ಎಸ್ಸೆಸ್ಸೆಫ್ ಒಂಭತ್ತುಕೆರೆ ಶಾಖೆ ಆಶ್ರಯದಲ್ಲಿ ರಜಬ್ ಸಂದೇಶ ತರಗತಿ ಹಾಗು ಎಸ್ ವೈ ಎಸ್ ನಾಯಕರಿಗೆ ಅಭಿನಂದನಾ ಸಂಗಮ ಶಾಖಾಧ್ಯಕ್ಷ ತೌಸೀಫ್ ಯು ಟಿ ಯವರ ಅಧ್ಯಕ್ಷತೆಯಲ್ಲಿ ಒಂಭತ್ತುಕೆರೆಯ ಕುಬ್ರಾ ಗಾರ್ಡನ್ ನಲ್ಲಿ ಜರುಗಿತು.
ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ರಜಬ್ ಸಂದೇಶ ತರಗತಿ ನಡೆಸಿದರು. ಒಂಭತ್ತುಕೆರೆ ಶಾಖಾ ಉಸ್ತುವಾರಿ ಮುಝಮ್ಮಿಲ್ ಉಸ್ತಾದ್ ಕೋಟೆಪುರ ಹಾಗು ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಂಚಾಲಕ ಅಶ್ರಫ್ ಹಾಜಿ ಮುಕ್ಕಚ್ಚೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಬಳಿಕ ಎಸ್ ವೈ ಎಸ್ ನಾಯಕರಾದ ಬದ್ರುದ್ದೀನ್ ಹಾಜಿ, ತಂಝೀಲ್ ಯು.ಟಿ ಹಾಗು ಅಶ್ರಫ್ ಹಾಜಿ ಮುಕ್ಕಚ್ಚೇರಿ ಇವರಿಗೆ ಶಾಖೆಯ ವತಿಯಿಂದ ಅಭಿನಂದನಾ ಪತ್ರವನ್ನು ಹಸ್ತಾಂತರಿಸಲಾಯಿತು. ಕಾರ್ಯಕ್ರಮದಲ್ಲಿ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಯಾದ ಕೊಟ್ಟಮುಡಿ ಆಝಾದ್ ನಗರದ ರಿಯಾಝ್ ಉಸ್ತಾದರ ಮೇಲೆ ತಹ್ಲೀಲ್ ಸಮರ್ಪಿಸಿ ದುವಾ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ಮುಕ್ಕಚ್ಚೇರಿ ಶಾಖಾಧ್ಯಕ್ಷ ಅಹ್ಸನ್ ಮುಕ್ಕಚ್ಚೇರಿ, ಒಂಭತ್ತುಕೆರೆ ಕೋಶಾಧಿಕಾರಿ ವಾಸಿಂ, ಕ್ಯಾಂಪಸ್ ಕಾರ್ಯದರ್ಶಿ ಶಾಹಿನ್, ಸೆಕ್ಟರ್ ಜೊತೆ ಕಾರ್ಯದರ್ಶಿಗಳಾದ ಇಕ್ಬಾಲ್ ಒಂಭತ್ತುಕೆರೆ ಹಾಗು ಹಫೀಝ್ ಬೊಟ್ಟು ಉಪಸ್ಥಿತರಿದ್ದರು. ಶಾಖಾ ಪ್ರಧಾನ ಕಾರ್ಯದರ್ಶಿ ನಿಝಾಂ ಧನ್ಯವಾದಗೈದರು.
Sunday, 2 April 2017
ಎಸ್ಸೆಸ್ಸೆಫ್ ಒಂಭತ್ತುಕೆರೆ ಶಾಖೆ ಆಶ್ರಯದಲ್ಲಿ ರಜಬ್ ಸಂದೇಶ ತರಗತಿ ಹಾಗು ಎಸ್ ವೈ ಎಸ್ ನಾಯಕರಿಗೆ ಅಭಿನಂದನಾ ಸಂಗಮ
Subscribe to:
Post Comments (Atom)
No comments:
Post a Comment