Share To

Monday, 29 May 2017

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಶಾಲಾ ಬುಕ್ ವಿತರಣಾ ಕಾರ್ಯಕ್ರಮ

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಶಾಲಾ ಬುಕ್ ವಿತರಣಾ ಕಾರ್ಯಕ್ರಮ ಸೆಕ್ಟರ್ ಉಪಾಧ್ಯಕ್ಷರಾದ ಅತೀಖ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕಛೇರಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷರಾದ ಅಬೂ ಅನಸ್ ಜಮಾಲ್ ಉಸ್ತಾದ್ ದುವಾ ನೆರವೇರಿಸಿದರು. ಸಿರಾಜ್ ಉಸ್ತಾದ್ ಚಾಲಿಯಂ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಅಬೂ ಅನಸ್ ಜಮಾಲ್ ಉಸ್ತಾದ್ ಮಾತನಾಡಿ ಬಡ ಕುಟುಂಬದ ಶಾಲಾ ಮಕ್ಕಳಿಗೆ ಸ್ಕೂಲ್ ಬುಕ್ ಮುಂತಾದ ಅವರ ಕಲಿಕೆಗೆ ಆವಶ್ಯಕವಾಗುವ ವಸ್ತುಗಳನ್ನು ನೀಡಿ ಅವರ ಕಲಿಕೆಯುವಿಕೆಗೆ ಉತ್ತೇಜನ ನೀಡುವುದು ನಮ್ಮ ಬಾಧ್ಯತೆಯಾಗಿದೆ ಎಂದು ತಿಳಿಸಿ ಶಾಲಾ ಪುಸ್ತಕ ವಿತರಣೆಗೆ ಸಹಾಯ ಸಹಕಾರ ನೀಡಿದ ಸರ್ವರಿಗೂ ಪ್ರಾರ್ಥನೆ ನೆರವೇರಿಸಿದರು. ಬಳಿಕ ಅತೀಖ್ ಕೋಡಿ ಅಧ್ಯಕ್ಷತಾ ಭಾಷಣ ಮಾಡಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ ಜಿ ಹನೀಫ್ ಹಾಜಿ ಆಶಂಶಾ ಭಾಷಣ ಮಾಡಿದರು.
ಈ ಕಾರ್ಯಕೃಮದಲ್ಲಿ ಎಸ್ ವೈ ಎಸ್ ಕೋಡಿ ದೋಟ ಬ್ರಾಂಚ್ ಉಪಾಧ್ಯಕ್ಷರಾದ ಅಬ್ದುಲ್ ಅಝೀಝ್ ಸೀ ರೋಡ್ ಕೋಡಿ, ಉಳ್ಳಾಲ ನಗರಸಭಾ ಸದಸ್ಯ ಶೌಕತ್ ಆಝಾದ್ ನಗರ, ವಾರ್ತಾಭಾರತಿ ಜಾಹೀರಾತು ವಿಭಾಗದ ನಿರ್ವಹಣಾಧಿಕಾರಿ ಮೆಹರಲಿ ಪೇಟೆ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಜತೆ ಕಾರ್ಯದರ್ಶಿ ಶರೀಫ್ ಅಕ್ಕರೆಕೆರೆ, ಎಸ್ಸೆಸ್ಸೆಫ್ ಆಝಾದ್ ನಗರ ಕೋಶಾಧಿಕಾರಿ ಹಾಶಿಂ ಆಝಾದ್ ನಗರ ಹಾಗು ಫವಾಝ್ ಉಪಸ್ಥಿತರಿದ್ದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮೀಡಿಯ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಸ್ವಾಗತಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಜತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಕಾರ್ಯಕ್ರಮ ನಿರೂಪಿಸಿದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಧನ್ಯವಾದಗೈದರು

Tuesday, 23 May 2017

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ವಿದ್ಯಾರ್ಥಿಗಳ ಸಂಗಮ SBS ಸ್ಲೇಟ್ ಪ್ರೋಗ್ರಾಮ್

