Share To

Thursday, 23 February 2017

ಎಸ್ಸೆಸ್ಸೆಫ್, ಎಸ್ ವೈ ಎಸ್ ಮೇಲಂಗಡಿ ಆಶ್ರಯದಲ್ಲಿ ರಿಫಾಯೀ ಮಾಲೆ ಆಲಾಪನೆ, ಹಾಗು ಜಲಾಲಿಯ್ಯ ರಾತೀಬು

ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಹಾಗು ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ಜಂಟಿ ಆಶ್ರಯದಲ್ಲಿ 2017 ಫೆಬ್ರವರಿ 18 ಮತ್ತು 19 ರ ಮಗ್ರಿಬ್ ನಮಾಜು ಬಳಿಕ ರಿಫಾಯೀ ಮಾಲೆ ಆಲಾಪನೆ, ಹಾಗು ಜಲಾಲಿಯ್ಯ ರಾತೀಬು ಫಿರ್ದೌಸ್ ಅಪಾರ್ಟ್ ಮೆಂಟ್ ಮೇಲಂಗಡಿಯಲ್ಲಿ ನಡೆಯಿತು.
ರಿಫಾಯೀ ಮಾಲೆ ಆಲಾಪನೆ ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷ ಬಶೀರ್ ಸಖಾಫಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಜಲಾಲಿಯ್ಯ ರಾತೀಬ್ ಸಂಗಮ ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಅಬೂ ಅನಸ್ ಜಮಾಲ್ ಉಸ್ತಾದರ ಅಧ್ಯಕ್ಷತೆಯೊಂದಿಗೆ ಸಯ್ಯಿದ್ ಮುಷ್ತಾಕುರ್ರಹ್ಮಾನ್ ತಂಗಳ್ ಚಟ್ಟೆಕಲ್ಲು ಮಲಪ್ಪುರಂ ಇವರ ನೇತ್ರತ್ವದಲ್ಲಿ ನಡೆಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ನೂತನಾಧ್ಯಕ್ಷರಾಗಿ ಆಯ್ಕೆಯಾದ ಸಯ್ಯಿದ್ ಜಲಾಲ್ ತಂಗಳ್ ಇವರನ್ನು ಶಾಲುಹೊದಿಸಿ ಅಭಿನಂದಿಸಿ ಸನ್ಮಾನಿಸಲಾಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕೋಶಾಧಿಕಾರಿ ಇಸಾಕ್ ಪೇಟೆ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷ ತ್ವಾಹಿರ್ ಹಾಜಿ, ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಮಾಜಿ ಅಧ್ಯಕ್ಷ ಕರೀಂ ಹಾಜಿ, ಎಸ್ಸೆಸ್ಸೆಫ್ ಆಝಾದ್ ನಗರ ಶಾಖಾಧ್ಯಕ್ಷ ಹಾಫಿಝ್ ಮುಈನ್ ಉಳ್ಳಾಲ, ಸತ್ತಾರ್ ಮೇಲಂಗಡಿ, ಬಾವಾಕ ಫಿರ್ದೌಸ್ ಹಾಗು ಎಸ್ಸೆಸ್ಸೆಫ್ ಎಸ್ ವೈ ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಮೇಲಂಗಡಿ ಶಾಖಾ ಪ್ರಧಾನ ಕಾರ್ಯದರ್ಶಿ ತಶ್ರೀಫ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment