Share To

Sunday, 27 November 2016

ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಇಲೆಕ್ಷನ್ ಆಫೀಸರುಗಳಿಂದ ಎಸ್ಸೆಸ್ಸೆಫ್ ಉಳ್ಳಾಲ ಅಕ್ಕರೆಕೆರೆ ಶಾಖೆಗೆ ಭೇಟಿ

ಎಸ್ ಎಸ್ ಎಫ್ ಸದಸ್ಯತನ ಅಭಿಯಾನಕ್ಕೆ ಆವೇಶ ತುಂಬುತ್ತಾ ಶಾಖಾ ಕಾರ್ಯಕರ್ತರನ್ನು ಹುರಿದುಂಬಿಸುತ್ತಾ ಶಾಖಾ ಭೇಟಿ ಕಾರ್ಯಕ್ರಮವನ್ನು ಹಮ್ಮಿಕೊಂಡು ಉಳ್ಳಾಲ ಡಿವಿಷನಿನ ಅಧೀನದಲ್ಲಿರುವ ವಿವಿಧ ಶಾಖೆಗಳಿಗೆ ಭೇಟಿ ನೀಡಿದ ಉಳ್ಳಾಲ ಡಿವಿಷನಿನ ಪ್ರ ಕಾರ್ಯದರ್ಶಿ ಹಾಗು ಡಿವಿಷನ್ ಇಲೆಕ್ಷನ್ ಆಫಿಸರ್ ಇಸ್ಮಾಯಿಲ್ ಮಾಸ್ಟರ್,ಹಾಗು ಡಿವಿಷನ್ ಇಲೆಕ್ಷನ್ ಆಫೀಸರ್ಸ್ ಗಳಾದ ಸಯ್ಯಿದ್ ಖುಬೈಬ್ ತಂಗಳ್ ಮತ್ತು ಜಾಫರ್ ಅಳೇಕಲ ಉಳ್ಳಾಲದ ಅಕ್ಕರೆಕೆರೆ ಶಾಖಾ ನಾಯಕರನ್ನು ಇಂದು ನವಾಝ್ ಸಖಾಫಿ ಉಳ್ಳಾಲ ಇವರ ನಿವಾಸದಲ್ಲಿ ಭೇಟಿಯಾದರು.
             ಅಕ್ಕರೆಕೆರೆ ಶಾಖಾಧ್ಯಕ್ಷ ನವಾಝ್ ಸಖಾಫಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಾ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯಲ್ಲಿ ನಡೆಸಿದ ಸದಸ್ಯತನ ಅಭಿಯಾನದ ಮಾಹಿತಿ ನೀಡಿದರು.ಎಸ್ಸೆಸ್ಸೆಫ್ ತೊಕ್ಕೋಟು ಸೆಕ್ಟರ್ ಪ್ರ.ಕಾರ್ಯದರ್ಶಿ ಜಾಫರ್ ಅಳೇಕಲ ಪ್ರಾಸ್ತಾವಿಕವಾಗಿ ಮಾತನಾಡಿ ಇಂದು ಮುಸ್ಲಿಂ ಯುವ ಸಮೂಹವು ಕೆಡುಕಿನತ್ತ ವಾಲುತ್ತಿರುವಾಗ ಅವರಿಗೆ ಒಳಿತಿನ ಹಾದಿ ತೋರಿಸಿ ಕೊಡುವ ಸಂಘಟನೆಯಿದ್ದರೆ ಅದು ಎಸ್ಸೆಸ್ಸೆಫ್ ಮಾತ್ರವಾಗಿದೆ ಅಂದರು.ಡಿವಿಷನ್ ಪ್ರ.ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಅಕ್ಕರೆಕೆರೆ ಶಾಖಾ ಕಾರ್ಯಕರ್ತರ ಸೇವೆಯನ್ನು ಶ್ಲಾಘಿಸುತ್ತಾ ಇನ್ನಷ್ಟು ಸದಸ್ಯರನ್ನು ಎಸ್ಸೆಸ್ಸೆಫ್ ನಲ್ಲಿ ಸೇರ್ಪಡೆಯಾಗಿಸುವಿಕೆಯ ಕುರಿತು ಮಾಹಿತಿ ನೀಡಿ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.ಉಳ್ಳಾಲ ಸೆಕ್ಟರ್ ಅಧ್ಯಕ್ಷ ಹಾಗು ಡಿವಿಷನ್ ಎಲೆಕ್ಷನ್ ಆಫೀಸರೂ ಆದ ಸಯ್ಯಿದ್ ಖುಬೈಬ್ ತಂಗಳ್ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಹಿರಿಯ ಸುನ್ನೀ ಮೇಧಾವಿ ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಸದಸ್ಯರೂ ಆದ ಹಸನ್ ಹಾಜಿ,ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ಅಧ್ಯಕ್ಷ ಅಬ್ದುಲ್ ಮಜೀದ್ ಫರೀದ್ ನಗರ,ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರ ಕಾರ್ಯದರ್ಶಿ ಶರೀಫ್ ಅಕ್ಕರೆಕೆರೆ ಹಾಗು ಶಾಖಾ ಸದಸ್ಯ ಆಸಿಫ್ ಉಪಸ್ಥಿತರಿದ್ದರು.ಸೆಕ್ಟರ್ ಇಲೆಕ್ಷನ್ ಆಫೀಸರ್ ಸಿರಾಜುದ್ದೀನ್ ಸ್ವಾಗತಿಸಿ ಮುಝಯ್ಯಿನ್ ಅಕ್ಕರೆಕೆರೆ ಧನ್ಯವಾದಗೈದರು.

