Share To

Saturday, 11 March 2017

ರಿಫಾಈ ಶೈಖ್ ಅನುಸ್ಮರಣಾ ಸಂಗಮ, ತಹ್ಲೀಲ್ ಮಜ್ಲಿಸ್ ಹಾಗು ಮೆಹಫಿಲೇ ತ್ವಯ್ಬಃ ದ್ಸಿಕ್ರ್ ಮಜ್ಲಿಸ್

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ರಿಫಾಈ ಶೈಖ್ ಅನುಸ್ಮರಣಾ ಸಂಗಮ ಹಾಗು ತಹ್ಲೀಲ್ ಮಜ್ಲಿಸ್ ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷ ಅಬೂ ಅನಸ್ ಜಮಾಲ್ ಉಸ್ತಾದರ ಅಧ್ಯಕ್ಷತೆಯಲ್ಲಿ ಜೀಲಾನೀ ಅಪಾರ್ಟ್ ಮೆಂಟ್ ನಲ್ಲಿ ನಡೆಯಿತು.
ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬೂ ಸುಹಾನಃ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಆಶ್ರಯದಲ್ಲಿ ಮೆಹಫಿಲೇ ತ್ವಯ್ಬಃ ದ್ಸಿಕ್ರ್ ಮಜ್ಲಿಸ್ ನಡೆಯಿತು.
ಕೇರಳ ರಾಜ್ಯ ಎಸ್ಸೆಸ್ಸೆಫ್ ಮಾಜಿ ಡೆಪ್ಯೂಟಿ ಅಧ್ಯಕ್ಷರಾದ ಹಸ್ಬುಲ್ಲಾಹ್ ತಲಂಗರೆ, ಕಾಸರಗೋಡ್ ಜಿಲ್ಲಾ ಎಸ್ಕೆಎಸ್ಸೆಸ್ಸೆಫ್ ನಾಯಕ ಸಈದ್ ಮೌಲವಿ, ಎಸ್ ವೈ ಎಸ್ ಸಜಿಪನಡು ಬ್ರಾಂಚ್ ಪ್ರಧಾನ ಕಾರ್ಯದರ್ಶಿ ಅಬ್ದುಲ್ಲತೀಫ್ ಅಶ್ಅರೀ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷರಾದ ಮುಹಮ್ಮದ್ ಮದನಿ ಹಳೆಕೋಟೆ ಹಾಗು ಮಿಕ್ದಾದ್ ಮುಕ್ಕಚ್ಚೇರಿ, ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಜೊತೆ ಕಾರ್ಯದರ್ಶಿ ಹನೀಫ್ ಬೊಟ್ಟು, ಸಯ್ಯಿದ್ ಮದನಿ ದರ್ಗಾ ಸಮಿತಿ ಸದಸ್ಯ ಅಬ್ದುಲ್ ಕಾದರ್ ಔದಿ ಕೋಡಿ, ಅಬ್ದುಲ್ ಅಝೀಝ್ ಸೀರೋಡ್, ಕರೀಂ ಹಾಜಿ ಮೇಲಂಗಡಿ, ಮುಸ್ತಫ ಟಿಂಬರ್, ರಹ್ಮತ್ ರಿಕ್ಷಾ, ಎಸ್ಸೆಸ್ಸೆಫ್ ಮೇಲಂಗಡಿ ಜೊತೆ ಕಾರ್ಯದರ್ಶಿ ಶಫೀಖ್ ಹಾಗು ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾಧ್ಯಕ್ಷ ಸಿರಾಜುದ್ದೀನ್ ಉಪಸ್ಥಿತರಿದ್ದರು.

No comments:

Post a Comment