ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಾಳೆಗೊಂದು ನೆರಳು ಎಂಬ ಧ್ಯೇಯ ವಾಕ್ಯದೊಂದಿಗೆ ಸಸಿ ವಿತರಣಾ ಕಾರ್ಯಕ್ರಮ ಆಝಾದ್ ನಗರದ ಸೆಕ್ಟರ್ ಕಛೇರಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸಾಗುವಾನಿ, ನೇರಳೆ, ಮಹಾಗನಿ, ಹಲಸು, ನೆಲ್ಲಿಕಾಯಿ ಇತ್ಯಾದಿ ಅಮೂಲ್ಯ ಗಿಡಗಳನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ವಿತರಿಸಿ ಚಾಲನೆ ನೀಡಿದರು. ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷರಾದ ಅಬೂ ಅನಸ್ ಜಮಾಲ್ ಉಸ್ತಾದ್ ದುವಾ ನೆರವೇರಿಸಿದರು. ತ್ವಯ್ಬಃ ವಿಮೆನ್ಸ್ ಸ್ಟಡಿ ಸೆಂಟರ್ ಮುಖ್ಯಸ್ಥ ಮುಸ್ತಫ ಮಾಸ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸ್ಲೇಟ್ ಕ್ಯಾಂಪ್ ನಲ್ಲಿ ದ್ವಿತೀಯ ಸ್ಥಾನ ಪಡೆದ ಎಸ್ಸೆಸ್ಸೆಫ್ ಕೋಡಿ ದೋಟ ಶಾಖೆಗೆ ಈ ವೇಳೆ ಟ್ರೋಫಿ ಹಸ್ತಾಂತರ, ರಾಜ್ಯ ಸಮಿತಿ ಫಂಡ್ ಗೆ ಚಾಲನೆ, ರಾಜ್ಯ ಇಹ್ಸಾನ್ ಸಮಾಲೋಚನಾ ಸಭೆ ಹಾಗು ಲೀಡರ್ಸ್ ಮೀಟ್ ಈ ವೇಳೆ ನಡೆಯಿತು.
ಈ ಸಂದರ್ಭದಲ್ಲಿ ಸೆಕ್ಟರ್ ಉಪಾಧ್ಯಕ್ಷ ಅತೀಖ್ ಕೋಡಿ, ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ, ವಾರ್ತಾಭಾರತಿ ಜಾಹಿರಾತು ವಿಭಾಗದ ವಕ್ತಾರ ಮೆಹರಲಿ ಪೇಟೆ, ಸೆಕ್ಟರ್ ಎಸ್ ಬಿ ಎಸ್ ಸಂಚಾಲಕ ಮುಹಾಝ್, ಅಝೀಂ ಮುಕ್ಕಚ್ಚೇರಿ, ಇಸ್ಮಾಯಿಲ್ ಉಳ್ಳಾಲಬೈಲು, ಅಫ್ರಿದ್ ಸುಂದರಿಭಾಗ್, ಫಾಶಿರ್ ಪೇಟೆ, ಮುಝಮ್ಮಿಲ್ ಉಸ್ತಾದ್ ಕೋಟೆಪುರ, ಸಿರಾಜ್ ಉಸ್ತಾದ್ ಚಾಲಿಯಂ, ತಶ್ರೀಫ್ ಮೇಲಂಗಡಿ, ಹಾಶಿರ್ ಕೋಡಿ ಹಾಗು ಹಂಝ ಪೆಪ್ಸಿ ಉಪಸ್ಥಿತರಿದ್ದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿದರು. ಸೆಕ್ಟರ್ ಜತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಧನ್ಯವಾದಗೈದರು.
Tuesday, 6 June 2017
ನಾಳೆಗೊಂದು ನೆರಳು : ಸಸಿ ವಿತರಣಾ ಕಾರ್ಯಕ್ರಮ
Subscribe to:
Post Comments (Atom)
No comments:
Post a Comment