂದ ಶಾಫಿ ಸಹದಿ ಇದು ಆರಂಭ ಮಾತ್ರ ಕರ್ನಾಟಕದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ನಾವು ಪ್ರತಿಭಟನೆ ಹಮ್ಮಿಕೊಳ್ಳಲಿದ್ದೇವೆ ಎಂದರು.

ಭಾಷಣ ರತ್ನ ಝೈನಿ ಉಸ್ತಾದರು
ಮಂಗಳೂರನ್ನೇ ನಿಬ್ಬೆರಗಾಗಿಸುವ ತನ್ನ ಭಾಷಣದಲ್ಲಿ ಶಾಇರಾ ಬಾನುವಿಗೆ ಅವಳ ಪತಿ ಕೊಟ್ಟ ಎಲ್ಲಾ ಹಿಂಸೆಗಳ ವಿರುದ್ದ  ಆ ಮಹಿಳೆಯ ಜೊತೆ ಇದ್ದೇವೆ.ಅದರೆ ಶರೀಅತ್ ನಿಯಮವನ್ನೇ ಬುಡಮೇಲು ಮಾಡುವ ಅವಳ ಅಪಕ್ವ ಹೇಳಿಕೆಗೆ ಯಾವತ್ತೂ ಬೆಂಬಲವಿಲ್ಲ ಎಂದರು.
ಅಂತೂ ಇಂತೂ ಸುನ್ನೀ ಒಕ್ಕೂಟ ಹಮ್ಮಿ ಕೊಂಡ ನಿನ್ನೆಯ ಪ್ರತಿಭಟನೆ ಮಾದರಿಯುತ ಮತ್ತು ಸರಕಾರಗಳಿಗೆ ಬಿಸಿಮುಟ್ಟಿಸುವ ಎಚ್ಚರಿಕೆಯ ಧ್ವನಿಗಳಾಗಿತ್ತು.
-ಅಬೂಶಝ

Thursday, 27 October 2016

ದ.ಕ ಜಿಲ್ಲಾ ಸುನ್ನೀ ಸಂಘಟನೆಗಳು ಕರೆ ನೀಡಿದ ಇಂದಿನ ಪ್ರತಿಭಟನೆ ಯಶಸ್ವಿಗೆ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಕರೆ

ದ.ಕ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟ ಕರೆ ನೀಡಿದ ಪ್ರತಿಭಟನೆ ಯಶಸ್ವಿಗೆ ಕರೆ.

ಶರೀಅತ್ ಕಾನೂನು ಹಸ್ತಕ್ಷೇಪ ಮತ್ತು ಏಕ ರೂಪ ನಾಗರಿಕ ಸಂಹಿತೆ ವಿರುದ್ಧ ದ.ಕ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟ ಶುಕ್ರವಾರ ಸಾಯಂಕಾಲ 3 ಗಂಟೆಗೆ ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಹಮ್ಮಿಕೊಂಡ ಪ್ರತಿಭಟನೆ ಯಶಸ್ವಿಗೆ ಎಸ್ಸೆಸ್ಸೆಫ್  ಉಳ್ಳಾಲ ಸೆಕ್ಟರ್ ಕರೆ ನೀಡಿದೆ.
ಏಕರೂಪ ನಾಗರಿಕ ಸಂಹಿತೆ ಜಾರಿ ಮತ್ತು ತ್ರಿವಳಿ ತ್ವಲಾಖ್ ವಿಷಯದಲ್ಲಿ ಕೇಂದ್ರಸರಕಾರದ ನಡೆ ಇಸ್ಲಾಂ ಶರೀಅತಿಗೆ ವಿರುದ್ಧವಾಗಿದೆ.ಇದು ಮುಸ್ಲಿಂ ಸಮುದಾಯಕ್ಕೆ ನಿಜಕ್ಕೂ ಅನ್ಯಾಯವಾಗುವಂತಹ ಕಾನೂನಾಗಿದೆ. ಆದ್ದರಿಂದ ಪ್ರತಿಯೋರ್ವ ಮುಸಲ್ಮಾನನೂ ಪ್ರತಿಭಟನೆಯಲ್ಲಿ ಭಾಗವಹಿಸಿ ಇಸ್ಲಾಂ ಧರ್ಮದ ಸುಂದರವಾದ ಶರೀಅತ್ತನ್ನು ಉಳಿಸಿ ಪ್ರತಿಭಟನೆ ಸಂಪೂರ್ಣ ಯಶಸ್ವಿಗೊಳಿಸಬೇಕೆಂದು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕರೆ ನೀಡಿದೆ.

