Share To

Friday, 31 March 2017

ಉಳ್ಳಾಲಬೈಲು ಬೊಟ್ಟು : ಮೆಸೇಜ್ ಆಫ್ ರಜಬ್ ಸಂಗಮ






ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ಆಶ್ರಯದಲ್ಲಿ ಮೆಸೇಜ್ ಆಫ್ ಹೋಲಿ ರಜಬ್ ಸಂಗಮ ಶಾಖಾಧ್ಯಕ್ಷ ಇಸ್ಮಾಯಿಲ್ ನವಾಝ್ ಯು.ಬಿ ಯವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಉದ್ಘಾಟಿಸಿದರು. ಎಸ್ಸೆಸ್ಸೆಫ್ ಉಳ್ಳಾಲ ಬೈಲು ಬೊಟ್ಟು ವಿಗೆ ನೂತನ ಉಸ್ತುವಾರಿಯಾಗಿ ಆಯ್ಕೆಯಾದ ಶಾಹುಲ್ ಹಮೀದ್ ಜೌಹರಿ ಅಕ್ಕರೆಕೆರೆ ರಜಬ್ ಸಂದೇಶ ತರಗತಿ ನಡೆಸಿದರು. ಈ ಸಂದರ್ಭದಲ್ಲಿ ಜೌಹರಿ ಉಸ್ತಾದಿಗೆ ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ವತಿಯಿಂದ ಶಾಲುಹೊದಿಸಿ ಸನ್ಮಾನಿಸಲಾಯಿತು. ಬಳಿಕ ರಿಯಾಝ್ ಉಸ್ತಾದ್ ರವರ ಮೇಲೆ ತಹ್ಲೀಲ್ ಸಮರ್ಪಿಸಲಾಯಿತು.
ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ, ಶಫೀಖ್ ಮೇಲಂಗಡಿ, ಖಲೀಲ್ ಉಳ್ಳಾಲಬೈಲು, ದಾವೂದ್ ಹಾಗು ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು.  ಜೊತೆ ಕಾರ್ಯದರ್ಶಿ ಹಪೀಝ್ ಬೊಟ್ಟು ಸ್ವಾಗತಿಸಿ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಯುಬಿ ಧನ್ಯವಾದಗೈದರು.

No comments:

Post a Comment