Share To

Monday, 10 July 2017

ಮೇಲಂಗಡಿ : ಮಾಸಿಕ ಜಲಾಲಿಯ್ಯಃ ರಾತೀಬ್ ಮಜ್ಲಿಸ್

ಎಸ್ಸೆಸ್ಸೆಫ್  ಮೇಲಂಗಡಿ ಶಾಖೆ ಮತ್ತು ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಜಂಟಿ ಆಶ್ರಯದಲ್ಲಿ ಆದಿತ್ಯವಾರ (09/07/2017) ಮಗ್ರಿಬ್ ನಮಾಝಿನ ಬಳಿಕ ಸಯ್ಯಿದ್ ಮುಷ್ತಾಕುರ್ರಹ್ಮಾನ್ ತಂಙಳ್ ರವರ ನೇತೃತ್ವದೊಂದಿಗೆ ಜಲಾಲಿಯ್ಯ ರಾತೀಬ್ ಮಜ್ಲಿಸ್  ನಡೆಸಲಾಯಿತು.
ಮಜ್ಲಿಸ್ ನಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸೆಯ್ಯಿದ್ ಖುಬೈಬ್ ತಂಙಳ್, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷ ಬಶೀರ್ ಸಖಾಫಿ ,ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಜಮಾಲುದ್ದೀನ್ ಮುಸ್ಲಿಯಾರ್ , ಮುಸ್ತಫಾ ಮಾಸ್ಟರ್, ಕರೀಂ ಹಾಜಿ ಮೇಲಂಗಡಿ ,ಇಸ್ಹಾಕ್ ,ಸತ್ತಾರ್ ಹಳೆಕೋಟೆ, ಶಬೀರ್ ಪೇಟೆ, ಇಲ್ಯಾಸ್ ಕೈಕೊ,ಅಝೀಝ್ ಕೋಡಿ,ಅಬ್ದುಲ್ ಖಾದರ್, ಯೂಸುಫ್ ಹಾಜಿ ಮಿಲ್ಲತ್ ನಗರ, ಅಕ್ಬರ್,ಸತ್ತಾರ್ ,ನವಾಝ್ , ಶಾಖಾ ಉಸ್ತುವಾರಿ ತಾಜುದ್ದೀನ್ ಹಳೆಕೋಟೆ, ಇಮ್ರಾನ್, ಕಾರ್ಯದರ್ಶಿ ತಶ್ರೀಫ್, ಶಫೀಕ್, ಫಾಳಿಲ್, ಹಫೀಝ್ ಬೊಟ್ಟು, ಸಿರಾಜ್ ಅಕ್ಕರೆಕೆರೆ, ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಇಸ್ಮಾಯಿಲ್ ಹಾಜಿ ಮುಕ್ಕಚ್ಚೇರಿ ,ಝಿಯಾದ್ ,ಬಹ್ಲೂಲ್, ಇರ್ಫಾನ್ ಇನ್ನಿತರ ಮಂದಿ ಉಪಸ್ಥಿತರಿದ್ದರು.

ಜಾಫರ್ ಮತ್ತು ಜಾಬಿರ್ ಇವರಿಗೆ ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖಾ ವತಿಯಿಂದ ವಿವಾಹಾಶಂಶೆ

ಕೋಟ್ಯಾನುಕೋಟಿ ನಿರೀಕ್ಷೆಯೊಂದಿಗೆ ದಾಂಪತ್ಯ ಹೊಸ್ತಿಲು ದಾಟಿದ ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖಾ ಕಾರ್ಯಕರ್ತರಾದ ಜಾಫರ್ ಮತ್ತು ಜಾಬಿರ್ ಇವರಿಗೆ ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖಾ ವತಿಯಿಂದ ಸ್ಮರಣಿಕೆ ನೀಡಿ ಶುಭಹಾರೈಸಲಾಯಿತು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ, ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್, ಸೆಕ್ಟರ್ ಉಪಾಧ್ಯಕ್ಷರಾದ ಮಿಕ್ದಾದ್ ಮುಕ್ಕಚ್ಚೇರಿ, ಸಯ್ಯಿದ್ ಮದನಿ ದರ್ಗಾ ಇದರ ಸಮಿತಿ ಸದಸ್ಯ ಅಬ್ದುಲ್ ಖಾದರ್ ಕೋಡಿ, ಮುಕ್ಕಚ್ಚೇರಿ ಶಾಖಾ ಪ್ರಧಾನ ಕಾರ್ಯದರ್ಶಿ ಅಝೀಂ ಮುಕ್ಕಚ್ಚೇರಿ ಹಾಗು ಅಬ್ದುಲ್ಲಾಹ್ ಒಂಭತ್ತುಕೆರೆ ಉಪಸ್ಥಿತರಿದ್ದರು.

