Share To

Thursday, 30 March 2017

ಆಝಾದ್ ನಗರ : ರಜಬ್ ಸಂದೇಶ ಉದ್ಘಾಟನಾ ಸಮಾರಂಭ ಹಾಗು ರಿಯಾಝ್ ಉಸ್ತಾದ್ ಮೇಲೆ ತಹ್ಲೀಲ್ ಸಮರ್ಪಣೆ




ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ಶಾಖಾ ರಜಬ್ ಸಂದೇಶ ಉದ್ಘಾಟನಾ ಸಮಾರಂಭ ಮಾಸ್ತಿಕಟ್ಟೆ ಆಝಾದ್ ನಗರದ ಮುಸ್ತಫ ಪ್ಯಾಲೇಸ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಖಾಧ್ಯಕ್ಷರಾದ ಹಾಫಿಝ್ ಮುಈನ್ ಉಸ್ತಾದ್ ರಜಬ್ ತಿಂಗಳ ಇಪ್ಪತ್ತೇಳರಂದು ಪ್ರವಾದಿ ಸ್ವಲ್ಲಲ್ಲಾಹು ಅಲೈಹಿ ವಸಲ್ಲಮರ ಮೂಲಕ ನಡೆದ ಚಾರಿತ್ರಿಕ ಘಟನೆಯಾದ ಇಸ್ರಾಅ್ ಮಿಹ್ರಾಜಿನ ಕುರಿತು ತಿಳಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ರಜಬ್ ಸಂದೇಶ ತರಗತಿಗೆ ಚಾಲನೆ ನೀಡಿದರು. ಬಳಿಕ ಇತ್ತೀಚೆಗೆ ಕಾಸರಗೋಡಿನ ಚೂರಿ ಮಸೀದಿಯಲ್ಲಿ ದುಷ್ಕರ್ಮಿಗಳ ಅಟ್ಟಹಾಸಕ್ಕೆ ಬಲಿಯಾದ ರಿಯಾಝ್ ಉಸ್ತಾದ್ ಮೇಲೆ ತಹ್ಲೀಲ್ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ಶಾಖಾಧ್ಯಕ್ಷ ಇಸ್ಮಾಯಿಲ್ ಯು.ಬಿ, ಕೋಟೆಪುರ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ, ಕೋಡಿ ಶಾಖಾ ಪ್ರಧಾನ ಕಾರ್ಯದರ್ಶಿ ಹಾಗು ಆಝಾದ್ ನಗರ ಉಸ್ತುವಾರಿ ಹಫೀಝ್ ಕೋಡಿ, ಒಂಭತ್ತುಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ನಿಝಾಂ ಒಂಭತ್ತುಕೆರೆ, ಆಝಾದ್ ನಗರ ಶಾಖಾ ಉಪಾಧ್ಯಕ್ಷ ಅತಾವುಲ್ಲಾಹ್, ಫವಾಝ್, ರಶಾದ್ ಹಾಗು ಆಝಾದ್ ನಗರ ಎಸ್ಸೆಸ್ಸೆಫ್ ಕಾರ್ಯಕರ್ತರು ಉಪಸ್ಥಿತರಿದ್ದರು. ಆಝಾದ್ ನಗರ ಶಾಖಾ ಪ್ರಧಾನ ಕಾರ್ಯದರ್ಶಿ ಮುಝಫ್ಫರ್ ಸ್ವಾಗತಿಸಿ ಕಾರ್ಯಕ್ರಮದ ಕೊನೆಗೆ ಧನ್ಯವಾದಗೈದರು.


No comments:

Post a Comment