ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಉಳ್ಳಾಲ ಸೆಕ್ಟರಿನ ಮತ್ತು ಇದರ ಅಧೀನ ಹನ್ನೊಂದು ಶಾಖೆಗಳ ಟಾಪ್ 8 ಉನ್ನತ ನಾಯಕರುಗಳ ಸಂಗಮ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಉಳ್ಳಾಲ ಪೇಟೆಯ ಪುರಸಭೆ ಸಮುದಾಯಭವನದಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಕೋಡಿ ಶಾಖಾ ಕೋಶಾಧಿಕಾರಿ ಅತೀಖ್ ಕೋಡಿ ಖಿರಾಅತ್ ಪಠಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ಅಬೂ ಸುಹಾನಃ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ದುವಾ ನೆರವೇರಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ರಾಷ್ಟ್ರೀಯ ಎಸ್ಸೆಸ್ಸೆಫ್ ಪ್ರಧಾನ ಕಾರ್ಯದರ್ಶಿ ಹಾಗು ರಾಜ್ಯ ಹಜ್ ಸಮಿತಿ ಸದಸ್ಯರಾದ ಕೆ. ಎಂ. ಸಿದ್ದೀಕ್ ಮೋಂಟುಗೋಳಿ ಸಂಘಟನಾ ತರಗತಿ ನಡೆಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ.ಜಿ.ಹನೀಫ್ ಹಾಜಿ ಹಾಗು ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಪ್ರಧಾನ ಕಾರ್ಯದರ್ಶಿ ಅಶ್ರಫ್ ಹಾಜಿ ಬಳ್ಳಾರಿ, ಉಪಾಧ್ಯಕ್ಷ ತ್ವಾಹಿರ್ ಹಾಜಿ ಹಾಗು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಾರ್ಯದರ್ಶಿ ಅಲ್ತಾಫ್ ಕುಂಪಲ ಹಾಗು ಇಲ್ಯಾಸ್ ಕೈಕೋ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷರಾದ ಮುಹಮ್ಮದ್ ಮದನಿ ಹಳೆಕೋಟೆ ಹಾಗು ಮಿಕ್ದಾದ್ ಮುಕ್ಕಚ್ಚೇರಿ, ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ನಾಯಕ ಯೂಸುಫ್ ಮಿಲ್ಲತ್ ನಗರ, ಎಸ್ ವೈ ಎಸ್ ಮುಕ್ಕಚ್ಚೇರಿ ಬ್ರಾಂಚ್ ಉಪಾಧ್ಯಕ್ಷ ಅಬ್ಬಾಸ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ, ಬೆಂಗಳೂರು ಡಿವಿಷನ್ ಸಮಿತಿ ಸದಸ್ಯ ಮುಸ್ತಫ ಮಾಸ್ಟರ್, ಉಳ್ಳಾಲ ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಮುಹಾಝ್ ಬಂಡಿಕೊಟ್ಯ, ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ, ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಅಬೂ ಅನಸ್ ಜಮಾಲ್ ಉಸ್ತಾದ್, ಪ್ರಧಾನ ಕಾಯದರ್ಶಿ ತಶ್ರೀಫ್, ಆಝಾದ್ ನಗರ ಶಾಖಾ ಪ್ರಧಾನ ಕಾರ್ಯದರ್ಶಿ ಮುಝಫ್ಫರ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾಧ್ಯಕ್ಷ ಸಿರಾಜುದ್ದೀನ್, ಮುಕ್ಕಚ್ಚೇರಿ ಶಾಖಾಧ್ಯಕ್ಷ ಅಹ್ಸನ್, ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್ ಕೋಟೆಪುರ, ಕೋಡಿ ದೋಟ ಶಾಖಾಧ್ಯಕ್ಷ ಹಾಶಿರ್, ಒಂಭತ್ತುಕೆರೆ ಶಾಖಾಧ್ಯಕ್ಷ ತೌಸೀಫ್ ಯು.ಟಿ ಒಂಭತ್ತುಕೆರೆ, ಪೇಟೆ ಶಾಖಾ ಕಾರ್ಯದರ್ಶಿ ಫಾಶಿರ್, ಸುಂದರಭಾಗ್ ಶಾಖಾಧ್ಯಕ್ಷ ಸಯೀದ್, ಪ್ರಧಾನ ಕಾರ್ಯದರ್ಶಿ ಅಫ್ರಿದ್ ಹಾಗು ಸತ್ತಾರ್ ಮೇಲಂಗಡಿ, ಮೆಹರಲಿ, ಮುಹಸಿನ್ ಬೊಟ್ಟು ಉಪಸ್ಥಿತರಿದ್ದರು. ಕ್ಯಾಂಪ್ ಅಮೀರರಾಗಿ ನೌಫಲ್ ಕೋಟೆಪುರ ಹಾಗು ಹಫೀಝ್ ಕೋಡಿ ಕಾರ್ಯ ನಿರ್ವಹಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಧನ್ಯವಾದಗೈದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹನೀಫ್ ಬೊಟ್ಟು ಕಾರ್ಯಕ್ರಮ ನಿರೂಪಿಸಿದರು.