Monday, 14 November 2016

ಎಸ್ಸೆಸ್ಸೆಫ್ ಹಳೆಕೋಟೆ ಉಳ್ಳಾಲ..ಅಸ್ಸುಫ್ಫ ತರಗತಿಗೆ ಚಾಲನೆ.ಟಿಪ್ಪು ಸುಲ್ತಾನ್ ಖ.ಸಿ ಅನುಸ್ಮರಣೆ

ಎಸ್ಸೆಸ್ಸೆಫ್ ಹಳೆಕೋಟೆ ಶಾಖೆಯಿಂದ ಅಸ್ಸುಫ್ಫ ಉದ್ಘಾಟನಾ ಸಮಾರಂಭ ಶಾಖಾಧ್ಯಕ್ಷ ಮುಹಮ್ಮದ್ ಮದನಿ ಹಳೆಕೋಟೆ ಇವರ ಅಧ್ಯಕ್ಷತೆಯಲ್ಲಿ ಸ್ಟೂಡೆಂಟ್ಸ್ ಹೌಸ್ ಹಳೆಕೋಟೆಯಲ್ಲಿ ನಡೆಯಿತು.ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಅಸ್ಸುಫ್ಫ ಡಿವಿಶನ್ ಸಂಚಾಲಕ ಮುನೀರ್ ಸಖಾಫಿ ಉಳ್ಳಾಲ ವಿಷಯ ಮಂಡಿಸಿ ಅಸ್ಸುಫ್ಫ ತರಗತಿಗೆ ಚಾಲನೆ ನೀಡಿದರು.ಸೆಕ್ಟರ್ ಉಪಾಧ್ಯಕ್ಷ ಅಬು ಸುಹಾನ ನವಾಝ್ ಸಖಾಫಿ ಉಳ್ಳಾಲ ಹಾಗು ಸೆಕ್ಟರ್ ಅಸ್ಸುಫ್ಫ ಸಂಚಾಲಕ ಮುಝಮ್ಮಿಲ್ ಉಸ್ತಾದ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಎಸ್ಸೆಸ್ಸೆಫ್ ಸದಸ್ಯತನ ಅಭಿಯಾನದ ಕುರಿತು ಮಾಹಿತಿ ನೀಡಿದರು.
ಹಮೀದ್ ಹಳೆಕೋಟೆ,ಇಮ್ರಾನ್ ಹಳೆಕೋಟೆ ಹಾಗು ಇನ್ನಿತರ ಶಾಖಾ ನಾಯಕರು ಉಪಸ್ಥಿತರಿದ್ದರು.ಶಾಖಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಸ್ವಾಗತಿಸಿ ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದಗೈದರು.ಇದಕ್ಕೂ ಮೊದಲು ನವಂಬರ್ ಹತ್ತರಂದು ಹಳೆಕೋಟೆಯಲ್ಲಿ ಟಿಪ್ಪು ಸುಲ್ತಾನ್ ಅನುಸ್ಮರಣಾ ಕಾರ್ಯಕ್ರಮ ವಿಜ್ರಂಭಣೆಯಿಂದ ಆಚರಿಸಲಾಯಿತು.

