Saturday, 24 June 2017
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಪೆರ್ನಾಲ್ ಕಿಟ್ ವಿತರಣೆ
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಧಾರ್ಮಿಕ, ಸಾಂಘಿಕ ಹಾಗು ಸಾಮುದಾಯಿಕ ಕಾರ್ಯಕ್ರಮಗಳು ನಡೆದು ಬರುತ್ತಿರುವುದಲ್ಲದೆ ಬಡನಿರ್ಗತಿಕರ ಅನಾಥರ ಹಾಗು ವಿಧವೆಯರ ಕಣ್ಣೀರೊರೆಸುವ ಸಾಂತ್ವನ ಕಾರ್ಯಕ್ರಮಗಳನ್ನೂ ನಡೆಸಿಕೊಂಡು ಬರಲಾಗುತ್ತಿದೆ. ಇದರ ಒಂದು ಭಾಗವಾಗಿ ಉಳ್ಳಾಲ ಮತ್ತು ಸುತ್ತಮುತ್ತಲಿನ 50 ಅರ್ಹ ಬಡ ಕುಟುಂಬಗಳಿಗೆ ಈದ್ ಕಿಟ್ ವಿತರಿಸಲಾಗುತ್ತಿದೆ ಎಂದು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ತಿಳಿಸಿದರು. ಅವರು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಉಳ್ಳಾಲ ಆಝಾದ್ ನಗರದ ಇಸ್ಲಾಮಿಕ್ ನಾಲೇಜ್ ಸೆಂಟರಿನಲ್ಲಿ ನಡೆದ ಈದ್ ಕಿಟ್ ವಿತರಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಸ್ತುವಾರಿ ತೌಸೀಫ್ ಸಅದಿ ಹರೇಕಳ ಮಾತನಾಡಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ಕಾರ್ಯ ವೈಖರಿಯು ತುಂಬಾ ಉತ್ತಮವಾಗಿದ್ದು ರಾಜ್ಯದಲ್ಲೇ ಮಾದರೀ ಸೆಕ್ಟರ್ ಆಗಿ ಕೆಲಸ ನಿರ್ವಹಿಸುತ್ತಿದೆ ಎಂದು ಶ್ಲಾಘಿಸಿದರು. ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷರಾದ ಅಬೂ ಅನಸ್ ಜಮಾಲ್ ಉಸ್ತಾದ್ ಹಾಗು ಮುಖ್ಯ ಅತಿಥಿಯಾಗಿ ಆಗಮಿಸಿದ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ ಜಿ ಹನೀಫ್ ಹಾಜಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ತಲಾ ಮೂರು ಕಿಟ್ ಗಳಂತೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಹನ್ನೊಂದು ಶಾಖೆಗಳ ಬಡ ಕುಟುಂಬಗಳಿಗೆ ವಿತರಿಸಿದ 33 ಕಿಟ್ ಗಳು ಹಾಗು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ 17 ಕುಟುಂಬಗಳಿಗೆ ವಿತರಿಸಿದ ಕಿಟ್ಟು ಗಳು ಸಹಿತ 50 ಈದ್ ಕಿಟ್ಟು ಗಳನ್ನು ವಿತರಿಸಲಾಯಿತು. ಈ ಸಂದರ್ಭದಲ್ಲಿ ರಾಜ್ಯ ಇಹ್ಸಾನ್ ಸಹಾಯ ಫಂಡ್ ಇದರ ಪೋಸ್ಟರನ್ನು ಪ್ರದರ್ಶಿಸಲಾಯಿತು ಹಾಗು ಪ್ರತೀ ಶಾಖೆಯಿಂದ ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಇದರ ರಾಜ್ಯ ನಿಧಿಗೆ ಹಸ್ತಾಂತರಿಸಲಾಗುವ ಫಂಡನ್ನು ಸೆಕ್ಟರ್ ಉಸ್ತುವಾರಿಯಾದ ತೌಸೀಫ್ ಸಅದಿ ಹರೇಕಳ ರವರ ಮೂಲಕ ಹಸ್ತಾಂತರಿಸಲಾಯಿತು. ಕಾರ್ಯಕ್ರಮದ ಪ್ರಾರಂಭದಲ್ಲಿ ಆಝಾದ್ ನಗರ ಶಾಖಾಧ್ಯಕ್ಷರಾದ ಹಾಫಿಝ್ ಮುಈನ್ ಉಳ್ಳಾಲ ಇವರ ನೇತ್ರತ್ವದಲ್ಲಿ ಸ್ವಲವಾತ್ ಇಜ್ತಿಮಾ, ದ್ಸಿಕ್ರ್ ಮಜ್ಲಿಸ್ ನಡೆಯಿತು. ಸಯ್ಯಿದ್ ಖುಬೈಬ್ ತಂಗಳ್ ಅಧ್ಯಕ್ಷತೆ ವಹಿಸಿ ಮಾತನಾಡಿ ಉಳ್ಳಾಲ ಮತ್ತು ಆಸುಪಾಸಿನ ಅರ್ಹ ಬಡ ಕುಟುಂಬಗಳಿಗೆ ಮಾಸಿಕ ಅಕ್ಕಿ ವಿತರಣೆ, ರಂಝಾನ್ ಕಿಟ್ ವಿತರಣೆ, ಮದುವೆಗೆ ಸಹಾಯ ಮುಂತಾದ ಸಾಂತ್ವನ ಕಾರ್ಯಕ್ರಮಗಳನ್ನು ಎಸ್ಸೆಸ್ಸೆಫ್ ಮತ್ತು ಎಸ್ ವೈ ಎಸ್ ಅಧೀನದ ಸಾಂತ್ವನ ವಿಭಾಗ ನಡೆಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಸಾಂತ್ವನ ವಿಭಾಗದ ಕೋಶಾಧಿಕಾರಿ ತ್ವಾಹಿರ್ ಹಾಜಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕೋಶಾಧಿಕಾರಿ ಹಮೀದ್ ತಲಪಾಡಿ, ಮಂಗಳೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಿಝಾಮುದ್ದೀನ್, ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್, ಸಿರಾಜ್ ಉಸ್ತಾದ್ ಚಾಲಿಯಂ, ಹಾಫಿಝ್ ಉವೈಸ್ ಕೋಟೆಪುರ, ಸಾದಾತ್ ಫಂಡ್ ಅಸೋಸಿಯೇಷನ್ ಕನ್ವೀನರ್ ಸಯ್ಯಿದ್ ಜವಾದ್ ತಂಗಳ್, ಸೆಕ್ಟರ್ ಉಪಾಧ್ಯಕ್ಷ ಅತೀಖ್ ಕೋಡಿ, ಸೆಕ್ಟರ್ ಜತೆ ಕಾರ್ಯದರ್ಶಿಗಳಾದ ಹಂಝ ಸುಂದರಿಭಾಗ್ ಮತ್ತು ಇಕ್ಬಾಲ್ ಒಂಭತ್ತುಕೆರೆ, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಖಾದರ್, ಮೇಲಂಗಡಿ ಶಾಖಾ ಪ್ರಧಾನ ಕಾರ್ಯದರ್ಶಿ ತಶ್ರೀಫ್, ಒಂಭತ್ತುಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ನಿಝಾಂ, ಕೋಡಿ ಶಾಖಾ ಪ್ರಧಾನ ಕಾರ್ಯದರ್ಶಿ ಹಫೀಝ್, ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಉಪಾಧ್ಯಕ್ಷ ಅಬ್ದುಲ್ಲತೀಫ್, ಶರೀಫ್ ಅಕ್ಕರೆಕೆರೆ, ಕಬೀರ್, ಹನೀಫ್ ಖಿಲ್ರಿಯ, ಇಮ್ರಾನ್ ಕೋಟೆಪುರ ಹಾಗು ಶಫೀಖ್ ಮೇಲಂಗಡಿ ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಧನ್ಯವಾದಗೈದರು.
Tuesday, 20 June 2017
ಎಸ್ಸೆಸ್ಸೆಫ್ ಕೋಡಿ ದೋಟ ಶಾಖಾ ಆಶ್ರಯದಲ್ಲಿ ಇಫ್ತಾರ್ ಕೂಟ ಹಾಗು ಬೀಳ್ಕೊಡುಗೆ ಸಮಾರಂಭ
ಎಸ್ಸೆಸ್ಸೆಫ್ ಕೋಡಿ ದೋಟ ಶಾಖಾ ಆಶ್ರಯದಲ್ಲಿ ಇಫ್ತಾರ್ ಕೂಟ ಹಾಗು ಬೀಳ್ಕೊಡುಗೆ ಸಮಾರಂಭ ಶಾಖಾಧ್ಯಕ್ಷರಾದ ಹಾಶಿರ್ ಕೋಡಿ ಇವರ ಅಧ್ಯಕ್ಷತೆಯಲ್ಲಿ ಜರುಗಿತು.