Tuesday, 28 February 2017
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಮತ್ತು ಇದರ ಅಧೀನ ಶಾಖೆಗಳ ಟಾಪ್ 8 ನಾಯಕರುಗಳ ಸಂಗಮ, 26 - 02 - 2017
Monday, 27 February 2017
ಒಂಭತ್ತುಕೆರೆ : ರಿಫಾಯೀ ಶೈಖ್ ಅನುಸ್ಮರಣಾ ಕಾರ್ಯಕ್ರಮ, 26-02-2017
ಎಸ್ಸೆಸ್ಸೆಫ್ ಒಂಭತ್ತುಕೆರೆ ಶಾಖೆಯ ಆಶ್ರಯದಲ್ಲಿ ರಿಫಾಯೀ ಶೈಖ್ ಅನುಸ್ಮರಣಾ ಕಾರ್ಯಕ್ರಮ ಎಸ್ಸೆಸ್ಸೆಫ್ ಒಂಭತ್ತುಕೆರೆ ಶಾಖಾಧ್ಯಕ್ಷ ತೌಸೀಫ್ ಯು.ಟಿ ರವರ ಅಧ್ಯಕ್ಷತೆಯಲ್ಲಿ ನಡೆಯಿತು. ಬೆಂಗಳೂರು ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯ ಮುಸ್ತಫ ಮಾಸ್ಟರ್ ಉಳ್ಳಾಲ ಅನುಸ್ಮರಣಾ ಭಾಷಣ ಮಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಒಂಭತ್ತುಕೆರೆ ಶಾಖೆಯ ಉಪಾಧ್ಯಕ್ಷ ಇಖ್ಬಾಲ್ ಒಂಭತ್ತುಕೆರೆ, ಪ್ರಧಾನ ಕಾರ್ಯದರ್ಶಿ ನಿಝಾಮುದ್ದೀನ್, ಕೋಶಾಧಿಕಾರಿ ವಾಸಿಂ ಹಾಗು ಕ್ಯಾಂಪಸ್ ಕಾರ್ಯದರ್ಶಿ ಶಾಹಿನ್ ಉಪಸ್ಥಿತರಿದ್ದರು.
