Share To

Friday, 31 March 2017

ಉಳ್ಳಾಲಬೈಲು ಬೊಟ್ಟು : ಮೆಸೇಜ್ ಆಫ್ ರಜಬ್ ಸಂಗಮ






ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ಆಶ್ರಯದಲ್ಲಿ ಮೆಸೇಜ್ ಆಫ್ ಹೋಲಿ ರಜಬ್ ಸಂಗಮ ಶಾಖಾಧ್ಯಕ್ಷ ಇಸ್ಮಾಯಿಲ್ ನವಾಝ್ ಯು.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಬೈಲು ಬೊಟ್ಟು ವಿಗೆ ನೂತನ ಉಸ್ತುವಾರಿಯಾಗಿ ಆಯ್ಕೆಯಾದ ಶಾಹುಲ್ ಹಮೀದ್ ಜೌಹರಿ ಅಕ್ಕರೆಕೆರೆ ರಜಬ್ ಸಂದೇಶ ತರಗತಿ ನಡೆಸಿದರು. ಈ ಸಂದರ್ಭದಲ್ಲಿ ಜೌಹರಿ ಉಸ್ತಾದಿಗೆ ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ವತಿಯಿಂದ ಶಾಲುಹೊದಿಸಿ ಸನ್ಮಾನಿಸಲಾಯಿತು. ಬಳಿಕ ರಿಯಾಝ್ ಉಸ್ತಾದ್ ರವರ ಮೇಲೆ ತಹ್ಲೀಲ್ ಸಮರ್ಪಿಸಲಾಯಿತು.
ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ, ಶಫೀಖ್ ಮೇಲಂಗಡಿ, ಖಲೀಲ್ ಉಳ್ಳಾಲಬೈಲು, ದಾವೂದ್ ಹಾಗು ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು.  ಜೊತೆ ಕಾರ್ಯದರ್ಶಿ ಹಪೀಝ್ ಬೊಟ್ಟು ಸ್ವಾಗತಿಸಿ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಯುಬಿ ಧನ್ಯವಾದಗೈದರು.

Thursday, 30 March 2017

ಆಝಾದ್ ನಗರ : ರಜಬ್ ಸಂದೇಶ ಉದ್ಘಾಟನಾ ಸಮಾರಂಭ ಹಾಗು ರಿಯಾಝ್ ಉಸ್ತಾದ್ ಮೇಲೆ ತಹ್ಲೀಲ್ ಸಮರ್ಪಣೆ




ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ಶಾಖಾ ರಜಬ್ ಸಂದೇಶ ಉದ್ಘಾಟನಾ ಸಮಾರಂಭ ಮಾಸ್ತಿಕಟ್ಟೆ ಆಝಾದ್ ನಗರದ ಮುಸ್ತಫ ಪ್ಯಾಲೇಸ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಖಾಧ್ಯಕ್ಷರಾದ ಹಾಫಿಝ್ ಮುಈನ್ ಉಸ್ತಾದ್ ರಜಬ್ ತಿಂಗಳ ಇಪ್ಪತ್ತೇಳರಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೂಲಕ ನಡೆದ ಚಾರಿತ್ರಿಕ ಘಟನೆಯಾದ ಇಸ್ರಾಅ್ ಮಿಹ್ರಾಜಿನ ಕುರಿತು ತಿಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ರಜಬ್ ಸಂದೇಶ ತರಗತಿಗೆ ಚಾಲನೆ ನೀಡಿದರು. ಬಳಿಕ ಇತ್ತೀಚೆಗೆ ಕಾಸರಗೋಡಿನ ಚೂರಿ ಮಸೀದಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ರಿಯಾಝ್ ಉಸ್ತಾದ್ ಮೇಲೆ ತಹ್ಲೀಲ್ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ಶಾಖಾಧ್ಯಕ್ಷ ಇಸ್ಮಾಯಿಲ್ ಯು.ಬಿ, ಕೋಟೆಪುರ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ, ಕೋಡಿ ಶಾಖಾ ಪ್ರಧಾನ ಕಾರ್ಯದರ್ಶಿ ಹಾಗು ಆಝಾದ್ ನಗರ ಉಸ್ತುವಾರಿ ಹಫೀಝ್ ಕೋಡಿ, ಒಂಭತ್ತುಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ನಿಝಾಂ ಒಂಭತ್ತುಕೆರೆ, ಆಝಾದ್ ನಗರ ಶಾಖಾ ಉಪಾಧ್ಯಕ್ಷ ಅತಾವುಲ್ಲಾಹ್, ಫವಾಝ್, ರಶಾದ್ ಹಾಗು ಆಝಾದ್ ನಗರ ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು. ಆಝಾದ್ ನಗರ ಶಾಖಾ ಪ್ರಧಾನ ಕಾರ್ಯದರ್ಶಿ ಮುಝಫ್ಫರ್ ಸ್ವಾಗತಿಸಿ ಕಾರ್ಯಕ್ರಮದ ಕೊನೆಗೆ ಧನ್ಯವಾದಗೈದರು.


