ಎಸ್ಸೆಸ್ಸೆಫ್ ಉಳ್ಳಾಲ ಸುಂದರಭಾಗ್ ಶಾಖೆಯ ಆಶ್ರಯದಲ್ಲಿ ಸ್ವಲಾತುನ್ನಾರಿಯಃ ಸಂಗಮ ಹಾಗು ಎಸ್ಸೆಸ್ಸೆಫ್ ಹಾಗು ಎಸ್ ವೈ ಎಸ್ ನಾಯಕರಿಗೆ ಸನ್ಮಾನ ಸಮಾರಂಭ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಹುಸ್ನಾ ಅಪಾರ್ಟ್ ಮೆಂಟ್ ನಲ್ಲಿ ನಡೆಯಿತು.
ಅವರು ಸ್ವಲಾತುನ್ನಾರಿಯಃ ಮಜ್ಲಿಸಿಗೆ ನೇತ್ರತ್ವ ನೀಡಿ ದುವಾ ಮಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ದ.ಕ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಹಾಗು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಇವರಿಗೆ ಎಸ್ಸೆಸ್ಸೆಫ್ ಸುಂದರಭಾಗ್ ಶಾಖಾ ವತಿಯಿಂದ ಶಾಲುಹೊದಿಸಿ ಅಭಿನಂದಿಸಿ ಸನ್ಮಾನಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಖಮರುದ್ದೀನ್ ಮುಹಮ್ಮದ್, ತಾಜುದ್ದೀನ್, ಬದ್ರುದ್ದೀನ್ ಸೈಫುದ್ದೀನ್, ಅರ್ಫಾನ್ ಹಾಗು ಹಂಝ ಸಯ್ಯಿದ್ ಉಪಸ್ಥಿತರಿದ್ದರು. ಹಂಝ ಯು ಬಿ ಸ್ವಾಗತಿಸಿ ಅಫ್ರಿದ್ ಧನ್ಯವಾದಗೈದರು.
Saturday, 11 February 2017
ಎಸ್ಸೆಸ್ಸೆಫ್ ಸುಂದರಭಾಗ್ ಶಾಖೆಯಿಂದ ಸ್ವಲಾತುನ್ನಾರಿಯಃ ಮಜ್ಲಿಸ್ ಹಾಗು ಎಸ್ಸೆಸ್ಸೆಫ್ ಎಸ್ ವೈ ಎಸ್ ನಾಯಕರಿಗೆ ಸನ್ಮಾನ ಸಮಾರಂಭ
Subscribe to:
Post Comments (Atom)
No comments:
Post a Comment