Share To

Sunday, 1 March 2020

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವಾರ್ಷಿಕ ಕೌನ್ಸಿಲ್


ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವಾರ್ಷಿಕ ಕೌನ್ಸಿಲ್ ದಿನಾಂಕ 29/02/2020 ರಂದು ತಾಜುಲ್ ಉಲಮಾ ಸುನ್ನೀ ಸೆಂಟರ್ ಮೇಲಂಗಡಿಯಲ್ಲಿ ಸೆಕ್ಟರ್ ಅಧ್ಯಕ್ಷ ರಾದ ಶಬೀರ್ ಪೇಟೆಯವರ ಅಧ್ಯಕ್ಷತೆಯಲ್ಲಿ ನಡೆಯಿತು. 


ಪ್ರಸ್ತುತ ಕಾರ್ಯಕ್ರಮದಲ್ಲಿ ಮುನೀರ್ ಅಹ್ಮದ್ ಖಾಮಿಲ್ ಸಖಾಫಿಯವರು ದುಆ ಮೂಲಕ ಚಾಲನೆ ನೀಡಿದರು ಡಿವಿಜನ್ ಅಧ್ಯಕ್ಷರಾದ  ಸೆಯ್ಯಿದ್ ಖುಭೈಬ್ ತಂಗಲ್ ರವರು ಉದ್ಘಾಟಿಸಿ ಮಾತನಾಡಿದರು "ಭಯ ಬಿಡಿ ಭರವಸೆ ಇಡಿ" ಎಂಬ ವಿಷಯದಲ್ಲಿ ಮುನೀರ್ ಅಹ್ಮದ್ ಖಾಮಿಲ್ ಸಖಾಫಿ ಉಸ್ತಾದ್ ತರಗತಿ ನಡೆಸಿಕೊಟ್ಟರು ನಂತರ ಕೋಶಾಧಿಕಾರಿ ಮುಝಮ್ಮಿಲ್ ಕೋಟೆಪುರರವರು ವಾರ್ಷಿಕ ಲೆಕ್ಕಪತ್ರ ಮಂಡಿಸಿದರು ನಂತರ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಮದನಿ ಕೋಟೆಪುರರವರು ವಾರ್ಷಿಕ ವರದಿ ವಾಚಿಸಿ ಸಭೆಯ ಅನುಮತಿಯೊಂದಿಗೆ ಅನುಮೋದಿಸಿದರು 

