Share To

Monday, 3 July 2017

ಜಾಮಿಅ ಅಮ್ಜದಿಯ್ಯಃ ಕ್ಕೆ ತೆರಳುತ್ತಿರುವ ಹಾಫಿಝ್ ಮುಈನ್ ಉಳ್ಳಾಲ ಇವರಿಗೆ ಬೀಳ್ಕೊಡುಗೆ

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ಸಕ್ರಿಯ ಕಾರ್ಯಕರ್ತರು ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ಶಾಖಾಧ್ಯಕ್ಷರು ಹಾಗು ಅಹ್ಲುಸ್ಸುನ್ನಃದ ಮುಂಚೂಣಿ ನಾಯಕರೂ ಆದ ಹಾಫಿಝ್ ಮುಈನ್ ಉಳ್ಳಾಲ ( 03 - 07 -2017 ) ಇಂದು ರಾತ್ರಿ ಭಾರತದ ಉನ್ನತ ವಿದ್ವಾಂಸಗಳಲ್ಲೋರ್ವರಾದ ಅಲ್ಲಾಮಃ ಝಿಯಾವುಲ್ ಮುಸ್ತಫ ಅಲ್ ಖಾದ್ರಿ ಇವರ ನೇತ್ರತ್ವದ ಉತ್ತರಪ್ರದೇಶದ ಮಾವು ಜಿಲ್ಲೆಯ ಘೋಸಿ ಪಟ್ಟಣದಲ್ಲಿರುವ ಪ್ರತಿಷ್ಠಿತ ಉನ್ನತ ವಿದ್ಯಾ ಸಮುಚ್ಛಯ ಜಾಮಿಅತುಲ್ ಅಮ್ಜದಿಯ್ಯಃ ಶರೀಅತ್ ಕಾಲೇಜಿಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿದ್ದಾರೆ. ಸಯ್ಯಿದ್ ಮದನಿ ಶರೀಅತ್ ಕಾಲೇಜು ಉಳ್ಳಾಲ ಇದರ ಪ್ರೊಫೆಸರ್ ಆಗಿರುವ ಪ್ರಸಿದ್ಧ ವಿದ್ವಾಂಸರಾದ ಗೌರವಾನ್ವಿತ ಅಹ್ಮದ್ ಬಾವ ಉಸ್ತಾದರ ಪ್ರೀತಿಯ ಸುಪುತ್ರರೂ ಬಹು : ಸ್ವಲಾಹುದ್ದೀನ್ ಸಖಾಫಿ ಮಾಡನ್ನೂರು ಇವರ ಪ್ರಮುಖ ಶಿಷ್ಯರೂ ಆಗಿದ್ದು ಉಳ್ಳಾಲದಲ್ಲಿ ಎಸ್ಸೆಸ್ಸೆಫ್ ಮತ್ತು ಸುನ್ನತ್ ಜಮಾಅತಿನ ಸರ್ವ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿದ್ದುಕೊಂಡು ಕಾರ್ಯ ನಿರ್ವಹಿಸುತ್ತಿದ್ದರು. ಎಸ್ ಬಿ ಎಸ್ ಉಳ್ಳಾಲ ಝೋನ್ ಇದರ ನಿರ್ದೇಶಕರಾಗಿ ಕೆಲಸ ಮಾಡಿ ಜನ ಮೆಚ್ಚುಗೆ ಗಳಿಸಿದ ಇವರು ಇದೀಗ ಉಳ್ಳಾಲ ಆಝಾದ್ ನಗರ ಶಾಖೆಯ ಅಧ್ಯಕ್ಷರಾಗಿದ್ದಾರೆ. ಒಂದು ವರ್ಷದ ಕೋರ್ಸಿಗಾಗಿ ಅಮ್ಜದಿಯ್ಯಃಕ್ಕೆ ತೆರಳುತ್ತಿದ್ದು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್, ತೊಕ್ಕೋಟು ಸೆಕ್ಟರ್ ಹಾಗು ಮಂಗಳೂರು ಸೆಕ್ಟರ್ ವತಿಯಿಂದ ಹಾಫಿಝ್ ಮುಈನ್ ರವರಿಗೆ ಸನ್ಮಾನಿಸಿ ಬೀಳ್ಕೊಡಲಾಯಿತು ಹಾಗು ಇವರ ಮುಂದಿನ ಜೀವನ ಉಜ್ವಲವಾಗಲಿ ಎಂದು ಹಾರೈಸಿ, ಒಂದು ವರ್ಷದ ಕೋರ್ಸ್ ಪೂರ್ತಿಗೊಳಿಸಿ ಅಲ್ ಅಮ್ಜದಿ ಬಿರುದುಧಾರಿಯಾಗಿ ಹೊರಬಂದು ಸುನ್ನತ್ ಜಮಾಅತಿನ ಕಾರ್ಯಚಟುವಟಿಕೆಯಲ್ಲಿ ಇನ್ನಷ್ಟು ಉತ್ತಮವಾಗಿ ಕಾರ್ಯ ನಿರ್ವಹಿಸಲು ಅಲ್ಲಾಹು ತೌಫೀಖ್ ನೀಡಲಿ ಎಂದು ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಉಳ್ಳಾಲ ಸೆಕ್ಟರ್ ನಾಯಕ ಮಂಗಳೂರಿನ ಉದ್ಯಮಿ ತ್ವಾಹ ಮಂಗಳೂರು, ತೊಕ್ಕಟು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಜಾಫರ್ ಅಳೇಕಲ, ಮಂಗಳೂರು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಮಂಗಳೂರು, ತೊಕ್ಕೋಟು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಬಾತಿಷ್ ಮಂಚಿಲ ಹಾಗು ಉಳ್ಳಾಲ ಹಳೆಕೋಟೆ ಶಾಖಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಉಪಸ್ಥಿತರಿದ್ದರು.

No comments:

Post a Comment