Share To

Sunday, 24 November 2019

ಜಪಾನ್ ನ ಕೈಝನ್ ಸಿಸ್ಟಮ್ ನಮ್ಮಲ್ಲೂ ಅಳವಡಿಸಿದರೆ......


🎓🎓 *ಮಾಸ್ಟರ್ ಮೈಂಡ್* 🎓🎓 

 ಜಪಾನ್ ನ ಕೈಝನ್ ಸಿಸ್ಟಮ್ ನಮ್ಮಲ್ಲೂ ಅಳವಡಿಸಿದರೆ......

 *Kaizen system* ಇದು ಜಪಾನ್ ನಲ್ಲಿ ವೈಯಕ್ತಿಕ ಬದುಕು ಮತ್ತು ವ್ಯಾವಹಾರಿಕ ರಂಗಗಳಲ್ಲಿ ಅಳವಡಿಸುತ್ತಾ ಬಂದಿರುವ ಒಂದು ಸಿಸ್ಟಮ್.

ಏನಾಗಿದೆ Kaizen System? 
       A Japanese business philosophy of *continuous small improvement or development* of working practices, personal efficiency, etc.
Plan - Do - Check - Act

 *ನಿಧಾನ*(Slow) ಮತ್ತು *ನಿರಂತರ*(Continue) ಈ ಎರಡು ವಿಚಾರಗಳು ವೈಯಕ್ತಿಕ, ವ್ಯಾವಹಾರಿಕ ಮತ್ತು ಸಾಂಘಿಕ ರಂಗಗಳಲ್ಲಿ ಉದ್ದೇಶಿತ ಗುರಿ (Goal)ತಲುಪಲು ಸಹಕರಿಸುವ ಎರಡು ಮಾಧ್ಯಮಗಳಾಗಿವೆ.
ಇದಾಗಿದೆ ಜಪಾನ್ ಅಳವಡಿಸುತ್ತಾ ಬಂದ ಕೈಝನ್ ಸಿಸ್ಟಮ್, ಇದರಿಂದಾಗಿಯೇ ಜಪಾನ್ ದೇಶ ಅಭಿವೃದ್ಧಿ ಹೊಂದಿದ ರಾಷ್ಟ್ರದ ಪಟ್ಟಿಯಲ್ಲಿ ಕಾಣಲು ಸಾಧ್ಯವಾದದ್ದು.

ಅಲ್ಲಾಹನು ಲೈಕ್ ಮಾಡುವದೂ ಅದನ್ನೇ
 أَحَبَّ الأَعْمَالِ أَدْوَمُهَا إِلَى اللَّهِ، وَإِنْ قَلَّ ‏"‏
(ಅಲ್ಲಾಹನು ಇಷ್ಟಪಡುವ ಇಬಾದತ್ ನಿರಂತರವಾಗಿ ಮಾಡುವುದಾಗಿದೆ ಅದು ಕಡಿಮೆಯಾಗಿದ್ದರೂ ಸರಿ)

ಅಂತೂ ನಮ್ಮೆಡೆಯಲ್ಲಿ ಈ ವಿಚಾರ ಚರ್ಚೆಗಿಟ್ಟರೆ ಸಿಗುವ ಉತ್ತರ ಹೇಗಿರಬಹುದು.
ವೈಯಕ್ತಿಕ,ವ್ಯಾವಹಾರಿಕ ಮತ್ತು ಸಾಂಘಿಕ ರಂಗಗಳಲ್ಲಿ ನಮಗಿರುವ *ವಿಶನ್* ಮತ್ತು ಆ ಗುರಿ ತಲುಪಲು ನಾವು ಮಾಡಿದ *ಮಿಷನ್ಸ್* ಏನಾಗಿದೆ ?
ಅದೂ ಅಲ್ಲದೆ ನಿಧಾನ ಮತ್ತು ನಿರಂತರ ಎಂಬ ವಿಚಾರ ನಮ್ಮಲ್ಲಿವೆಯೇ ?
Plan - Do - check - Act ನಮ್ಮಲ್ಲಿ ಉಂಟಾ ?
(Check =ಅವಲೇೂಕನ
Act = Action - Reward or Punishment) 
ಇದೆಲ್ಲದಕ್ಕೂ Yes ಎಂಬ ಉತ್ತರ ನಮ್ಮದಾಗಿದ್ದರೆ Success ಕಟ್ಟಿಟ್ಟ ಬುತ್ತಿ ಮತ್ತು ಅಭಿವೃದ್ಧಿ ಹೊಂದಿದ ಪಟ್ಟಿಯಲ್ಲಿ ಸೇರಬಹುದು.

ಅಂದ ಹಾಗೆ ಸೆರ್ಕ್ಯುಲರ್ ನ ವಿಚಾರದಲ್ಲಿ ನಮ್ಮ ಸಾಂಘಿಕ ನಾಯಕ *ಕೆ.ಎಂ* ರವರ ತರಗತಿಯಲ್ಲಿ ಹೀಗೆ ಕೇಳಿದ್ದೆ....
"ಆಲಸ್ಯತನ (Laziness) ಎರಡು ರೂಪದಲ್ಲಿದೆ.
ಒಂದು - ಸೆರ್ಕ್ಯುಲರ್ ನಲ್ಲಿರುವ ಕಾರ್ಯಕ್ರಮ ಮಾಡದಿರುವುದು.
ಎರಡು - ಸೆರ್ಕ್ಯುಲರ್ ನಲ್ಲಿರುವುದನ್ನು ಮಾತ್ರ ಮಾಡಿ ಸುಮ್ಮನಿರುವುದು ಇತರ ಯಾವುದೇ ಹೊಸ ಕಾರ್ಯಕ್ರಮ ಮಾಡದಿರುವುದು.
ಕೆಲವು ಘಟಕಗಳಲ್ಲಿ ಸೆರ್ಕ್ಯುಲರ್ ಬರುವುದನ್ನೇ ಕಾಯುವ ಪರಿಪಾಟ ಈಗಲೂ ಇದ್ದರೆ ಅದನ್ನು ತಿದ್ದುವುದು ಒಳಿತು.
ತಮ್ಮ ಘಟಕದ ವ್ಯಾಪ್ತಿಯಲ್ಲಿ ಸಂಘಟಣೆ ಮತ್ತು ಕಾರ್ಯಕರ್ತರ ಬೆಳವಣಿಗೆಗೆ ಅಗತ್ಯವಾದ ಕಾರ್ಯಯೇೂಜನೆ ಮಾಡುವುದರೊಂದಿಗೆ ಸೆರ್ಕ್ಯುಲರನ್ನೂ ಫಾಲೇೂ ಮಾಡುವವರು ನಾವಾಗೇೂಣ.

     📱 7760053572
✍ *Musthafa Master Ullal*
*======================*

Tuesday, 3 September 2019

ಮಹ್ಳರತುಲ್ ಬದ್ರಿಯ್ಯ ಮಜ್ಲಿಸ್ ಗೆ ಒಂದು ಅಪ್ಡೇಟ್


🎓🎓 ಮಾಸ್ಟರ್ ಮೈಂಡ್ 🎓🎓

 ಮಹ್ಳರತುಲ್ ಬದ್ರಿಯ್ಯ ಮಜ್ಲಿಸ್ ಗೆ ಒಂದು ಅಪ್ಡೇಟ್

   Honorable Grand Mufthi of India ಸುಲ್ತಾನುಲ್ ಉಲಮಾ ಎ.ಪಿ ಉಸ್ತಾದ್ ರವರು ಸುನ್ನೀ ಸಂಘ ಕುಟುಂಬದ ಎಲ್ಲಾ ಘಟಕಗಳಿಗೂ ಮಾಸಂಪ್ರತಿ ಅದರ ಕಾರ್ಯಕರ್ತರನ್ನು ಸೇರಿಸಿ ಹೇಳಲು ಪ್ರತ್ಯೇಕ ಇಜಾಝತ್ ಕೊಟ್ಟ ದ್ಸಿಕ್ರ್ ಗಳ ಕ್ರೇೂಢೀಕರಣವಾಗಿದೆ ಮಹ್ಳರತುಲ್ ಬದ್ರಿಯ್ಯ.

    ಒಂದರ್ಥದಲ್ಲಿ ಇದು ಘಟಕಕ್ಕೆ ಸಿಗುವ ಆತ್ಮೀಯ ಅಂಗೀಕಾರ ಪತ್ರ ಎಂದರೂ ತಪ್ಪಲ್ಲ.

      ಕಳೆದ ಎರಡ್ಮೂರು ವರ್ಷಗಳಲ್ಲಿ ಹಲವು ಘಟಕಗಳಲ್ಲಿ ನಡೆಸಿಕೊಂಡು ಬರುವ ಈ ಮಜ್ಲಿಸ್ ಗೆ ಕೆಲವೊಂದು ಹೊಸತನ ಸೇರ್ಪಡೆಗೊಳಿಸುವುದು ಅವಶ್ಯಕ.

        ಶಾಖೆಗಳಲ್ಲಿ ಮಾಸಂಪ್ರತಿ ಮಾಡುವ ಮಜ್ಲಿಸ್ ಯುನಿಟ್ ಕಛೇರಿಯಲ್ಲಿ ಮಾಡುವುದನ್ನು ಬಿಟ್ಟು ಶಾಖಾ ವ್ಯಾಪ್ತಿಯ ಸೌಕರ್ಯವಾಗುವ ಮನೆಗಳಲ್ಲಿ ಮಾಡುವುದು ಉತ್ತಮ.
ಕೊನೆಯ ದುಆದ ಮುಂಚೆ ಮಾಡುವ 15 ನಿಮಿಷಗಳ ತರಗತಿಯಲ್ಲಿ ನಮ್ಮ ಸಂಘಟನೆಯ ಮಹತ್ವವನ್ನೂ ಸೇರಿಸಿ ಹೇಳಬಹುದು. ಇದೆಲ್ಲವೂ ಸೈಲೆಂಟಾಗಿ ದಅ್ ವಾ ಮಾಡುವುದಲ್ಲದೆ ನಿಧಾನವಾಗಿ ಹೊಸ ಮುಖಗಳು ಸಂಘಟನೆಗೆ ಆಕರ್ಷಿಸುವಂತೆ ಮಾಡುತ್ತದೆ.

