ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧೀನದ ಆಝಾದ್ ನಗರ ಶಾಖೆಯ ಆಶ್ರಯದಲ್ಲಿ ಶೈಖ್ ರಿಫಾಯೀ ಖ.ಸಿ ಅನುಸ್ಮರಣಾ ಕಾರ್ಯಕ್ರಮ ಆಝಾದ್ ನಗರ ಶಾಖಾಧ್ಯಕ್ಷ ಹಾಫಿಝ್ ಮುಈನ್ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಆಝಾದ್ ನಗರದ ಮಂಚಿಲ ಮುಸ್ತಫ ಪ್ಯಾಲೇಸ್ ನಲ್ಲಿ ಜರುಗಿತು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷರಾದ ಮುಹಮ್ಮದ್ ಮದನಿ ಹಳೆಕೋಟೆ ದುವಾ ನೆರವೇರಿಸಿದರು. ದ.ಕ ಜಿಲ್ಲಾ ವಕ್ಫ್ ಸಲಹಾ ಸಮಿತಿ ಸದಸ್ಯರು ಹಾಗು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿಯಾದ ಬಿ.ಜಿ.ಹನೀಫ್ ಹಾಜಿ ಮಾಸ್ತಿಕಟ್ಟೆ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ಮಂಜೇಶ್ವರ ಮಂಡಲ ಅಧ್ಯಕ್ಷರಾದ ಶರೀಫ್ ಸಅದಿ ಅನುಸ್ಮರಣಾ ಪ್ರಭಾಷಣ ಮಾಡಿದರು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಹಾಗು ಆಝಾದ್ ನಗರ ಫಾರೂಖ್ ಜುಮಾ ಮಸೀದಿ ಪ್ರಧಾನ ಕಾರ್ಯದರ್ಶಿ ಹಾಗು ಉಳ್ಳಾಲ ನಗರಸಭಾ ಸದಸ್ಯ ಶೌಕತ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ನೀರು ಕುಡಿಯುವಾಗ ಪಾಲಿಸಬೇಕಾದ ಆರು ಪ್ರವಾದಿ ಸುನ್ನತ್ ಗಳನ್ನು ತಿಳಿಸುವ ಪೋಸ್ಟರನ್ನು ಬಿಡುಗಡೆಗೊಳಿಸಲಾಯಿತು.
ಎಸ್ ವೈ ಎಸ್ ನಾಯಕ ಆರ್ ಕೆ ರಫೀಖ್, ಎಸ್ಸೆಸ್ಸೆಫ್ ಆಝಾದ್ ನಗರ ಕೋಶಾಧಿಕಾರಿ ಹಾಶಿಂ ಹಾಗು ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು. ಆಝಾದ್ ನಗರ ಪ್ರಧಾನ ಕಾರ್ಯದರ್ಶಿ ಮುಝಫ್ಫರ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Monday, 20 February 2017
ಆಝಾದ್ ನಗರ ಶಾಖೆಯ ಆಶ್ರಯದಲ್ಲಿ ಶೈಖ್ ರಿಫಾಯೀ ಖ.ಸಿ ಅನುಸ್ಮರಣಾ ಕಾರ್ಯಕ್ರಮ
Subscribe to:
Post Comments (Atom)
No comments:
Post a Comment