Sunday, 23 October 2016

ಶಾಖಾ ಮಟ್ಟದ ಅಸ್ಸುಫ್ಫ ತರಗತಿಗೆ ಎಸ್ ಎಸ್ ಎಫ್ ಉಳ್ಳಾಲ ಅಕ್ಕರೆಕೆರೆ ಶಾಖೆಯಿಂದ ಚಾಲನೆ

ಎಸ್ ಎಸ್ ಎಫ್ ಉಳ್ಳಾಲ ಅಕ್ಕರೆಕೆರೆ ಶಾಖೆಯ ಶಾಖಾ ಮಟ್ಟದ ಅಸ್ಸುಫ್ಫ ತರಗತಿಯ ಉದ್ಘಾಟನಾ ಸಮಾರಂಭ ಶಾಖಾಧ್ಯಕ್ಷ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಅಕ್ಕರೆಕೆರೆಯ ಎಸ್ಸೆಸ್ಸೆಫ್ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಶೀರ್ ಸಖಾಫಿ ಉಳ್ಳಾಲ ಇಸ್ಲಾಮಿನ ಸುಂದರವಾದ ಆಶಯಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಅಸ್ಸುಫ್ಫ ತರಗತಿ ಸಹಾಯಕವಾಗಲಿದೆ ಎಂದರು.ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಅಧೀನದ ರಾಜ್ಯಾದ್ಯಂತವಿರುವ ಪ್ರತಿಯೊಂದು ಶಾಖೆಗಳಲ್ಲಿಯೂ ವ್ಯವಸ್ಥಿತವಾಗಿ ವಿವಿಧ ವಿಷಯಗಳಲ್ಲಿ ಅಸ್ಸುಫ್ಫ ತರಗತಿ ನಡೆಯಲಿದೆ ಎಂದು ಉಳ್ಳಾಲ ಡಿವಿಷನ್ ಅಸ್ಸುಫ್ಫ ನಿರ್ದೇಶಕ ಮುನೀರ್ ಸಖಾಫಿ ಉಳ್ಳಾಲ ತಿಳಿಸಿದರು.ಅವರು ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದರು.ಪ್ರತಿಯೊಂದು ಸತ್ಕರ್ಮವು ಸ್ವೀಕಾರಾರ್ಹವಾಗುವುದು ನಿಯ್ಯತ್ತಿನಿಂದಾಗಿದೆ.ಆದುದರಿಂದ ನಮ್ಮ ಪ್ರತಿಯೊಂದು ಚಲನವಲನ ನಡೆ ನುಡಿಗಳು ನಿಷ್ಕಲಂಕತಾ ಮನೋಭಾವದಿಂದ ಕೂಡಿರಬೇಕು ಎಂದು ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಅಧ್ಯಕ್ಷರಾದ ಉಸ್ಮಾನ್ ಸಖಾಫಿ ಪೊಳಲಿ ತರಗತಿ ನೀಡಿ ಅಸ್ಸುಫ್ಫ ತರಗತಿಗೆ ಅಧಿಕ್ರತ ಚಾಲನೆ ನೀಡಿದರು.ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್,ಸೆಕ್ಟರ್ ಅಮೀರ್ ಮುಝಮ್ಮಿಲ್ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಬಳಿಕ ಎಸ್ ಎಸ್ ಎಫ್ ಅಕ್ಕರೆಕೆರೆ ಶಾಖಾ ಕಾರ್ಯಕರ್ತ ಅಬ್ದುಲ್ ಮಜೀದ್ ಇವರ ದೊಡ್ಡಪ್ಪ ಹಾಗು ಪೊನ್ಮಳ ಉಸ್ತಾದರ ಮಗಳ ಪತಿಯ ತಂದೆ ಮಂಗಳೂರು ವೆಲೆನ್ಸಿಯದ ಫಖ್ರುದ್ದೀನ್ ಬಾವಾ ರವರು ಇತ್ತೀಚೆಗೆ ಮರಣ ಹೊಂದಿದ್ದರು.ಅವರ ಮೇಲೆ ಹಾಗು ಅಕ್ಟೋಬರ್ 23 -2016 ಆದಿತ್ಯವಾರ ಮರಣ ಹೊಂದಿದ ಎಸ್ ವೈ ಎಸ್ ಉಳ್ಳಾಲ ಸುಂದರಿಭಾಗ್ ಬ್ರಾಂಚ್ ಸದಸ್ಯರು ಹಾಗು ಎಸ್ ಎಸ್ ಎಫ್ ಸುಂದರಿಭಾಗ್ ಶಾಖಾ ಕಾರ್ಯಕರ್ತ ಕಬೀರ್ ರವರ ತಂದೆಯೂ ಆದ ಹಸನಾಕ ನವರ ಮೇಲೆ ತಹ್ಲೀಲ್ ಹದಿಯ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಹಳೆಕೋಟೆ,ಅಲ್ ಅಮೀನ್ ರಿಲೀಫ್ ಚೇರಮಾನ್ ಮನ್ಸೂರ್ ಹಳೆಕೋಟೆ,ಸೆಕ್ಟರ್ ಪ್ರ.ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ,ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ,ಹೈದರ್ ಮುಕ್ಕಚ್ಚೇರಿ,ಖಾಲಿದ್ ಅಕ್ಕರೆಕೆರೆ,ಮಜೀದ್ ಅಕ್ಕರೆಕೆರೆ,ಮನ್ಸೂರ್ ಅಕ್ಕರೆಕೆರೆ ಹಾಗು ಮುಝಯ್ಯಿನ್ ಅಕ್ಕರೆಕೆರೆ ಉಪಸ್ಥಿತರಿದ್ದರು.ಶಾಖಾ ಕಾರ್ಯದರ್ಶಿ ಶರೀಫ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸಿರಾಜ್ ಅಕ್ಕರೆಕೆರೆ ಧನ್ಯವಾದ ಗೈದರು.