       ಇನ್ನೊಂದು ವಿಚಾರ, ಘಟಕಗಳಲ್ಲಿ ಮಜ್ಲಿಸ್ ನಡೆಸುವುದರೊಂದಿಗೆ ಪ್ರತಿಯೊಬ್ಬ ಕಾರ್ಯಕರ್ತ ತನ್ನ ಮನೆಯಲ್ಲಿಯೂ ಮಾಸಂಪ್ರತಿ ಪರಿಸರದ 10-15 ರಷ್ಟು ಹೊಸಮುಖ (ವಿದ್ಯಾರ್ಥಿ) ಗಳನ್ನು ಸೇರಿಸಿ ಮಜ್ಲಿಸ್ ಸಂಘಟಿಸುವುದೂ ಹೊಸಬರನ್ನು ಸಂಘಟನೆಯತ್ತ ಕೊಂಡು ತರುತ್ತದೆ ಅಲ್ಲದೆ ಒಂದು ವರ್ಷದಲ್ಲಿ ಸಾಂಘಿಕ ಅರಿವು ಇರುವ ಟೀಂ ಕೂಡಾ ರೆಡಿ ಮಾಡಬಹುದು.

✍ *Musthafa Master Ullal*
*======================*

Sunday, 24 March 2019

ಉಳ್ಳಾಲ ಡಿವಿಶನ್ ವ್ಯಾಪ್ತಿಯಲ್ಲಿರುವ SSF ಉಳ್ಳಾಲ ಸೆಕ್ಟರ್ ಮತ್ತು SSF ಮುಕ್ಕಚ್ಚೇರಿ ಶಾಖೆಯ ಸಹಭಾಗಿತ್ವದಲ್ಲಿ SSF D.K DIST BLOOD SAIBO ಇದರ 70ನೇ BLOOD CAMP

SSF ದ ಕ ಜಿಲ್ಲಾ ಸಮಿತಿಯ ಅಧೀನದಲ್ಲಿ ಕಾರ್ಯಚರಿಸುವ SSF D.K DIST BLOOD SAIBO ಇದರ 70ನೇ  BLOOD CAMP  ಇಂದು SSF ಉಳ್ಳಾಲ ಡಿವಿಶನ್ ವ್ಯಾಪ್ತಿಯಲ್ಲಿರುವ SSF ಉಳ್ಳಾಲ ಸೆಕ್ಟರ್ ಮತ್ತು SSF  ಮುಕ್ಕಚ್ಚೇರಿ ಶಾಖೆಯ ಸಹಭಾಗಿತ್ವದಲ್ಲಿ ಅತ್ಯಂತ ಯಶಸ್ವಿಯಾಗಿ ನಡೆಯಿತು.( ಅಲ್ ಹಂದುಲಿಲ್ಲಾಹ್).

 ಜಿಲ್ಲಾ ವ್ಯಾಪ್ತಿಯಲ್ಲಿರುವ ಸೆಕ್ಟರ್ ಗಳ ಪೈಕಿ ಅತೀ ಹೆಚ್ಚು ರಕ್ತವನ್ನು ಶೇಖರಿಸಿದ ಸೆಕ್ಟರ್ ಎಂಬ ಹೆಗ್ಗಳಿಕೆಗೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪಾತ್ರವಾಯಿತು.

ಇದಕ್ಕೆ ಬೇಕಾಗಿ ನಿಶ್ಕಳಂಕ ಮನಸ್ಸಿನಿಂದ ಕಾರ್ಯಚರಿಸಿದ SSF BLOOD SAIBO ಉಳ್ಳಾಲ ಸೆಕ್ಟರ್ ಉಸ್ತುವಾರಿ ಮುಹಮ್ಮದ್ ಕೈಕೋ, SSF ULLAL DIVISION BLOOD SAIBO ಡಿವಿಶನ್ ಉಸ್ತುವಾರಿ ಹಕೀಮ್ ಪೂಮನ್ನು, SSF ULLAL SECTOR ಸೆಕ್ಟರ್ ಉಸ್ತುವಾರಿ ಇಸ್ಮಾಯಿಲ್ ಕೆ.ಸಿ ನಗರ ರವರಿಗೆ ಅಭಿನಂದನೆಗಳು.

ಅಲ್ಲಾಹನು ಖಬೂಲ್ ಮಾಡಲಿ..
ಕಾರ್ಯಚರಿಸಿದ ಎಲ್ಲರಿಗೂ ಅಲ್ಲಾಹನು ತಕ್ಕ ಪ್ರತಿಫಲವನ್ನು ನೀಡಲಿ. (ಆಮೀನ್ ಯಾ ರಬ್ಬಲ್ ಆಲಮೀನ್)