Wednesday, 29 March 2017

ಉಳ್ಳಾಲಬೈಲು ಬೊಟ್ಟು : ಬೀಳ್ಕೊಡುಗೆ ಸಮಾರಂಭ

ಪವಿತ್ರ ಉಮ್ರಃ ಝಿಯಾರತ್ ಬಯಸಿ ಯಾತ್ರೆ ಹೊರಟ ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ಶಾಖೆ ಇದರ ಜೊತೆ ಕಾರ್ಯದರ್ಶಿ ಸಾಹಿಲ್ ಇವರಿಗೆ ಬೀಳ್ಕೊಡುಗೆ ಸಮಾರಂಭ ಶಾಖಾಧ್ಯಕ್ಷ ಇಸ್ಮಾಯಿಲ್ ಯು.ಬಿ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ದುವಾ ನೆರವೇರಿಸಿ ಸಾಹಿಲ್ ಇವರಿಗೆ ಶುಭ ಹಾರೈಸಿದರು.ಈ ಸಂರ್ಭದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಹಾಗು ಉಳ್ಳಾಲಬೈಲು ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಸ್ವಾಗತಿಸಿ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಯು.ಬಿ ಧನ್ಯವಾದಗೈದರು

Tuesday, 28 March 2017

ಹಳೆಕೋಟೆ : ರಿಯಾಝ್ ಉಸ್ತಾದ್ ರವರ ಮೇಲೆ ತಹ್ಲೀಲ್ ಮಜ್ಲೀಸ್ ಮತ್ತು ರಜಬ್ ಸಂದೇಶ ತರಗತಿ

ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ವತಿಯಿಂದ ಮರ್ಹೂಂ ರಿಯಾಝ್ ಉಸ್ತಾದ್ ರವರ ಮೇಲೆ ತಹ್ಲೀಲ್ ಮಜ್ಲೀಸ್ ಮತ್ತು ರಜಬ್ ಸಂದೇಶ ತರಗತಿ ಶಾಖಾ ಉಪಾಧ್ಯಕ್ಷ ತೌಸೀಫ್ ಎಸ್ ಬಿ ಇವರ ಅಧ್ಯಕ್ಷತೆಯಲ್ಲಿ ಹಳೆಕೋಟೆಯ ಎಸ್ಸೆಸ್ಸೆಫ್ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು.
ಹಳೆಕೋಟೆ ಶಾಖಾ ಉಸ್ತುವಾರಿ ತಶ್ರೀಫ್ ಮೇಲಂಗಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಹಳೆಕೋಟೆ ತಹ್ಲೀಲ್ ಸಂಗಮದಲ್ಲಿ ನೇತ್ರತ್ವ ವಹಿಸಿ ದುವಾ ನೆರವೇರಿಸಿದರು. ಸುನ್ನೀವಾಣಿ ಸಂಪಾದಕ ಯೂನುಸ್ ಇಮ್ದಾದಿ ರಜಬ್ ಸಂದೇಶ ತರಗತಿಗೆ ಚಾಲನೆ ನೀಡಿದರು.
ಶಾಖಾ ಉಪಾಧ್ಯಕ್ಷರುಗಳಾದ ಹಮೀದ್ ಮತ್ತು ತೌಸೀಫ್, ಜೊತೆ ಕಾರ್ಯದರ್ಶಿಗಳಾದ ಹಕೀಮ್ ಮತ್ತು ಇಬ್ರಾಹೀಂ, ಬಾಶಿತ್, ಫಾರೀಷ್, ಶಾಹಿದ್, ಸಂಶೀರ್,ಹಫೀಲ್, ಅಕೀಲ್ , ಇಜಾಝ್,ಬಾರಿಝ್, ಶಕೀಲ್ ಹಾಗು ಇತರರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

ಸುಂದರಭಾಗ್ : ಸಮಿತಿ ಸಭೆ

ಎಸ್ಸೆಸ್ಸೆಫ್ ಸುಂದರಭಾಗ್ ಶಾಖಾ ಸಮಿತಿ ಸಭೆ ಶಾಖಾಧ್ಯಕ್ಷ ಸಯೀದ್ ಅಬೂಬಕರ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಹಂಝ ಯು.ಬಿ ದುವಾ ನೆರವೇರಿಸಿದರು. ಸಭಾಧ್ಯಕ್ಷರು ಉದ್ಘಾಟಿಸಿದರು. ಶಾಖಾ ಪ್ರಧಾನ ಕಾರ್ಯದರ್ಶಿ ಸಯೀದ್ ಅಫ್ರಿದಿ ಸ್ವಾಗತಿಸಿ ಸೈಫುಲ್ಲಾಹ್ ಧನ್ಯವಾದಗೈದರು. ಎಲ್ಲಾ ಸಮಿತಿ ಸದಸ್ಯರು ಭಾಗವಹಿಸಿದ್ದರು

Monday, 27 March 2017

ಉಳ್ಳಾಲ ಸೆಕ್ಟರ್ : ಸ್ನೇಹ ಸಮ್ಮಿಲನ ಕಾರ್ಯಕ್ರಮ





ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಸ್ನೇಹ ಸಮ್ಮಿಲನ ಕಾರ್ಯಕ್ರಮ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಸುಂದರಭಾಗಿನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಶರೀಫ್ ಮುಡಿಪು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ಕೋಶಾಧಿಕಾರಿ ತೌಸೀಫ್ ಸಅದಿ ಹರೇಕಳ ತರಗತಿ ನಡೆಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಡಿಪು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮದ್ಯನಡ್ಕ ಹಾಗು ಕೋಣಾಜೆ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಅಬೂಸ್ವಾಲಿಹ್ ಹರೇಕಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಹಳೆಕೋಟೆ, ಮುಡಿಪು ಉಸ್ತುವಾರಿ ಹಂಝ ಸುಂದರಭಾಗ್, ಉಳ್ಳಾಲ ಸೆಕ್ಟರ್ ಜೊತೆ ಕಾರ್ಯದರ್ಶಿ ಇಕ್ಬಾಲ್ ಒಂಭತ್ತುಕೆರೆ, ಎಸ್ ಬಿ ಎಸ್ ಉಳ್ಳಾಲ ಝೋನ್ ಸಂಚಾಲಕ ಮುಹಾಝ್ ಬಂಡಿಕೊಟ್ಯ, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಫಾಳಿಲ್ ಮೇಲಂಗಡಿ, ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಅಸ್ಸುಫ್ಫ ಅಮೀರ್ ಶಾಹುಲ್ ಹಮೀದ್ ಜೌಹರಿ, ಅಕ್ಕರೆಕೆರೆ ಶಾಖಾಧ್ಯಕ್ಷ ಸಿರಾಜುದ್ದೀನ್, ಮೇಲಂಗಡಿ ಶಾಖಾ ಪ್ರಧಾನ ಕಾರ್ಯದರ್ಶಿ ತಶ್ರೀಫ್, ಒಂಭತ್ತುಕೆರೆ ಶಾಖಾಧ್ಯಕ್ಷ ತೌಸೀಫ್ ಒಂಭತ್ತುಕೆರೆ, ಕೋಟೆಪುರ ಶಾಖೆ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ ಉಪಸ್ಥಿತರಿದ್ದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಧನ್ಯವಾದಗೈದರು.