Sunday, 26 February 2017
ಮುಕ್ಕಚ್ಚೇರಿ : ಹಣ್ಣು ಹಂಪಲು ವಿತರಣೆ ಮತ್ತು ತಹ್ಲೀಲ್ ಸಂಗಮ, 26-02-2017
ಎಸ್ಸೆಸ್ಸೆಫ್ ಉಳ್ಳಾಲ ಮುಕ್ಕಚ್ಚೇರಿ ಶಾಖೆಯ ದಶ ವಾರ್ಷಿಕ ಸಂಭ್ರಮದ ಅಂಗವಾಗಿ ರಿಫಾಯೀ ಶೈಖ್ ಸ್ಮರಣಾರ್ಥ ಹಣ್ಣು ಹಂಪಲು ವಿತರಣೆ ಮತ್ತು ಮುಕ್ಕಚ್ಚೇರಿ ಮದ್ರಸ ಮಸೀದಿ ಹಾಗು ಸುನ್ನತ್ ಜಮಾಅತಿನ ಸರ್ವತೋಮುಖ ಅಭಿವ್ರದ್ಧಿಗಾಗಿ ದುಡಿದು ಮರಣಹೊಂದಿದವರ ಮೇಲೆ ತಹ್ಲೀಲ್ ಸಮರ್ಪಣಾ ಕಾರ್ಯಕ್ರಮ ಶಾಖಾಧ್ಯಕ್ಷ ಅಹ್ಸನ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಕ್ಕಚ್ಚೇರಿ ಜುಮಾ ಮಸೀದಿಯ ಮುದರ್ರಿಸ್ ಸ್ವಾದಿಖ್ ಸಖಾಫಿ ಕರಿಂಬಿಲ ಅನುಸ್ಮರಣಾ ಪ್ರಭಾಷಣ ಮಾಡಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಹಾಗು ಮುಕ್ಕಚ್ಚೇರಿ ಜುಮಾ ಮಸೀದಿಯ ಇಮಾಮರಾದ ಅಬ್ದುರ್ರಹ್ಮಾನ್ ಸಅದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೆ ಮನೆಗೆ ಭೇಟಿ ನೀಡಿ ಹಣ್ಣು ಹಂಪಲು ವಿತರಣೆ ಹಾಗು ತಹ್ಲೀಲ್ ಸಮರ್ಪಣೆ ನಿರ್ವಹಿಸಲಾಯಿತು. ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಜಮಾಲ್ ಉಸ್ತಾದ್ ದುವಾ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಿದರು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಂಚಾಲಕ ಅಶ್ರಫ್ ಹಾಜಿ ಬಳ್ಳಾರಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷ ತ್ವಾಹಿರ್ ಹಾಜಿ, ಮುಕ್ಕಚ್ಚೇರಿ ಮದ್ರಸ ಅಧ್ಯಾಪಕ ಅಬ್ದುಲ್ ಖಾದರ್ ಮದನಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಮುಕ್ಕಚ್ಚೇರಿ ಜುಮಾ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಗು ಎಸ್ಸೆಸ್ಸೆಫ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು
ಮುಕ್ಕಚ್ಚೇರಿ ಮದ್ರಸ ಮಸೀದಿ ವಠಾರ ಸ್ವಚ್ಛತಾ ಕಾರ್ಯಕ್ರಮ, 26-02-2017
ಉಳ್ಳಾಲ ಸೆಕ್ಟರ್ ವ್ಯಾಪ್ತಿಯ ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖೆ ಹಾಗು ಎಸ್ ವೈ ಎಸ್ ಮುಕ್ಕಚ್ಚೇರಿ ಬ್ರಾಂಚ್ ಆಶ್ರಯದಲ್ಲಿ ಮುಕ್ಕಚ್ಚೇರಿ ಮಸೀದಿ ಮದ್ರಸ ವಠಾರ ಸ್ವಚ್ಚತಾ ಕಾರ್ಯಕ್ರಮ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಂಚಾಲಕ ಅಶ್ರಫ್ ಹಾಜಿ ಬಳ್ಳಾರಿ ಇವರ ನೇತ್ರತ್ವದಲ್ಲಿ ನಡೆಯಿತು.
ಎಸ್ ವೈ ಎಸ್ ಮುಕ್ಕಚ್ಚೇರಿ ಬ್ರಾಂಚ್ ಉಪಾಧ್ಯಕ್ಷ ಅಬ್ಬಾಸಾಕ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಜೊತೆ ಕಾರ್ಯದರ್ಶಿ ಹನೀಫ್ ಬೊಟ್ಟು ಹಾಗು ಮುಕ್ಕಚ್ಚೇರಿ ಎಸ್ಸೆಸ್ಸೆಫ್ ಕಾರ್ಯಕರ್ತರು ಈ ಕಾರ್ಯಕ್ರಮದಲ್ಲಿ ಕೈ ಜೋಡಿಸಿದರು.
