Share To

Tuesday, 21 February 2017

ಎಸ್ಸೆಸ್ಸೆಫ್ ಆಝಾದ್ ನಗರ ಶಾಖಾ ವತಿಯಿಂದ ಸ್ವಚ್ಛತಾ ಕಾರ್ಯಕ್ರಮ

ಎಸ್ಸೆಸ್ಸೆಫ್ ಆಝಾದ್ ನಗರ ಶಾಖಾ ವತಿಯಿಂದ ರಿಫಾಯೀ ಶೈಖ್ ಅನುಸ್ಮರಣಾ ಪ್ರಯುಕ್ತ ಮಾಸ್ತಿಕಟ್ಟೆ ಆಝಾದ್ ನಗರ ಮಸೀದಿ ಪರಿಸರದಿಂದ ಮಾಸ್ತಿಕಟ್ಟೆ ಜಂಕ್ಷನ್ ವರೆಗೆ ಸ್ವಚ್ಚತಾ ಕಾರ್ಯಕ್ರಮ ಶಾಖಾಧ್ಯಕ್ಷ ಹಾಫಿಝ್ ಮುಈನ್ ಉಳ್ಳಾಲ ಇವರ ನೇತ್ರತ್ವದಲ್ಲಿ ನಡೆಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಬಿ.ಜಿ.ಹನೀಫ್ ಹಾಜಿ, ಎಸ್ ವೈ ಎಸ್ ನಾಯಕರಾದ ಆರ್ ಕೆ ರಫೀಖ್, ಮೊಹಮ್ಮದ್ ಸಾಥ್ ನೀಡಿದರು.
ಎಸ್ಸೆಸ್ಸೆಫ್ ಆಝಾದ್ ನಗರ ಪ್ರಧಾನ ಕಾರ್ಯದರ್ಶಿ ಮುಝಫ್ಫರ್, ಕೋಶಾಧಿಕಾರಿ ಹಾಶಿಂ, ಸೈಫುದ್ದೀನ್, ನೌಶಾದ್, ಫವಾಝ್ ಕೈ ಜೋಡಿಸಿದರು. ಸಮಾರೋಪ ಸಮಾರಂಭದಲ್ಲಿ ಎಸ್ ವೈ ಎಸ್ ಕೋಡಿ ಕೋಟೆಪುರ ಬ್ರಾಂಚ್ ಅಧ್ಯಕ್ಷರಾದ ಹಮೀದ್ ಮುಸ್ಲಿಯಾರ್ ಭಾಗವಹಿಸಿದ್ದರು.

ಬಳಿಕ ನೀರು ಕುಡಿಯುವಾಗ ಪಾಲಿಸಬೇಕಾದ ಆರು ಪ್ರವಾದಿ ಸ.ಅ ಸುನ್ನತ್ತನ್ನು ತಿಳಿಸುವ ಸ್ಟಿಕ್ಕರನ್ನು ಪ್ರಥಮವಾಗಿ ಆಝಾದ್ ನಗರ ಮಾಸ್ತಿಕಟ್ಟೆ ಬಸ್ಸು ತಂಗುದಾಣದಲ್ಲಿರುವ ಫ್ರಿಡ್ಜ್ ಗೆ ಅಂಟಿಸುವ ಮೂಲಕ ಅಂಟಿಸುವ ಕಾರ್ಯಕ್ಕೆ ಚಾಲನೆ ನೀಡಲಾಯಿತು


No comments:

Post a Comment