ಸುನ್ನೀವಾಣಿ ಸಂಪಾದಕರಾದ ಯೂನುಸ್ ಇಮ್ದಾದಿ ತರಗತಿ ನಡೆಸಿದರು. ಈ ಸಂದರ್ಭದಲ್ಲಿ ಕೆಲಸ ನಿಮಿತ್ತ ವಿದೇಶ ಯಾತ್ರೆ ಹೊರಟ ಕೋಟೆಪುರ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ ಇವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಕೋಡಿ ದೋಟ ಶಾಖಾ ಪ್ರಧಾನ ಕಾರ್ಯದರ್ಶಿ ಹಫೀಝ್ ಕೋಡಿ, ಅಬ್ದುಲ್ ಹಮೀದ್ ಮದನಿ ಕೈಕೋ, ಎಸ್ ವೈ ಎಸ್ ಕೋಡಿ ದೋಟ ಬ್ರಾಂಚ್ ಉಪಾಧ್ಯಕ್ಷರಾದ ಅಬ್ದುಲ್ ಅಝೀಝ್ ಕೋಡಿ ಸೀ ರೋಡ್ ಹಾಗು ಎಸ್ಸೆಸ್ಸೆಫ್ ಎಸ್ ವೈ ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು.
Saturday, 17 June 2017
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕ್ಯಾಂಪಸ್ ವತಿಯಿಂದ ಇಫ್ತಾರ್ ಮೀಟ್ ಹಾಗು ವಿದೇಶ ಯಾತ್ರೆ ಹೊರಡುತ್ತಿರುವ ನೌಫಲ್ ಕೋಟೆಪುರ ಇವರಿಗೆ ಬೀಳ್ಕೊಡುಗೆ
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕ್ಯಾಂಪಸ್ ವತಿಯಿಂದ ಇಫ್ತಾರ್ ಮೀಟ್ ಹಾಗು ವಿದೇಶ ಯಾತ್ರೆ ಹೊರಡುತ್ತಿರುವ ನೌಫಲ್ ಕೋಟೆಪುರ ಇವರಿಗೆ ಬೀಳ್ಕೊಡುಗೆ
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕ್ಯಾಂಪಸ್ ವತಿಯಿಂದ ಇಫ್ತಾರ್ ಮೀಟ್ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಇವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಪೇಟೆಯ ಪುರಸಭೆ ಸಮುದಾಯಭವನದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಆಝಾದ್ ನಗರ ಶಾಖಾಧ್ಯಕ್ಷರಾದ ಹಾಫಿಝ್ ಮುಈನ್ ಉಳ್ಳಾಲ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೊಳಿಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದರು. ಕೆಲಸ ನಿಮಿತ್ತ ವಿದೇಶ ಯಾತ್ರೆ ಹೊರಡುತ್ತಿರುವ ಸೆಕ್ಟರ್ ಮಾಜಿ ಕ್ಯಾಂಪಸ್ ಕಾರ್ಯದರ್ಶಿ ಹಾಗು ಹಾಲಿ ಎಸ್ಸೆಸ್ಸೆಫ್ ಕೋಟೆಪುರ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ ಇವರಿಗೆ ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಹಾಗು ಸೆಕ್ಟರ್ ಕ್ಯಾಂಪಸ್ ವತಿಯಿಂದ ಸನ್ಮಾನಿಸಿ ಬೀಳ್ಕೊಡಲಾಯಿತು.
ಪ್ರಸ್ತುತ ಇಫ್ತಾರ್ ಸಂಗಮದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಎಸ್ಸೆಸ್ಸೆಫ್ ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್, ಉದಯೋನ್ಮುಖ ವಾಗ್ಮಿ ಹಾಫಿಝ್ ಉವೈಸ್ ಕೋಟೆಪುರ, ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ತೊಕ್ಕೋಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ, ಕ್ಯಾಂಪಸ್ ಕನ್ವೀನರ್ ಫಾಳಿಲ್ ಮೇಲಂಗಡಿ, ಸೆಕ್ಟರ್ ಎಸ್ ಬಿ ಎಸ್ ಸಂಚಾಲಕ ಮುಹಾಝ್, ಸೆಕ್ಟರ್ ಉಪಾಧ್ಯಕ್ಷ ಅತೀಖ್ ಕೋಡಿ, ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು, ಹಳೆಕೋಟೆ ಶಾಖಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ, ಮೇಲಂಗಡಿ ಶಾಖಾ ಪ್ರಧಾನ ಕಾರ್ಯದರ್ಶಿ ತಶ್ರೀಫ್, ಕೋಡಿ ಶಾಖಾ ಪ್ರಧಾನ ಕಾರ್ಯದರ್ಶಿ ಹಫೀಝ್ ಕೋಡಿ, ಒಂಭತ್ತುಕೆರೆ ಪ್ರಧಾನ ಕಾರ್ಯದರ್ಶಿ ನಿಝಾಂ ಒಂಭತ್ತುಕೆರೆ, ಪೇಟೆ ಪ್ರಧಾನ ಕಾರ್ಯದರ್ಶಿ ಫಾಶಿರ್ ಹಾಗು ಎಸ್ಸೆಸ್ಸೆಫ್ ಕ್ಯಾಂಪಸ್ ವಿದ್ಯಾರ್ಥಿಗಳು ಭಾಗವಹಿಸಿದರು
ವರದಿ : ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Subscribe to:
Posts (Atom)