ನಂತರ ಸಭೆಯ ತೀರ್ಮಾನದಂತೆ ಪ್ರಸ್ತುತ ಸಮಿತಿಯನ್ನು ಬರ್ಖಾಸ್ತುಗೊಳಿಸಿ 2020-21ರ  ನೂತನ ಸಮಿತಿಯನ್ನು ಆಯ್ಕೆಮಾಡಲಾಯಿತು ನೂತನ ಸಮಿತಿಯ ಅಧ್ಯಕ್ಷರಾಗಿ ಹಂಝಾ ಸುಂದರಿಭಾಗ್  ಪ್ರಧಾನ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಮದನಿ ಕೋಟೆಪುರ ಕೋಶಾಧಿಕಾರಿಯಾಗಿ ಅತೀಕ್ ಕೋಡಿ ಉಪಾಧ್ಯಕ್ಷರಾಗಿ ಜಾಬಿರ್ ಉಸ್ತಾದ್ , ಹಾಫಿಲ್ ಮುಈನುದ್ದೀನ್ ರಝಾ ಅಲ್-ಅಮ್ಜದಿ ಅಝಾದ್ ನಗರ ಜೊತೆ ಕಾರ್ಯದರ್ಶಿಗಳಾಗಿ ತಶ್ರೀಫ್ ಮೇಲಂಗಡಿ ನಿಸಾರ್ ಸಖಾಫಿ ಮುಕ್ಕಚ್ಚೇರಿರವರು ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಿಹಾಂ ಮುಕ್ಕಚ್ಚೇರೀ ರೈನ್ ಬೋ  ಕನ್ವೀನರ್ ಆಗಿ  ಮುಹಾಝ್ ಮೇಲಂಗಡಿ.
ವಿಸ್ಡಂ ಕನ್ವೀನರ್ ಆಗಿ ಫೈಝಲ್ ಕೋಟೇಪುರ,ಮಹ್ಲರತುಲ್ ಬದ್ರಿಯ್ಯಾ ಮಜ್ಲಿಸ್ ಅಮೀರ್ ಆಗಿ ಸೈಫುಲ್ಲಾ ಸಖಾಫಿ ಮುಕಚ್ಚೇರಿರವರು  ,ಸಮಿತಿ ಸದಸ್ಯರುಗಳಾಗಿ ಸಯ್ಯಿದ್ ಖುಬೈಬ್ ತಂಙಳ್ ,ಮುನೀರ್ ಅಹ್ಮದ್ ಕಾಮಿಲ್ ಸಖಾಫಿ,ಶಬೀರ್ ಪೇಟೆ,ಮುಝಮ್ಮಿಲ್ ಕೋಟೇಪುರ,ಸಿರಾಜ್ ಅಕ್ಕರೆಕೆರೆ,ಇಮ್ರಾನ್ ಕೋಡಿ,ಶಿಹಾಬ್ ಪೇಟೆ.,ಶಫೀಕ್ ಹುಸೈನ್ ಮೇಲಂಗಡಿ,ನಿಝಾಮ್ ಒಂಭತ್ತುಕೆರೆ,ದಾವೂದ್ ಬೊಟ್ಟು,ರಿಲ್ವಾನ್ ಸುಂದರಿಬಾಗ್,ಹಮೀದ್ ಹಳೇಕೋಟೆ,ಹನೀಫ್ ಹಳೇಕೋಟೆ, ಸಲಾಂ ಹಳೇಕೋಟೆ ವೀಕ್ಷಕರಾಗಿ ಇಸ್ಮಾಯಿಲ್ ತಲಪಾಡಿ ಆಗಮಿಸಿದ್ದರು ಹಾಗೂ ಕಾರ್ಯಕ್ರಮದಲ್ಲಿ ಡಿವಿಜನ್ ಪ್ರಧಾನ ಕಾರ್ಯ ದರ್ಶಿ ಹಮೀದ್ ತಲಪಾಡಿ ಜೊತೆ ಕಾರ್ಯದರ್ಶಿ ಜಾಫರ್ ಯುಎಸ್ ಹಾಜರಿದ್ದರು ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಮದನಿ ಸ್ವಾಗತಿಸಿ ಧನ್ಯವಾದಗೈದರು.





Thursday, 27 February 2020

ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ವತಿಯಿಂದ ಅಧ್ಯಯನ ತರಗತಿ


ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ವತಿಯಿಂದ ಅಧ್ಯಯನ ತರಗತಿ ಹಾಫಿಝ್ ಆಶಿಖ್ ರವರ ಅಧ್ಯಕ್ಷತೆಯಲ್ಲಿ ಅಕ್ಕರೆಕೆರೆ ಶಾಖಾ ಕಛೇರಿಯಲ್ಲಿ ನಡೆಯಿತು. ಇರ್ಶಾದ್ ಹಿಮಮಿ ಉಸ್ತಾದ್ ತರಗತಿ ನಡೆಸಿದರು.
          ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ನಾಯಕರು, ಕಾರ್ಯಕರ್ತರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಆಶ್ರಯದಲ್ಲಿ ಮಾರ್ಚ್ 08 ಆದಿತ್ಯವಾರ ಇಶಾ ನಮಾಜು ಬಳಿಕ ನಡೆಯುವ ಬ್ರಹತ್ ಅಜ್ಮೀರ್ ಮೌಲೂದ್ ಮಜ್ಲಿಸ್ ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಅಕ್ಕರೆಕೆರೆ ನಾಯಕರು, ಸದಸ್ಯರು ಭಾಗವಹಿಸಿ ಯಶಸ್ವಿಗೊಳಿಸಬೇಕೆಂದು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ ಈ ಸಂದರ್ಭದಲ್ಲಿ ಕರೆಯಿತ್ತರು.