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ವಿದ್ಯಾರ್ಥಿಗಳ ಸಂಗಮ SBS ಸ್ಲೇಟ್ ಪ್ರೋಗ್ರಾಮ್ ಸೆಕ್ಟರ್ ಉಪಾಧ್ಯಕ್ಷರಾದ ಮುಹಮ್ಮದ್ ಮದನಿ ಹಳೆಕೋಟೆ ಇವರ ಅಧ್ಯಕ್ಷತೆಯಲ್ಲಿ ಇವರ ದುವಾದೊಂದಿಗೆ ಒಂಭತ್ತುಕೆರೆ ಶಾಲೆಯಲ್ಲಿ ನಡೆಯಿತು. ಎಸ್ ಬಿ ಎಸ್ ಉಳ್ಳಾಲ ಡಿವಿಷನ್ ಕನ್ವೀನರ್ ಮುಸ್ತಫ ಝುಹ್ರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಸ್ತಫ ಮಾಸ್ಟರ್ ತರಗತಿ ನಡೆಸಿದರು. ಉಳ್ಳಾಲ ಯೂತ್ ಕಾಂಗ್ರೆಸ್ ಉಪಾಧ್ಯಕ್ಷ ಯುವ ನಾಯಕ ಇಲ್ಯಾಸ್ ಬೊಟ್ಟು, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್, ಸೆಂಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಹಾಜರಾತಿಯಲ್ಲಿ SBS ಅಕ್ಕರೆಕೆರೆ ಶಾಖೆ ಪ್ರಥಮ ಸ್ಥಾನ ಪಡೆಯಿತು. SBS ಉಳ್ಳಾಲಬೈಲು ಬೊಟ್ಟು ಶಾಖೆ ದ್ವಿತೀಯ ಸ್ಥಾನ ಪಡೆಯಿತು. ಶಾಖಾ ಮಟ್ಟದಲ್ಲಿ ನಡೆದ SBS ಡ್ರೀಮ್ ಜಿಕೆ ಕಾರ್ಯಕ್ರಮದಲ್ಲಿ ಉಳ್ಳಾಲಬೈಲು ಬೊಟ್ಟು ಪ್ರಥಮ ಸ್ಥಾನ ಪಡೆಯಿತು. ಕೋಡಿ ದೋಟ ಶಾಖೆ ದ್ವಿತೀಯ ಸ್ಥಾನ ಪಡೆಯಿತು. ಶಾಖಾ ಮಟ್ಟದ ಕನ್ವೀನರುಗಳಲ್ಲಿ ಅತ್ಯುತ್ತಮ ಕನ್ವೀನರಾಗಿ ಅಕ್ಕರೆಕೆರೆ ಶಾಖೆಯ ಇರ್ಫಾನ್ ಆಯ್ಕೆಯಾದರು. ಬಳಿಕ ಪ್ರಶಸ್ತಿ ವಿತರಣೆ ನಡೆಯಿತು. ಇದೇ ಸಂದರ್ಭದಲ್ಲಿ ಉಳ್ಳಾಲ ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಾಗಿ ಆಯ್ಕೆಯಾದ ಯುವ ನಾಯಕ ಇಲ್ಯಾಸ್ ಬೊಟ್ಟು ಇವರಿಗೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಸನ್ಮಾನಿಸಲಾಯಿತು.
SBS ಉಳ್ಳಾಲ ಸೆಕ್ಟರ್ ಕನ್ವೀನರ್ ಮುಹಾಝ್ ಮೇಲಂಗಡಿ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಹಾಶಿಂ ಮೇಲಂಗಡಿ, ಫವಾಝ್ ಆಝಾದ್ ನಗರ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಸ್ವಾಗತಿಸಿ ಕೊನೆಗೆ ಧನ್ಯವಾದಗೈದರು.

Friday, 19 May 2017

ಎಸ್ಸೆಸ್ಸೆಫ್ ಉಳ್ಳಾಲ ಕೋಟೆಪುರ ಶಾಖಾ ಆಶ್ರಯದಲ್ಲಿ ರಮಳಾನ್ ಪೂರ್ವ ಸಿದ್ಧತಾ ತರಗತಿ ಮರ್ಹಬಾ ಯಾ ರಮಳಾನ್

ಎಸ್ಸೆಸ್ಸೆಫ್ ಉಳ್ಳಾಲ ಕೋಟೆಪುರ ಶಾಖಾ ಆಶ್ರಯದಲ್ಲಿ ರಮಳಾನ್ ಪೂರ್ವ ಸಿದ್ಧತಾ ತರಗತಿ ಮರ್ಹಬಾ ಯಾ ರಮಳಾನ್ ನಡೆಯಿತು. ಶಾಖಾಧ್ಯಕ್ಷರಾದ ಮುಝಮ್ಮಿಲ್ ಉಸ್ತಾದ್ ಅಧ್ಯಕ್ಷತೆ ವಹಿಸಿದರು. ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ ಸ್ವಾಗತಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ತರಗತಿ ನಡೆಸಿದರು. ಪ್ರಸ್ತುತ ಕಾರ್ಯಕ್ರಮದಲ್ಲಿ ಶಾಖಾ ಎಸ್ಸೆಸ್ಸೆಫ್ ಎಸ್ ವೈ ಎಸ್ ಕಾರ್ಯಕರ್ತರು ಭಾಗವಹಿಸಿದರು. ಶಾಖಾ ಜೊತೆ ಕಾರ್ಯದರ್ಶಿ ಸಾಹಿಲ್ ಧನ್ಯವಾದಗೈದರು.