Monday, 3 July 2017

ಜಾಮಿಅ ಅಮ್ಜದಿಯ್ಯಃ ಕ್ಕೆ ತೆರಳುತ್ತಿರುವ ಹಾಫಿಝ್ ಮುಈನ್ ಉಳ್ಳಾಲ ಇವರಿಗೆ ಬೀಳ್ಕೊಡುಗೆ

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ಸಕ್ರಿಯ ಕಾರ್ಯಕರ್ತರು ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ಶಾಖಾಧ್ಯಕ್ಷರು ಹಾಗು ಅಹ್ಲುಸ್ಸುನ್ನಃದ ಮುಂಚೂಣಿ ನಾಯಕರೂ ಆದ ಹಾಫಿಝ್ ಮುಈನ್ ಉಳ್ಳಾಲ ( 03 - 07 -2017 ) ಇಂದು ರಾತ್ರಿ ಭಾರತದ ಉನ್ನತ ವಿದ್ವಾಂಸಗಳಲ್ಲೋರ್ವರಾದ ಅಲ್ಲಾಮಃ ಝಿಯಾವುಲ್ ಮುಸ್ತಫ ಅಲ್ ಖಾದ್ರಿ ಇವರ ನೇತ್ರತ್ವದ ಉತ್ತರಪ್ರದೇಶದ ಮಾವು ಜಿಲ್ಲೆಯ ಘೋಸಿ ಪಟ್ಟಣದಲ್ಲಿರುವ ಪ್ರತಿಷ್ಠಿತ ಉನ್ನತ ವಿದ್ಯಾ ಸಮುಚ್ಛಯ ಜಾಮಿಅತುಲ್ ಅಮ್ಜದಿಯ್ಯಃ ಶರೀಅತ್ ಕಾಲೇಜಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದಾರೆ. ಸಯ್ಯಿದ್ ಮದನಿ ಶರೀಅತ್ ಕಾಲೇಜು ಉಳ್ಳಾಲ ಇದರ ಪ್ರೊಫೆಸರ್ ಆಗಿರುವ ಪ್ರಸಿದ್ಧ ವಿದ್ವಾಂಸರಾದ ಗೌರವಾನ್ವಿತ ಅಹ್ಮದ್ ಬಾವ ಉಸ್ತಾದರ ಪ್ರೀತಿಯ ಸುಪುತ್ರರೂ ಬಹು : ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಇವರ ಪ್ರಮುಖ ಶಿಷ್ಯರೂ ಆಗಿದ್ದು ಉಳ್ಳಾಲದಲ್ಲಿ ಎಸ್ಸೆಸ್ಸೆಫ್ ಮತ್ತು ಸುನ್ನತ್ ಜಮಾಅತಿನ ಸರ್ವ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಎಸ್ ಬಿ ಎಸ್ ಉಳ್ಳಾಲ ಝೋನ್ ಇದರ ನಿರ್ದೇಶಕರಾಗಿ ಕೆಲಸ ಮಾಡಿ ಜನ ಮೆಚ್ಚುಗೆ ಗಳಿಸಿದ ಇವರು ಇದೀಗ ಉಳ್ಳಾಲ ಆಝಾದ್ ನಗರ ಶಾಖೆಯ ಅಧ್ಯಕ್ಷರಾಗಿದ್ದಾರೆ. ಒಂದು ವರ್ಷದ ಕೋರ್ಸಿಗಾಗಿ ಅಮ್ಜದಿಯ್ಯಃಕ್ಕೆ ತೆರಳುತ್ತಿದ್ದು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್, ತೊಕ್ಕೋಟು ಸೆಕ್ಟರ್ ಹಾಗು ಮಂಗಳೂರು ಸೆಕ್ಟರ್ ವತಿಯಿಂದ ಹಾಫಿಝ್ ಮುಈನ್ ರವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು ಹಾಗು ಇವರ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸಿ, ಒಂದು ವರ್ಷದ ಕೋರ್ಸ್ ಪೂರ್ತಿಗೊಳಿಸಿ ಅಲ್ ಅಮ್ಜದಿ ಬಿರುದುಧಾರಿಯಾಗಿ ಹೊರಬಂದು ಸುನ್ನತ್ ಜಮಾಅತಿನ ಕಾರ್ಯಚಟುವಟಿಕೆಯಲ್ಲಿ ಇನ್ನಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಲು ಅಲ್ಲಾಹು ತೌಫೀಖ್ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಉಳ್ಳಾಲ ಸೆಕ್ಟರ್ ನಾಯಕ ಮಂಗಳೂರಿನ ಉದ್ಯಮಿ ತ್ವಾಹ ಮಂಗಳೂರು, ತೊಕ್ಕಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ, ಮಂಗಳೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಮಂಗಳೂರು, ತೊಕ್ಕೋಟು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಬಾತಿಷ್ ಮಂಚಿಲ ಹಾಗು ಉಳ್ಳಾಲ ಹಳೆಕೋಟೆ ಶಾಖಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಉಪಸ್ಥಿತರಿದ್ದರು.