Saturday, 25 March 2017

ಅಕ್ಕರೆಕೆರೆ : ರಜಬ್ ಸಂದೇಶ ಉದ್ಘಾಟನಾ ಸಮಾರಂಭ ಹಾಗು ಎಸ್ ವೈ ಎಸ್ ನಾಯಕರಿಗೆ ಅಭಿನಂದನಾ ಸಮಾರಂಭ 24-03-2017




ಎಸ್ಸೆಸ್ಸೆಫ್ ಉಳ್ಳಾಲ ಅಕ್ಕರೆಕೆರೆ ಶಾಖೆಯ ಆಶ್ರಯದಲ್ಲಿ ರಜಬ್ ಸಂದೇಶ ಉದ್ಘಾಟನಾ ಸಮಾರಂಭ ಹಾಗು ಎಸ್ ವೈ ಎಸ್ ನಾಯಕರಿಗೆ ಅಭಿನಂದನಾ ಸಮಾರಂಭ ಶಾಖಾಧ್ಯಕ್ಷ ಸಿರಾಜುದ್ದೀನ್ ರವರ ಅಧ್ಯಕ್ಷತೆಯಲ್ಲಿ ಅಕ್ಕರೆಕೆರೆಯ ಸ್ಟೂಡೆಂಟ್ಸ್ ಹೌಸ್ ನಲ್ಲಿ ಜರುಗಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿ ಮಾತನಾಡುತ್ತಾ ಅಕ್ಕರೆಕೆರೆ ಶಾಖೆಯು ರಜಬ್ ಸಂದೇಶ ಕಾರ್ಯಕ್ರಮವನ್ನು ಉಳ್ಳಾಲ ಸೆಕ್ಟರಿನ ಉಳಿದ ಶಾಖೆಗಳಿಗಿಂತ ಮುಂಚೆ ಹಮ್ಮಿಕೊಂಡು ಉಳಿದ ಶಾಖೆಗಳಿಗೆ ಮಾದರಿಯಾಗಿದೆ ಎಂದರು. ಎಸ್ಸೆಸ್ಸೆಫ್ ಮಂಜನಾಡಿ ಸೆಕ್ಟರ್ ಅಧ್ಯಕ್ಷ ಇಬ್ರಾಹಿಂ ಅಹ್ಸನಿ ಮಂಜನಾಡಿ ರಜಬ್ ಮಾಸ ಏನು ಸಂದೇಶ ನೀಡುತ್ತಿದೆ ಎಂಬುದನ್ನು ಸವಿಸ್ತಾರವಾಗಿ ವಿವರಿಸಿ ರಜಬ್ ಸಂದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.




ಬಳಿಕ ಎಸ್ಸೆಸ್ಸೆಫ್ ಸಂಘಟನೆಯಲ್ಲಿರಬೇಕಾದ ಕಾಲಾವಧಿ ಮುಗಿದು ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯಿಂದ ಎಸ್ ವೈ ಎಸ್ ಗೆ ಪಾದಾರ್ಪಣೆಗೈದ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಬಶೀರ್ ಸಖಾಫಿ ಉಳ್ಳಾಲ, ಎಸ್ ಎಂ ಶರೀಫ್ ಅಕ್ಕರೆಕೆರೆ, ಖಾಲಿದ್ ಪಟೇಲ್ ಕಂಪೌಂಡ್, ಅಶ್ರಫ್ ಅಕ್ಕರೆಕೆರೆ ಗುಡ್ಡೆ ಇವರಿಗೆ ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ವತಿಯಿಂದ ಅಭಿನಂದನಾ ಪತ್ರವನ್ನು ನೀಡಿ ಗೌರವಿಸಲಾಯಿತು. ಹಾಗು ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ನೂತನ ಉಸ್ತುವಾರಿಯಾಗಿ ಆಯ್ಕೆಯಾದ ಒಂಭತ್ತುಕೆರೆ ಶಾಖಾಧ್ಯಕ್ಷ ತೌಸೀಫ್ ಒಂಭತ್ತುಕೆರೆ ಇವರನ್ನು ಶಾಲುಹೊದಿಸಿ ಸನ್ಮಾನಿಸಲಾಯಿತು.





ಈ ಸಂದರ್ಭದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಸಿದ್ದೀಕ್ ಅಕ್ಕರೆಕೆರೆ, ಆಸಿಂ ಅಕ್ಕರೆಕೆರೆ ಗುಡ್ಡೆ ಹಾಗು ಯೂನುಸಾಕ ಉಪಸ್ಥಿತರಿದ್ದರು. ಶಾಖಾ ಪ್ರಧಾನ ಕಾರ್ಯದರ್ಶಿ ಆಸಿಫ್ ಅಕ್ಕರೆಕೆರೆ ಸ್ವಾಗತಿಸಿ ಕಾರ್ಯಕ್ರಮದ ಕೊನೆಗೆ ವಂದಿಸಿದರು.