Friday, 24 February 2017
ಸ್ವಲಾತುನ್ನಾರಿಯಃ ಸಂಗಮ, ಮದನಿ ಮೌಲಿದ್ ಸಂಗಮ ಹಾಗು ರಿಫಾಯೀ ಶೈಖ್ ಅನುಸ್ಮರಣಾ ಕಾರ್ಯಕ್ರಮ ಹಾಗು ಸನ್ಮಾನ ಸಮಾರಂಭ
ಎಸ್ಸೆಸ್ಸೆಫ್, ಎಸ್ ವೈ ಎಸ್ ಸುಂದರಿಭಾಗ್ ಹಾಗು ಸುನ್ನೀ ಕುಟುಂಬ ಉಳ್ಳಾಲ ಇದರ ಆಶ್ರಯದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಅಳೇಕಲ ಇವರ ನೇತ್ರತ್ವದಲ್ಲಿ ಸ್ವಲಾತುನ್ನಾರಿಯಃ ಸಂಗಮ, ಮದನಿ ಮೌಲಿದ್ ಸಂಗಮ ಹಾಗು ರಿಫಾಯೀ ಶೈಖ್ ಅನುಸ್ಮರಣಾ ಕಾರ್ಯಕ್ರಮ ಸುಂದರಭಾಗಿನ ಅಜ್ಮಲ್ ನಿವಾಸದಲ್ಲಿ ನಡೆಯಿತು.
ರಿಫಾಯೀ ಶೈಖ್ ಅನುಸ್ಮರಣಾ ಅಂಗವಾಗಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಸ್ತುವಾರಿಯಾಗಿ ನೇಮಕಗೊಂಡ ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ಕೋಶಾಧಿಕಾರಿಯೂ ಉಳ್ಳಾಲ ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ತೌಸೀಫ್ ಸಅದಿ ಹರೇಕಳ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಹಾಗು ಎಸ್ ವೈ ಎಸ್ ಸುಂದರಭಾಗ್ ವತಿಯಿಂದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಸ್ತುವಾರಿಯಾಗಿ ಆಯ್ಕೆಯಾದ ತೌಸೀಫ್ ಸಅದಿ ಹರೇಕಳ ಇವರನ್ನು ಶಾಲುಹೊದಿಸಿ ಅಭಿನಂದಿಸಿ ಸನ್ಮಾನಿಸಲಾಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಗು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರೂ ಆದ ಹನೀಫ್ ಹಾಜಿ ಮಾಸ್ತಿಕಟ್ಟೆ, ಉಳ್ಳಾಲ ನಗರಸಭಾ ಸದಸ್ಯ ಹಾಗು ಮಸ್ಜಿದುಲ್ ಫಾರೂಖ್ ಆಝಾದ್ ನಗರ ಇದರ ಪ್ರಧಾನ ಕಾರ್ಯದರ್ಶಿ ಶೌಕತ್, ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಪ್ರಧಾನ ಕಾರ್ಯದರ್ಶಿ ಹಾಗು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಂಚಾಲಕ ಅಶ್ರಫ್ ಹಾಜಿ ಬಳ್ಳಾರಿ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬೂ ಸುಹಾನಃ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಸಯ್ಯಿದ್ ಮದನಿ ದರ್ಗಾ ಸಮಿತಿ ಸದಸ್ಯ ಅಬ್ದುಲ್ ಖಾದರ್ ಕೋಡಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಅಧ್ಯಕ್ಷ ಅಬ್ದುಸ್ಸಮದ್ ಹಳೆಕೋಟೆ, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾಧ್ಯಕ್ಷ ಸಿರಾಜುದ್ದೀನ್, ಎಸ್ ವೈ ಎಸ್ ಆಝಾದ್ ನಗರ ಬ್ರಾಂಚ್ ಅಧ್ಯಕ್ಷ ಆರ್. ಆರ್. ರಫೀಖ್, ಆಝಾದ್ ನಗರ ಬ್ರಾಂಚ್ ಕೋಶಾಧಿಕಾರಿ ಮುಹಮ್ಮದ್ ಫ್ಯಾನ್ಸಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮಿಕ್ದಾದ್ ಮುಕ್ಕಚ್ಚೇರಿ, ಎಸ್ಸೆಸ್ಸೆಫ್ ಆಝಾದ್ ನಗರ ಪ್ರಧಾನ ಕಾರ್ಯದರ್ಶಿ ಮುಝಫ್ಪರ್, ಅಬ್ದುಲ್ ಅಝೀಝ್ ಸೀ ರೋಡ್ ಕೋಡಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯ ಹಾಗು ಮುಡಿಪು ಸೆಕ್ಟರ್ ಉಸ್ತುವಾರಿ ಹಂಝ ಸುಂದರಭಾಗ್, ಸುಂದರಭಾಗ್ ಮಸೀದಿ ಉಸ್ತಾದ್ ಅಬ್ದುರ್ರಹ್ಮಾನ್ ಸಖಾಫಿ, ಎಸ್ಸೆಸ್ಸೆಫ್ ಸುಂದರಭಾಗ್ ಶಾಖಾಧ್ಯಕ್ಷ ಸಯೀದ್, ಸಯ್ಯಿದ್ ಮದನಿ ದರ್ಗಾ ಉಳ್ಳಾಲ ಇದರ ಸಮಿತಿ ಸದಸ್ಯರಾದ ಸೀದಿಯಾಕ ಸುಂದರಭಾಗ್ ಹಾಗು ಎಸ್ಸೆಸ್ಸೆಫ್ ಎಸ್ ವೈ ಎಸ್ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಎಸ್ಸೆಸ್ಸೆಫ್ ಕೋಡಿ ದೋಟ ಹಾಗು ಕೋಟೆಪುರ ಶಾಖೆಯ ಜಂಟಿ ಆಶ್ರಯದಲ್ಲಿ ರಿಫಾಯೀ ಶೈಖ್ ಅನುಸ್ಮರಣಾ ಕಾರ್ಯಕ್ರಮ
ಎಸ್ಸೆಸ್ಸೆಫ್ ಕೋಡಿ ದೋಟ ಹಾಗು ಕೋಟೆಪುರ ಶಾಖೆಯ ಜಂಟಿ ಆಶ್ರಯದಲ್ಲಿ ರಿಫಾಯೀ ಶೈಖ್ ಅನುಸ್ಮರಣಾ ಕಾರ್ಯಕ್ರಮ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಕೋಡಿಯ ಶಾಖಾ ಕಛೇರಿಯಲ್ಲಿ ನಡೆಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ಅಜ್ಜಿನಡ್ಕ ಬ್ರಾಂಚ್ ಗೌರವಾಧ್ಯಕ್ಷರಾದ ಶರೀಫ್ ಸಅದಿ ಅನುಸ್ಮರಣಾ ಪ್ರಭಾಷಣ ಮಾಡಿದರು. ಮುಡಿಪು ಸೆಕ್ಟರ್ ಉಪಾಧ್ಯಕ್ಷರಾದ ಅಶ್ರಫ್ ಸಖಾಫಿ ಕುರ್ನಾಡು ಹಾಗು ಸಯ್ಯಿದ್ ಖುಬೈಬ್ ತಂಗಳ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಎಸ್ಸೆಸ್ಸೆಫ್ ಕೋಡಿ ದೋಟ ಶಾಖಾಧ್ಯಕ್ಷ ಹಾಶಿರ್ ಕೋಡಿ, ಎಸ್ಸೆಸ್ಸೆಫ್ ಕೋಟೆಪುರ ಶಾಖಾ ಕೋಶಾಧಿಕಾರಿ ಯಾಸಿರ್, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾಧ್ಯಕ್ಷ ಸಿರಾಜುದ್ದೀನ್, ಅಬ್ದುಲ್ಲಾಹ್ ಕೋಟೆಪುರ, ಇರ್ಫಾನ್ ಕೋಟೆಪುರ, ಅಬ್ದುಲ್ ಖಾದರ್ ಕೋಡಿ, ಅಬ್ದುಲ್ ಅಝೀಝ್ ಸಿ ರೋಡ್ ಕೋಡಿ, ಇಮ್ರಾನ್ ಹಾಗು ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಕೋಡಿ ದೋಟ ಶಾಖಾ ಪ್ರಧಾನ ಕಾರ್ಯದರ್ಶಿ ಹಫೀಝ್ ಕೋಡಿ ಸ್ವಾಗತಿಸಿ ಎಸ್ಸೆಸ್ಸೆಫ್ ಕೋಟೆಪುರ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ ಧನ್ಯವಾದಗೈದರು. ಎಸ್ಸೆಸ್ಸೆಫ್ ಕೋಡಿ ದೋಟ ಶಾಖಾ ಕೋಶಾಧಿಕಾರಿ ಅತೀಖ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.