ಎಸ್ಸೆಸ್ಸೆಫ್ ಒಂಭತ್ತುಕೆರೆ ಶಾಖೆಯಿಂದ ಅಸ್ಸುಫ್ಫ ಉದ್ಘಾಟನಾ ಸಮಾರಂಭ ಹಾಗು ಟಿಪ್ಪುಸುಲ್ತಾನ್ ಖ.ಸಿ ಅನುಸ್ಮರಣಾ ಕಾರ್ಯಕ್ರಮ

ಎಸ್ಸೆಸ್ಸೆಫ್ ಒಂಭತ್ತುಕೆರೆ ಶಾಖೆಯಿಂದ ಅಸ್ಸುಫ್ಫ ಉದ್ಘಾಟನಾ ಸಮಾರಂಭ ಹಾಗು ಟಿಪ್ಪು ಸುಲ್ತಾನ್ ಖ.ಸಿ ಅನುಸ್ಮರಣಾ ಕಾರ್ಯಕ್ರಮ ಶಾಖಾಧ್ಯಕ್ಷ ಇಖ್ಬಾಲ್ ಒಂಭತ್ತುಕೆರೆ ರವರ ಅಧ್ಯಕ್ಷತೆಯಲ್ಲಿ ಅಹ್ಸನ್ ಪ್ಲಾಝಾ ದಲ್ಲಿ ನಡೆಯಿತು.ಸೆಕ್ಟರ್ ಅಸ್ಸುಫ್ಫ ಸಂಚಾಲಕ ಮುಝಮ್ಮಿಲ್ ಉಸ್ತಾದ್ ಕೋಟೆಪುರ ದುವಾ ನೆರವೇರಿಸಿದರು.ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಕಾರ್ಯಕ್ರಮ ಉದ್ಘಾಟಿಸಿದರು.ಮುಖ್ಯ ಅತಿಥಿಯಾಗಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ,ಕೋಶಾಧಿಕಾರಿ ಇಲ್ಯಾಸ್ ಕೈಕೋ,ಯು ಟಿ ತೌಸೀಫ್ ಒಂಭತ್ತುಕೆರೆ ಹಾಗು ಅಹ್ಸನ್ ಒಂಭತ್ತುಕೆರೆ ಉಪಸ್ಥಿತರಿದ್ದರು.ನಿಝಾಂ ಒಂಭತ್ತುಕೆರೆ ಸ್ವಾಗತಿಸಿ ತನ್ವೀರ್ ಧನ್ಯವಾದಗೈದರು.

Wednesday, 9 November 2016

SEDC ಸ್ಫಟಿಕ ಸಂಭ್ರಮ ಮಹಾ ಸಮ್ಮೇಳನ ಯಶಸ್ವಿಗೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಹಾಗು ಇದರ ಅಧೀನ ಶಾಖೆಗಳು ಕರೆ

ಎಸ್ ಇ ಡಿ ಸಿ ಸ್ಫಟಿಕ ಸಂಭ್ರಮ ಸಮಾರೋಪ ಸಮ್ಮೇಳನ ಯಶಸ್ವಿಗೆ ಕರೆ.

ನವಂಬರ್ 12 ರಂದು ಮಂಗಳೂರು ನೆಹರೂ ಮೈದಾನದಲ್ಲಿ ನಡೆಯುವ ಆಕರ್ಷಕ ಮುಅಲ್ಲಿಂ ಮಸೀರ ಪಾದಯಾತ್ರೆ,ಶೈಕ್ಷಣಿಕ ಸೆಮಿನಾರ್ ಹಾಗು ಸನ್ಮಾನ ಸಮಾರಂಭ ಮತ್ತು ಸ್ಫಟಿಕ ಸಂಭ್ರಮದ ಸಮಾರೋಪ ಸಾರ್ವಜನಿಕ ಮಹಾ ಸಮ್ಮೇಳನವನ್ನು ಯಶಸ್ವಿಗೊಳಿಸುವಂತೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಹಾಗು ಇದರ ಅಧೀನದ ಎಲ್ಲಾ ಶಾಖೆಗಳು ಕರೆ ನೀಡಿದೆ.
ಸಭೆಯ ಅಧ್ಯಕ್ಷತೆಯನ್ನು ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ವಹಿಸಿದರು.ಸಭೆಯಲ್ಲಿ ಉಸ್ಮಾನ್ ಸಖಾಫಿ ಪೊಳಲಿ,ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ,ಮುಹಮ್ಮದ್ ಮದನಿ ಹಳೆಕೋಟೆ,ಅಬೂ ಸುಹಾನ ನವಾಝ್ ಸಖಾಫಿ ಉಳ್ಳಾಲ,ಮುಝಮ್ಮಿಲ್ ಕೋಟೆಪುರ,ಮನ್ಸೂರ್ ಹಳೆಕೋಟೆ ಹಾಗು ಇಲ್ಯಾಸ್ ಕೈಕೋ ಉಪಸ್ಥಿತರಿದ್ದರು

