Share To

Friday, 10 February 2017

ಎಸ್ಸೆಸ್ಸೆಫ್ ಮೇಲಂಗಡಿ ಶಾಖೆ ಹಾಗು ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ವತಿಯಿಂದ ರಿಫಾಯೀ ಶೈಖ್ ಅನುಸ್ಮರಣಾ ಪ್ರಯುಕ್ತ ಹಣ್ಣು ಹಂಪಲು ವಿತರಣೆ

ಎಸ್ಸೆಸ್ಸೆಫ್ ಮೇಲಂಗಡಿ ಶಾಖೆ ಹಾಗು ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಜಂಟಿ ಆಶ್ರಯದಲ್ಲಿ ಶೈಖ್ ಅಹ್ಮದುಲ್ ಕಬೀರುರ‍್ರಿಫಾಯೀ ಅನುಸ್ಮರಣಾ ಪ್ರಯುಕ್ತ ಹಣ್ಣು ಹಂಪಲು ವಿತರಣೆ ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷರಾದ ಅಬೂ ಅನಸ್ ಜಮಾಲ್ ಉಸ್ತಾದ್ ರವರ ಅಧ್ಯಕ್ಣತೆಯಲ್ಲಿ ನಡೆಯಿತು.
ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿದರು. ಕಾರ್ಯಕ್ರಮವನ್ನು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಉದ್ಘಾಟಿಸಿದರು. ಮನೆ ಮನೆಗೆ ತೆರಳಿ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಿಹಾಬ್ ಬೆಂಗಳೂರು ಹಾಗು ಎಸ್ಸೆಸ್ಸೆಫ್ ಎಸ್ ವೈ ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಮೇಲಂಗಡಿ ಶಾಖೆಯ ಪ್ರಧಾನ ಕಾರ್ಯದರ್ಶಿ ತಶ್ರೀಫ್ ಮೇಲಂಗಡಿ ಸ್ವಾಗತಿಸಿದರು.

No comments:

Post a Comment