Sunday, 2 July 2017

ಉನ್ನತ ವಿದ್ಯಾಭ್ಯಾಸಕ್ಕಾಗಿ ಹಾಫಿಝ್ ಮುಈನ್ ಉಳ್ಳಾಲ ಉತ್ತರಪ್ರದೇಶಕ್ಕೆ

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ಸಕ್ರಿಯ ಕಾರ್ಯಕರ್ತರು ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ಶಾಖಾಧ್ಯಕ್ಷರು ಹಾಗು ಅಹ್ಲುಸ್ಸುನ್ನಃದ ಮುಂಚೂಣಿ ನಾಯಕರೂ ಆದ ಹಾಫಿಝ್ ಮುಈನ್ ಉಳ್ಳಾಲ ( 03 - 07 -2017 ) ಸೋಮವಾರ ರಾತ್ರಿ ಭಾರತದ ಉನ್ನತ ವಿದ್ವಾಂಸಗಳಲ್ಲೋರ್ವರಾದ ಅಲ್ಲಾಮಃ ಝಿಯಾವುಲ್ ಮುಸ್ತಫ ಅಲ್ ಖಾದ್ರಿ ಇವರ ನೇತ್ರತ್ವದ ಉತ್ತರಪ್ರದೇಶದ ಮಾವು ಜಿಲ್ಲೆಯ ಘೋಸಿ ಪಟ್ಟಣದಲ್ಲಿರುವ ಪ್ರತಿಷ್ಠಿತ ಉನ್ನತ ವಿದ್ಯಾ ಸಮುಚ್ಛಯ ಜಾಮಿಅತುಲ್ ಅಮ್ಜದಿಯ್ಯಃ ಶರೀಅತ್ ಕಾಲೇಜಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದಾರೆ. ಸಯ್ಯಿದ್ ಮದನಿ ಶರೀಅತ್ ಕಾಲೇಜು ಉಳ್ಳಾಲ ಇದರ ಪ್ರೊಫೆಸರ್ ಆಗಿರುವ ಪ್ರಸಿದ್ಧ ವಿದ್ವಾಂಸರಾದ ಗೌರವಾನ್ವಿತ ಅಹ್ಮದ್ ಬಾವ ಉಸ್ತಾದರ ಪ್ರೀತಿಯ ಸುಪುತ್ರರೂ ಬಹು : ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಇವರ ಪ್ರಮುಖ ಶಿಷ್ಯರೂ ಆಗಿದ್ದು ಉಳ್ಳಾಲದಲ್ಲಿ ಎಸ್ಸೆಸ್ಸೆಫ್ ಮತ್ತು ಸುನ್ನತ್ ಜಮಾಅತಿನ ಸರ್ವ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಎಸ್ ಬಿ ಎಸ್ ಉಳ್ಳಾಲ ಝೋನ್ ಇದರ ನಿರ್ದೇಶಕರಾಗಿ ಕೆಲಸ ಮಾಡಿ ಜನ ಮೆಚ್ಚುಗೆ ಗಳಿಸಿದ ಇವರು ಇದೀಗ ಉಳ್ಳಾಲ ಆಝಾದ್ ನಗರ ಶಾಖೆಯ ಅಧ್ಯಕ್ಷರಾಗಿದ್ದಾರೆ. ಒಂದು ವರ್ಷದ ಕೋರ್ಸಿಗಾಗಿ ಅಮ್ಜದಿಯ್ಯಃಕ್ಕೆ ತೆರಳುತ್ತಿದ್ದು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ಶಾಖೆ ತುಂಬಾ ದುಃಖ ವ್ಯಕ್ತಪಡಿಸುತ್ತಿದೆ. ನಿನ್ನೆ ಬೀಳ್ಕೊಡುಗೆ ಸಮಾರಂಭ ಏರ್ಪಡಿಸಲಾಗಿತ್ತು. ಇವರ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸಿ, ಒಂದು ವರ್ಷದ ಕೋರ್ಸ್ ಪೂರ್ತಿಗೊಳಿಸಿ ಅಲ್ ಅಮ್ಜದಿ ಬಿರುದುಧಾರಿಯಾಗಿ ಹೊರಬಂದು ಸುನ್ನತ್ ಜಮಾಅತಿನ ಕಾರ್ಯಚಟುವಟಿಕೆಯಲ್ಲಿ ಇನ್ನಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಲು ಅಲ್ಲಾಹು ತೌಫೀಖ್ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಉಳ್ಳಾಲ, ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಆಝಾದ್ ನಗರ ಉಪಾಧ್ಯಕ್ಷ ಹಾಫಿಝ್ ಸುಹೈಲ್ ಉಳ್ಳಾಲ, ಕಾರ್ಯದರ್ಶಿ ಮುಝಫ್ಫರ್ ಹಾಗು ಇನ್ನಿತರ ಸೆಕ್ಟರ್ ಹಾಗು ಶಾಖಾ ನಾಯಕರು ಉಪಸ್ಥಿತರಿದ್ದರು