Share To

Friday, 14 October 2022

ತಾಜುಲ್ ಫುಖಹಾ ಫಿಕ್ಹ್ ಕ್ಲಾಸ್


ಉಳ್ಳಾಲ : ಎಸ್ ವೈ ಎಸ್ ಪಟ್ಲ ಬ್ರಾಂಚ್  ವತಿಯಿಂದ ಮಾಸಂಪ್ರತಿ ನಡೆಸುವ ತಾಜುಲ್  ಫುಖಹಾ ಫಿಕ್ಹ್ ಕ್ಲಾಸ್ ಎಸ್ಸೆಸ್ಸೆಫ್ ಪಟ್ಲ ಶಾಖಾ ಆಫೀಸ್ ಹಾಲಲ್ಲಿ ಜರುಗಿತು. ಬ್ರಾಂಚ್ ಉಸ್ತುವಾರಿ ನವಾಝ್ ಸಖಾಫಿ ಉಳ್ಳಾಲ ತರಗತಿ ನಡೆಸಿದರು.

ಬಳಿಕ ಪವಿತ್ರ ಉಮ್ರಾ ಯಾತ್ರೆಗೆ ಹೊರಡುವ  SYS ಪಟ್ಲ ಬ್ರಾಂಚಿನ ಅಧ್ಯಕ್ಷರು ಹಾಗೂ ದರ್ಗಾ ಸಮಿತಿ ಸದಸ್ಯರು ಆದ  ಮೊಯ್ದಿನಾಕ ಇವರಿಗೆ  ಎಸ್ ವೈ ಎಸ್ ಪಟ್ಲ ಬ್ರಾಂಚ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು. ಎಸ್ಸೆಸ್ಸೆಫ್ ಪಟ್ಲ ಶಾಖೆ ವತಿಯಿಂದ ಸ್ಮರಣಿಕೆ ನೀಡಿ ಗೌರವಿಸಿ ಸನ್ಮಾನಿಸಲಾಯಿತು.
ಪ್ರಸ್ತುತ ತರಗತಿಯಲ್ಲಿ ಎಸ್ ವೈ ಎಸ್, ಎಸ್ಸೆಸ್ಸೆಫ್ ಸದಸ್ಯರು ಉಪಸ್ಥಿತರಿದ್ದರು.