ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ವತಿಯಿಂದ ಮರ್ಹೂಂ ರಿಯಾಝ್ ಉಸ್ತಾದ್ ರವರ ಮೇಲೆ ತಹ್ಲೀಲ್ ಮಜ್ಲೀಸ್ ಮತ್ತು ರಜಬ್ ಸಂದೇಶ ತರಗತಿ ಶಾಖಾ ಉಪಾಧ್ಯಕ್ಷ ತೌಸೀಫ್ ಎಸ್ ಬಿ ಇವರ ಅಧ್ಯಕ್ಷತೆಯಲ್ಲಿ ಹಳೆಕೋಟೆಯ ಎಸ್ಸೆಸ್ಸೆಫ್ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು.
ಹಳೆಕೋಟೆ ಶಾಖಾ ಉಸ್ತುವಾರಿ ತಶ್ರೀಫ್ ಮೇಲಂಗಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಹಳೆಕೋಟೆ ತಹ್ಲೀಲ್ ಸಂಗಮದಲ್ಲಿ ನೇತ್ರತ್ವ ವಹಿಸಿ ದುವಾ ನೆರವೇರಿಸಿದರು. ಸುನ್ನೀವಾಣಿ ಸಂಪಾದಕ ಯೂನುಸ್ ಇಮ್ದಾದಿ ರಜಬ್ ಸಂದೇಶ ತರಗತಿಗೆ ಚಾಲನೆ ನೀಡಿದರು.
ಶಾಖಾ ಉಪಾಧ್ಯಕ್ಷರುಗಳಾದ ಹಮೀದ್ ಮತ್ತು ತೌಸೀಫ್, ಜೊತೆ ಕಾರ್ಯದರ್ಶಿಗಳಾದ ಹಕೀಮ್ ಮತ್ತು ಇಬ್ರಾಹೀಂ, ಬಾಶಿತ್, ಫಾರೀಷ್, ಶಾಹಿದ್, ಸಂಶೀರ್,ಹಫೀಲ್, ಅಕೀಲ್ , ಇಜಾಝ್,ಬಾರಿಝ್, ಶಕೀಲ್ ಹಾಗು ಇತರರು ಉಪಸ್ಥಿತರಿದ್ದರು. ಎಸ್ಸೆಸ್ಸೆಫ್ ಹಳೆಕೋಟೆ ಶಾಖಾ ಪ್ರಧಾನ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
Tuesday, 28 March 2017
ಹಳೆಕೋಟೆ : ರಿಯಾಝ್ ಉಸ್ತಾದ್ ರವರ ಮೇಲೆ ತಹ್ಲೀಲ್ ಮಜ್ಲೀಸ್ ಮತ್ತು ರಜಬ್ ಸಂದೇಶ ತರಗತಿ
Labels:
ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Subscribe to:
Post Comments (Atom)
No comments:
Post a Comment