Share To

Friday, 24 February 2017

ಸ್ವಲಾತುನ್ನಾರಿಯಃ ಸಂಗಮ, ಮದನಿ ಮೌಲಿದ್ ಸಂಗಮ ಹಾಗು ರಿಫಾಯೀ ಶೈಖ್ ಅನುಸ್ಮರಣಾ ಕಾರ್ಯಕ್ರಮ ಹಾಗು ಸನ್ಮಾನ ಸಮಾರಂಭ

ಎಸ್ಸೆಸ್ಸೆಫ್, ಎಸ್ ವೈ ಎಸ್ ಸುಂದರಿಭಾಗ್ ಹಾಗು ಸುನ್ನೀ ಕುಟುಂಬ ಉಳ್ಳಾಲ ಇದರ ಆಶ್ರಯದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ಅಳೇಕಲ ಇವರ ನೇತ್ರತ್ವದಲ್ಲಿ ಸ್ವಲಾತುನ್ನಾರಿಯಃ ಸಂಗಮ, ಮದನಿ ಮೌಲಿದ್ ಸಂಗಮ ಹಾಗು ರಿಫಾಯೀ ಶೈಖ್ ಅನುಸ್ಮರಣಾ ಕಾರ್ಯಕ್ರಮ ಸುಂದರಭಾಗಿನ ಅಜ್ಮಲ್ ನಿವಾಸದಲ್ಲಿ ನಡೆಯಿತು.
ರಿಫಾಯೀ ಶೈಖ್ ಅನುಸ್ಮರಣಾ ಅಂಗವಾಗಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಸ್ತುವಾರಿಯಾಗಿ ನೇಮಕಗೊಂಡ ಎಸ್ಸೆಸ್ಸೆಫ್ ಕೋಣಾಜೆ ಸೆಕ್ಟರ್ ಕೋಶಾಧಿಕಾರಿಯೂ ಉಳ್ಳಾಲ ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯರೂ ಆದ ತೌಸೀಫ್ ಸಅದಿ ಹರೇಕಳ ಮಾತನಾಡಿದರು. ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಹಾಗು ಎಸ್ ವೈ ಎಸ್ ಸುಂದರಭಾಗ್ ವತಿಯಿಂದ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಸ್ತುವಾರಿಯಾಗಿ ಆಯ್ಕೆಯಾದ ತೌಸೀಫ್ ಸಅದಿ ಹರೇಕಳ ಇವರನ್ನು ಶಾಲುಹೊದಿಸಿ ಅಭಿನಂದಿಸಿ ಸನ್ಮಾನಿಸಲಾಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಹಾಗು ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರೂ ಆದ ಹನೀಫ್ ಹಾಜಿ ಮಾಸ್ತಿಕಟ್ಟೆ, ಉಳ್ಳಾಲ ನಗರಸಭಾ ಸದಸ್ಯ ಹಾಗು ಮಸ್ಜಿದುಲ್ ಫಾರೂಖ್ ಆಝಾದ್ ನಗರ ಇದರ ಪ್ರಧಾನ ಕಾರ್ಯದರ್ಶಿ ಶೌಕತ್, ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಪ್ರಧಾನ ಕಾರ್ಯದರ್ಶಿ ಹಾಗು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಂಚಾಲಕ ಅಶ್ರಫ್ ಹಾಜಿ ಬಳ್ಳಾರಿ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬೂ ಸುಹಾನಃ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ, ಸಯ್ಯಿದ್ ಮದನಿ ದರ್ಗಾ ಸಮಿತಿ ಸದಸ್ಯ ಅಬ್ದುಲ್ ಖಾದರ್ ಕೋಡಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಅಧ್ಯಕ್ಷ ಅಬ್ದುಸ್ಸಮದ್ ಹಳೆಕೋಟೆ, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾಧ್ಯಕ್ಷ ಸಿರಾಜುದ್ದೀನ್, ಎಸ್ ವೈ ಎಸ್ ಆಝಾದ್ ನಗರ ಬ್ರಾಂಚ್ ಅಧ್ಯಕ್ಷ ಆರ್. ಆರ್. ರಫೀಖ್, ಆಝಾದ್ ನಗರ ಬ್ರಾಂಚ್ ಕೋಶಾಧಿಕಾರಿ ಮುಹಮ್ಮದ್ ಫ್ಯಾನ್ಸಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಾರ್ಯದರ್ಶಿ ಇಲ್ಯಾಸ್ ಕೈಕೋ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮಿಕ್ದಾದ್ ಮುಕ್ಕಚ್ಚೇರಿ, ಎಸ್ಸೆಸ್ಸೆಫ್ ಆಝಾದ್ ನಗರ ಪ್ರಧಾನ ಕಾರ್ಯದರ್ಶಿ ಮುಝಫ್ಪರ್, ಅಬ್ದುಲ್ ಅಝೀಝ್ ಸೀ ರೋಡ್ ಕೋಡಿ, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಕಾರ್ಯಕಾರಿ ಸಮಿತಿ ಸದಸ್ಯ ಹಾಗು ಮುಡಿಪು ಸೆಕ್ಟರ್ ಉಸ್ತುವಾರಿ ಹಂಝ ಸುಂದರಭಾಗ್, ಸುಂದರಭಾಗ್ ಮಸೀದಿ ಉಸ್ತಾದ್ ಅಬ್ದುರ್ರಹ್ಮಾನ್ ಸಖಾಫಿ, ಎಸ್ಸೆಸ್ಸೆಫ್ ಸುಂದರಭಾಗ್ ಶಾಖಾಧ್ಯಕ್ಷ ಸಯೀದ್, ಸಯ್ಯಿದ್ ಮದನಿ ದರ್ಗಾ ಉಳ್ಳಾಲ ಇದರ ಸಮಿತಿ ಸದಸ್ಯರಾದ ಸೀದಿಯಾಕ ಸುಂದರಭಾಗ್ ಹಾಗು ಎಸ್ಸೆಸ್ಸೆಫ್ ಎಸ್ ವೈ ಎಸ್ ನಾಯಕರು ಕಾರ್ಯಕರ್ತರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment