ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ರಜಬ್ ಸಂದೇಶ ಉದ್ಘಾಟನಾ ಸಮಾರಂಭ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಕೈಕೋವಿನ ಇಲ್ಯಾಸ್ ಪ್ಯಾಲೇಸ್ ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಅಬೂ ಅನಸ್ ಜಮಾಲ್ ಉಸ್ತಾದ್ ರಜಬ್ ಸಂದೇಶ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಹಳೆಕೋಟೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಕಾಸರಗೋಡ್ ಚೂರಿ ಮಸೀದಿಯಲ್ಲಿ ದುಷ್ಕರ್ಮಿಗಳಿಂದ ಭೀಕರವಾಗಿ ಕೊಲೆಯಾದ ರಿಯಾಝ್ ಉಸ್ತಾದರ ಮೇಲೆ ತಹ್ಲೀಲ್ ಸಮರ್ಪಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಸೆಕ್ಟರ್ ನೂತನ ಮೂರನೇ ಉಪಾಧ್ಯಕ್ಷರಾಗಿ ಅತೀಖ್ ಕೋಡಿ, ನೂತನ ಎರಡನೇ ಜೊತೆ ಕಾರ್ಯದರ್ಶಿಯಾಗಿ ಹಂಝ ಸುಂದರಿಬಾಗ್, ಮೂರನೇ ಜೊತೆ ಕಾರ್ಯದರ್ಶಿಯಾಗಿ ಇಕ್ಬಾಲ್ ಒಂಭತ್ತುಕೆರೆ, ನೂತನ ಕ್ಯಾಂಪಸ್ ಕಾರ್ಯದರ್ಶಿಯಾಗಿ ಫಾಳಿಲ್ ಮೇಲಂಗಡಿ, ಹಾಗು ಎಸ್ ಬಿ ಎಸ್ ಸಂಚಾಲಕರಾಗಿ ಮುಹಾಝ್ ಬಂಡಿಕೊಟ್ಯ ಇವರನ್ನು ಆರಿಸಲಾಯಿತು. ಸೆಕ್ಟರ್ ನ ಹನ್ನೊಂದು ಶಾಖೆಗಳಿಗೆ ಉಸ್ತುವಾರಿಗಳನ್ನು ನೇಮಿಸಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಕ್ಟರ್ ಉಪಾಧ್ಯಕ್ಷ ಮಿಕ್ದಾದ್ ಮುಕ್ಕಚ್ಚೇರಿ, ಸೆಕ್ಟರ್ ಕೋಶಾಧಿಕಾರಿ ಶಬೀರ್, ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಹಾಗು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
No comments:
Post a Comment