Saturday, 5 November 2016

ಎಸ್ ಎಸ್ ಎಫ್ ಉಳ್ಳಾಲ ಡಿವಿಷನ್ ಹಮ್ಮಿಕೊಂಡ ಮಾನವತಾ ಸಂಚಲನಾ ಬೈಕ್ ರ್‍ಯಾಲಿ ಗೆ ಹರಿದು ಬಂದ ಸುನ್ನೀ ಸೇನಾನಿಗಳು.ನವಂಬರ್ 12 ರಂದು ನಡೆಯಲಿರುವ ಸ್ಫಟಿಕ ಸಂಭ್ರಮ ಸಮಾರೋಪ ಮಹಾ ಸಮ್ಮೇಳನದ ಪ್ರಚಾರಾರ್ಥ,ಅಲ್ ಮದೀನ ಹುಬ್ಬುರ್ರಸೂಲ್ ಕಾಂಫರೆನ್ಸ್ ಪ್ರಚಾರಾರ್ಥ ಹಾಗು ಐತಿಹಾಸಿಕ ಕರ್ನಾಟಕ ಯಾತ್ರೆಯ ಸವಿ ನೆನಪಿಗಾಗಿ ಮತ್ತು ತ್ರಿವಳಿ ತಲಾಕ್ & ಸಮಾನ ನಾಗರಿಕ ಸಂಹಿತೆ ವಿರೋಧಿಸಿ ಹಮ್ಮಿಕೊಂಡ ಬೈಕ್ ರ್‍ಯಾಲಿ.ಕೆಲವೊಂದು ಫೋಟೋಗಳು.ಲಿಂಕ್ ಓಪನ್ ಮಾಡಿ.

*SSFಜಿಲ್ಲಾದ್ಯಕ್ಷ ಹಾಫಿಳ್ ಯಾಕೂಬ್ ಸಅದಿ @ತೊಕ್ಕೊಟ್ಟು*

ಮಂಗಳೂರು: ಇಂದು ಉಳ್ಳಾಲ ಡಿವಿಷನ್ ವತಿಯಿಂದ ತಲಪಾಡಿ  to ತೊಕ್ಕೊಟ್ಟು ನಡೆದ ಬೈಕ್ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾಡಿದ  ಭಾಷಣದಲ್ಲಿ ಶರೀಅತ್ ಕಾನೂನಿನಲ್ಲಿ ಹಸ್ತಕ್ಷೇಪ,ತ್ರಿವಳಿ ತಲಾಖ್,ಗೋವಧೆ ,ಸ್ಕಾರ್ಪ್ ವಿವಾದ ಮುಂತಾದ ಪ್ರಚಲಿತ ವಿಷಯಗಳನ್ನು ಪ್ರತಿಪಾದಿಸಿದರು.

*ಭಾಷಣದ ಕೆಲವೊಂದು ತುಣುಕುಗಳು*

1)ಸಮಾನ ನಾಗರಿಕ ಸಂಹಿತೆ ಜಾರಿಯು ಭಾರತದ ಅನೇಕತೆಯಲ್ಲಿ ಏಕತೆ ಎನ್ನುವ ಆಶಯಕ್ಕೆ ಧಕ್ಕೆಯಾಗಲಿದೆ.  