Tuesday, 16 May 2017

ಎಸ್ಸೆಸ್ಸೆಫ್ ಉಳ್ಳಾಲ ಕೋಡಿ ದೋಟ ಶಾಖೆಯ ಆಶ್ರಯದಲ್ಲಿ ಎಸ್ ಬಿ ಎಸ್ ಮಕ್ಕಳ ಬಾಲ ಸಂಗಮ ಡ್ರೀಮ್ ಜಿಕೆ 2017

ಎಸ್ಸೆಸ್ಸೆಫ್ ಉಳ್ಳಾಲ ಕೋಡಿ ದೋಟ ಶಾಖೆಯ ಆಶ್ರಯದಲ್ಲಿ ಎಸ್ ಬಿ ಎಸ್ ಮಕ್ಕಳ ಬಾಲ ಸಂಗಮ ಡ್ರೀಮ್ ಜಿಕೆ 2017 ಶಾಖಾಧ್ಯಕ್ಷರಾದ ಹಾಶಿರ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ಕೋಡಿಯ ಶಾಖಾ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಶಾಖಾ ಕೋಶಾಧಿಕಾರಿ ಅತೀಖ್ ಕೋಡಿ ಉದ್ಘಾಟಿಸಿದರು. ಶಾಖಾಧ್ಯಕ್ಷ ಹಾಶಿರ್ ಮನದ ಮಾತು ತಿಳಿಸಿದರು. ಆಝಾದ್ ನಗರ ಶಾಖಾಧ್ಯಕ್ಷ ಹಾಫಿಝ್ ಮುಈನ್ ಉಸ್ತಾದ್, ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್ ಕೋಟೆಪುರ, ಮುಸ್ತಫ ಮದನಿ ಮುಡಿಪು, ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಹಾಗು ಎಸ್ ಬಿ ಎಸ್ ಉಳ್ಳಾಲ ಸೆಕ್ಟರ್ ಸಂಚಾಲಕ ಮುಹಾಝ್ ತರಗತಿ ನಡೆಸಿದರು. ಡ್ರೀಮ್ ಜಿಕೆಯ ಅಂಗವಾಗಿ ಮಕ್ಕಳಿಗೆ ಕ್ವಿಝ್, ಮೆಮೊರಿ ಟೆಸ್ಟ್, ಕಿರಾಅತ್, ರಿವರ್ಸ್ ಕೌಂಟಿಂಗ್ ಹಾಗು ಇಸ್ಲಾಮಿಕ್ ಹಾಡುಗಳ ಸ್ಪರ್ಧೆಯನ್ನು ಏರ್ಪಡಿಸಿ ವಿಜೇತ ಮಕ್ಕಳಿಗೆ ಪ್ರಥಮ ಹಾಗು ದ್ವಿತೀಯ ಬಹುಮಾನವನ್ನು ವಿತರಿಸಲಾಯಿತು ಹಾಗು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲಾ ಮಕ್ಕಳಿಗೂ ಪ್ರೋತ್ಸಾಹ ಬಹುಮಾನವನ್ನು ನೀಡಲಾಯಿತು.
ಬಳಿಕ ಎಸ್ ಬಿ ಎಸ್ ಇದರ ನೂತನ ಸಮಿತಿಯನ್ನು ರಚಿಸಲಾಯಿತು. ನೂತನಾಧ್ಯಕ್ಷರಾಗಿ ಸಾಹಿಲ್ ಯೂಸುಫ್, ಪ್ರಧಾನ ಕಾರ್ಯದರ್ಶಿಯಾಗಿ ಝಾಫಿಖ್ ರವರನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಶಾಖಾ ಪ್ರಧಾನ ಕಾರ್ಯದರ್ಶಿ ಹಫೀಝ್ ಕೋಡಿ, ಸಾದಾತ್ ಫಂಡ್ ಅಸೋಸಿಯೇಷನ್ ಕನ್ವೀನರ್ ಸಯ್ಯಿದ್ ಜವಾದ್ ತಂಗಳ್ ಉಪಸ್ಥಿತರಿದ್ದರು.