Tuesday, 18 October 2016

ಅಸ್ಸುಫ್ಫ ಉದ್ಘಾಟನಾ ಸಮಾರಂಭ..16-10-2016

ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಸೆಕ್ಟರ್ ಮಟ್ಟದ ಅಸ್ಸುಫ್ಫ ತರಗತಿ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಉಳ್ಳಾಲ ರಹ್ಮಾನಿಯ ಪ್ಲಾಝಾದಲ್ಲಿ ಇತ್ತೀಚೆಗೆ ನಡೆಯಿತು.ನವಾಝ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿದರು.ಡಿವಿಷನ್ ಅಸ್ಸುಫ್ಫ ಅಮೀರ್ ಮುನೀರ್ ಸಖಾಫಿ ಉಳ್ಳಾಲ ಕಾರ್ಯಕ್ರಮ ಉದ್ಘಾಟಿಸಿದರು.ದ.ಕ ಜಿಲ್ಲಾ ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಟಿ.ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಅಸ್ಸುಫ್ಫ ತರಗತಿ ನಡೆಸಿಕೊಟ್ಟರು.ಬಶೀರ್ ಸಖಾಫಿ ಉಳ್ಳಾಲ,ಮುಹಮ್ಮದ್ ಮದನಿ ಹಳೆಕೋಟೆ,ಯೂಸುಫ್ ಮುಸ್ಲಿಯಾರ್ ಉಳ್ಳಾಲಬೈಲ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಮುಝಮ್ಮಿಲ್ ಉಸ್ತಾದ್ ಕೋಟೆಪುರ ಇವರನ್ನು ಉಳ್ಳಾಲ ಸೆಕ್ಟರ್ ಅಸ್ಸುಫ್ಫ ಅಮೀರಾಗಿ ಆರಿಸಲಾಯಿತು.
ಈ ಸಂದರ್ಭದಲ್ಲಿ ಆದಂ ಉಸ್ತಾದ್,ಇಲ್ಯಾಸ್ ಕೈಕೋ,ನೌಫಲ್ ಕೋಟೆಪುರ,ಇಸಾಕ್ ಬಸ್ತಿಪಡ್ಪು,ಹಂಝ ಸುಂದರಿಭಾಗ್,ಸಿರಾಜ್ ಅಕ್ಕರೆಕೆರೆ,ಇಖ್ಬಾಲ್ ಒಂಭತ್ತುಕೆರೆ,ಎಸ್ ಎಂ ಶರೀಫ್ ಅಕ್ಕರೆಕೆರೆ,ತೌಸೀಫ್ ಒಂಭತ್ತುಕೆರೆ ಹಾಗು ಖಾಲಿದ್ ಅಕ್ಕರೆಕೆರೆ ಉಪಸ್ಥಿತರಿದ್ದರು.ಸೆಕ್ಟರ್ ಕಾರ್ಯದರ್ಶಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಇಶ್ಕೇ ಮುಸ್ತಫ ಬುರ್ದಾ ಇಖ್ವಾನ್ ತಂಡ ಅಕ್ಕರೆಕೆರೆ ಅಸ್ತಿತ್ವಕ್ಕೆ..16-10-2016

ಸುನ್ನೀ ಬಾಲ ಸಂಘ ಅಕ್ಕರೆಕೆರೆ ಇದರ ಅಧೀನದಲ್ಲಿ ಇಶ್ಕೇ ಮುಸ್ತಫ ಬುರ್ದಾ ಇಖ್ವಾನ್ ತಂಡಕ್ಕೆ ಎಸ್ ಎಸ್ ಎಫ್ ಅಕ್ಕರೆಕೆರೆ ಶಾಖಾಧ್ಯಕ್ಷ ನವಾಝ್ ಸಖಾಫಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಚಾಲನೆ ನೀಡಲಾಯಿತು.ಲದಲ್ ಹಬೀಬ್ ಅಳೇಕಲ ಇದರ ನಿರ್ದೇಶಕ ಜಂಶೀರ್ ಅಳೇಕಲ ಕಾರ್ಯಕ್ರಮ ಉದ್ಘಾಟಿಸಿದರು.ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್ ಹಾಗು ಶಾಖಾ ಪ್ರಧಾನ ಕಾರ್ಯದರ್ಶಿ ಶರೀಫ್ ಪ್ರಾಸ್ತಾವಿಕವಾಗಿ ಮಾತನಾಡಿ ತಂಡದ ಉಜ್ವಲ ವಿಜಯಕ್ಕಾಗಿ ಶುಭ ಹಾರೈಸಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಖಾಲಿದಾಕ,ಅಬ್ದುಲ್ ಮಜೀದ್,ಮುಹಾನಿಶ್ ಹಾಗು ಇರ್ಫಾನ್ ಉಪಸ್ಥಿತರಿದ್ದರು.ಸಿರಾಜ್ ಅಕ್ಕರೆಕೆರೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.