2)ಏಕಸಿವಿಲ್ ಕೋಡ್ ಯಾವ ಧರ್ಮದ ಆಧಾರದಲ್ಲಿ ಜಾರಿಗೊಳಿಸುತ್ತೀರಿ?ಅಥವಾ ಬೆಲ್ಲಗಂಜಿ (ಚಕ್ಕರಕಂಞಿ )ಯಂತೆ ಎಲ್ಲ ಧರ್ಮದಿಂದ ಸ್ವಲ್ಪ ಸ್ವಲ್ಪ ಸೇರಿಸಿ ಕೊಂಡು ಮಾಡುತ್ತೀರಾ? ?    

3)ಮೋದಿ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿ ಹಾಕಲು ಮಾಡಿರುವ ರಾಜಕೀಯ ಗಿಮಿಕ್ಕು ಶರೀಅತ್ ಕಾನೂನಿನಲ್ಲಿನ ಹಸ್ತಕ್ಷೇಪ  

4)ಸಂವಿಧಾನದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯು ನಿರ್ದೇಶಕ ತತ್ತ್ವ ಗಳಲ್ಲಿ ಮಾತ್ರ ಸೇರಿಸಲಾಗಿದ್ದು ಇದಕ್ಕಿಂತ  ಪರಿಚ್ಚೇದ 25,26 ಗಳಲ್ಲಿ ಹೇಳಲಾಗಿರುವ ಧಾರ್ಮಿಕ ಸ್ವಾತಂತ್ರ್ಯವು ಮಿಗಿಲಾದುದು. 

5)ಕೇಂದ್ರ ಆಡಳಿತದಲ್ಲಿರುವ ಪಕ್ಷವು ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ  ಸಮಾನ ಶ್ರೇಣಿ, ಸಮಾನ ವೇತನ ಜಾರಿಗೊಳಿಸುತ್ತೇವೆಂದು ಹೇಳಿದರು ಇಷ್ಟರ ತನಕ ಅದನ್ನು ಮಾಡಿಲ್ಲ .ಸಮಾನ ನಾಗರಿಕ ಸಂಹಿತೆ ಜಾರಿಯನ್ನು ಬಿಟ್ಟು ಸಮಾನ ಶ್ರೇಣಿ ಸಮಾನ ವೇತನ ಜಾರಿಗೊಳಿಸಿ     

6)ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎನ್ನುವವರು ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾಗ ಅಲ್ಲಿನ ಎಷ್ಟೋ ಮಹಿಳೆಯರಿಗೆ ಅನ್ಯಾಯವಾಗಿದ್ದರೂ ಇಷ್ಟರ ತನಕ ಅವರಿಗೆ ಯಾಕೆ ನ್ಯಾಯ ಕೊಟ್ಟಿಲ್ಲ? ?   

7)ಪ್ರಧಾನ ಮಂತ್ರಿಯವರೇ ಕನಿಷ್ಠ ಪಕ್ಷ ಕಳೆದ ಪಾರ್ಲಿಮೆಂಟ್ ವೋಟ್ ಸಮಯದಲ್ಲಿ ತನ್ನನ್ನು ಮತ್ತೆ ಕರೆದರೆ ಪತಿಯೊಂದಿಗೆ ಸಂಸಾರ ನಡೆಸಲು ಸಿದ್ಧ ಎಂದಿದ್ದ ಯಶೋಧಬೆನ್ಗಾದರೂ ಯಾಕೆ ನ್ಯಾಯ ಕೊಟ್ಟಿಲ್ಲ? ? ಸಾದ್ಯವಿದ್ದರೆ ಈ ದೇಶದ ಜನತೆಯಲ್ಲಿ ಡೈವೋರ್ಸ್, ತಲಾಖ್, ಕುಟುಂಬ ಕಲಹದಿಂದಾಗಿ ಆತ್ಮಹತ್ಯೆ, ಇದರ ಬಗ್ಗೆ ಅಧ್ಯಯನ ನಡೆಸಿ ಆಗ ಗೊತ್ತಾಗುತ್ತದೆ ಯಾರಿಗೆ ಅನ್ಯಾಯ ಆಗಿದೆ ಯಾರು ನೆಮ್ಮದಿಯಿಂದ ಇದ್ದಾರೆ.    

8)ಇಸ್ಲಾಮಿಕ್ ಶರೀಅತ್ ನಲ್ಲಿ ಎಲ್ಲ ಕಾನೂನು ವಿಧಿಗಳು ಸಂಪೂರ್ಣವಾಗಿದೆ.ಅದರಲ್ಲಿ ತಿದ್ದುಪಡಿ ಮಾಡಲು ಉಲಮಾಗಳಿಗು ಕೂಡ ಅವಕಾಶ ಇಲ್ಲದಂತೆ ಅಷ್ಟೊಂದು ಸುಭದ್ರವಾಗಿದೆ.ಆದುದರಿಂದ ಶರೀಅತ್ ಕಾನೂನಿನಲ್ಲಿ ಯಾರಿಗೂ  ಹಸ್ತಕ್ಷೇಪ ಮಾಡಲು ನಮ್ಮ ಕೊನೆಯುಸಿರಿನ ತನಕ ಬಿಡುವುದಿಲ್ಲ.

9) ಮುಸ್ಲಿಂ ವಿಧ್ಯಾರ್ಥಿನಿಯರು ಸ್ಕಾರ್ಪ್ ಧರಿಸುವ ವಿಚಾರವನ್ನು ಮುಂದಿಟ್ಟು ಆಗಾಗ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು ಸ್ಕಾರ್ಪ್ ಬುರ್ಖಾವನ್ನು ಯಾವುದೋ ಲಾಭಕ್ಕಾಗಿ ಅಥವಾ ಹಠಮಾರಿತನಕ್ಕಾಗಿ  ಮುಸ್ಲಿಂ ಮಹಿಳೆಯರು ಧರಿಸುತ್ತಿಲ್ಲ ಬದಲು ಧರ್ಮದ ಆಚರಣೆಯನ್ನು ಪಾಲಿಸುತ್ತಿದ್ದಾರಷ್ಟೆ.ಅದಕ್ಕೆ ಭಾರತದ ಸಂವಿಧಾನವು ಸ್ವಾತಂತ್ರ್ಯ ವನ್ನು ನೀಡಿದೆ  ಇದನ್ನು ಯಾರಿಂದಲೂ ಕಬಳಿಸಲು ಸಾಧ್ಯವಿಲ್ಲ.

10)ಗೋಮಾಂಸದ ವಿಚಾರವನ್ನು ಮುಂದಿಟ್ಟು ರಾಜಕೀಯ ಬೇಳೆ ಬೇಯಿಸುತ್ತಿರುವ ಪಕ್ಷದವರೇ ತಾಕತ್ತಿದ್ದರೆ ವಿದೇಶಕ್ಕೆ ಗೋಮಾಂಸ ರಫ್ತು ಮಾಡುವುದನ್ನು ನಿಲ್ಲಿಸಿ ಆಗ ನಿಮ್ಮ ಅಸಲಿಯತ್ತು ಗೊತ್ತಾಗುತ್ತದೆ.

11) ಟಿಪ್ಪು ಜಯಂತಿ ಆಚರಣೆ ಯನ್ನು ಅವರೊಬ್ಬ ವಿದೇಶಿಯಾಗಿದ್ದರು ಎನ್ನುವಂತಹ ಕಾರಣಗಳನ್ನು ಮುಂದಿಟ್ಟು ವಿರೋಧಿಸುವವರೇ ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರಲ್ಲಿ ಕೆಲವರು ಎಲ್ಲಿ ಹುಟ್ಟಿದವರೆಂದು ಅವಲೋಕನ ಮಾಡಿಕೊಳ್ಳುವುದು ಒಳ್ಳೆಯದು.

12) ಇಷ್ಟಕ್ಕೂ ಮುಸಲ್ಮಾನರ ಮೇಲೆ ಆಗಾಗ ದಾಳಿ ಮಾಡುತ್ತಿರಲು ಕಾರಣವಾದರೂ ಏನು? ಅವರು ನಮ್ಮ ಜಲ ನೆಲಕ್ಕೆ ಗೌರವ ಕೊಡುತ್ತಿಲ್ಲವೇ? ನೈಜ ಮುಸಲ್ಮಾನನೊಬ್ಬ ದಿನವೊಂದಕ್ಕೆ 5 ಬಾರಿ ನಮಾಝಿನಲ್ಲಿ 34 ಸಲ ತನ್ನ ಪವಿತ್ರ ಶಿರಸ್ಸನ್ನು ಭೂಮಿ ಮೇಲಿಡುತ್ತಾನೆ.ಮತ್ಯಾರು ಇದನ್ನು ಮಾಡುತ್ತಾರೆ ?

13)ಮರಣ ಹೊಂದಿರುವ ವ್ಯಕ್ತಿಯನ್ನು ಧಫನ ಮಾಡುವಾಗಲು ಮುಸ್ಲಿಮರ ಮಂತ್ರ  ನೀನು ಇದೇ ಮಣ್ಣಿಣಿಂದ ಹುಟ್ಟಿ ಇದೇ ಮಣ್ಣಲ್ಲಿ ಮರಳಿ  ಹೋಗುತ್ತಿದ್ದೀಯಾ ಎನ್ನುವುದಾಗಿದೆ...

ಆದುದರಿಂದ ಯಾರು ಮುಸ್ಲಿಮರ ದೇಶಪ್ರೇಮದ ಬಗ್ಗೆ ಡೌಟ್ ಮಾಡುವ ಅಗತ್ಯವಿಲ್ಲ.            

ಸಂಕ್ಷಿಪ್ತ ಸಂಗ್ರಹ ವೋಯ್ಸಿನಿಂದ

Wednesday, 2 November 2016

ಎಸ್ಸೆಸ್ಸೆಫ್ ಕೋಡಿ ಕೋಟೆಪುರ.ಅಸ್ಸುಫ್ಫ ತರಗತಿ ಉದ್ಘಾಟನಾ ಸಮಾರಂಭ

ಎಸ್ ಎಸ್ ಎಫ್ ಕೋಡಿ ಕೋಟೆಪುರ ಶಾಖೆಯ ಆಶ್ರಯದಲ್ಲಿ ಅಸ್ಸುಫ್ಫ ತರಗತಿಗೆ ಕೋಡಿ ಎಸ್ಸೆಸ್ಸೆಫ್ ಕಛೇರಿಯಲ್ಲಿ ಚಾಲನೆ ನೀಡಲಾಯಿತು.
ಉಳ್ಳಾಲ ಸೆಕ್ಟರ್ ಅಸ್ಸುಫ್ಫ ಸಂಚಾಲಕ ಮುಝಮ್ಮಿಲ್ ಉಸ್ತಾದ್ ಕಾರ್ಯಕ್ರಮ ಉದ್ಘಾಟಿಸಿದರು.ಅಶ್ರಫ್ ಸಖಾಫಿ ಕುರ್ನಾಡು ಅಸ್ಸುಫ್ಫ ತರಗತಿಗೆ ಚಾಲನೆ ನೀಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ಇರ್ಫಾನ್ ಕೋಟೆಪುರ,ಮುಝಮ್ಮಿಲ್ ಕೋಟೆಪುರ ಹಾಗು ಅತೀಕ್ ಕೋಡಿ ಉಪಸ್ಥಿತರಿದ್ದರು.

Tuesday, 1 November 2016

ಮೇಲಂಗಡಿ ಉಳ್ಳಾಲ,ಅಸ್ಸುಫ್ಫ ತರಗತಿಗೆ ಚಾಲನೆ

ಎಸ್ ಎಸ್ ಎಫ್ ಮೇಲಂಗಡಿ ಶಾಖೆಯಿಂದ ಅಸ್ಸುಫ್ಫ ತರಗತಿಗೆ ಶಾಖಾಧ್ಯಕ್ಷ ಶಫೀಖ್ ಮೇಲಂಗಡಿ ರವರ ಅಧ್ಯಕ್ಷತೆಯಲ್ಲಿ ಫಿರ್ದೌಸ್ ಅಪಾರ್ಟ್ಮೆಂಟ್ ನಲ್ಲಿ ಚಾಲನೆ ನೀಡಲಾಯಿತು.
ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಕೋಶಾಧಿಕಾರಿ ಬಶೀರ್ ಸಖಾಫಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು.ವಾರದ ನಾಲ್ಕು ದಿನಗಳಲ್ಲಿ ತರಗತಿಯು ನಡೆಯುತ್ತಿದ್ದು ಬಶೀರ್ ಸಖಾಫಿ ತರಗತಿಗೆ ನೇತ್ರತ್ವ ನೀಡುತ್ತಿದ್ದಾರೆ.
ಮೇಲಂಗಡಿ ಶಾಖಾ ಕಾರ್ಯದರ್ಶಿ ತಶ್ರೀಫ್,ಆಸಿಂ ಉಪಸ್ಥಿತರಿದ್ದರು.