ಎಸ್ಸೆಸ್ಸೆಫ್ ಸಂಸ್ಥಾಪನಾ ದಿನದ ಅಂಗವಾಗಿ ಎಸ್ಸೆಸ್ಸೆಫ್ ಉಳ್ಳಾಲ ಮುಕ್ಕಚ್ವೇರಿ ಶಾಖೆಯ ಆಶ್ರಯದಲ್ಲಿ ಧ್ವಜ ದಿನಾಚರಣೆ ಹಾಗು ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖೆಯ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಸಯ್ಯಿದ್ ಜಲಾಲ್ ತಂಗಳ್, ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಮಾಜಿ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷ ಹೈದರ್ ಮುಕ್ಕಚ್ಚೇರಿ, ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖಾಧ್ಯಕ್ಷ ಅಹ್ಸನ್, ಮುಕ್ಕಚ್ಚೇರಿ ಜುಮಾ ಮಸೀದಿ ಉಸ್ತಾದ್ ಇವರುಗಳ ನೇತ್ರತ್ವದಲ್ಲಿ ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖೆಯ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಲಾಯಿತು. ಸಯ್ಯಿದ್ ಜಲಾಲ್ ತಂಗಳ್ ದುವಾ ನೆರವೇರಿಸಿದರು. ಇಮ್ತಿಯಾಝ್ ಮೇಲಂಗಡಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.
ಈ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮಿಕ್ದಾದ್ ಮುಕ್ಕಚ್ಚೇರಿ, ಮುಸ್ತಫ ಮಾಸ್ಟರ್ ಉಳ್ಳಾಲ ಹಾಗು ಹೈದರಾಕ ಉಪಸ್ಥಿತರಿದ್ದರು.
Saturday, 29 April 2017
ಮುಕ್ಕಚ್ಚೇರಿ : ಧ್ವಜ ದಿನಾಚರಣೆ ಹಾಗು ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖೆಯ ಕಟ್ಟಡಕ್ಕೆ ಶಿಲಾನ್ಯಾಸ ಕಾರ್ಯಕ್ರಮ
Subscribe to:
Post Comments (Atom)
No comments:
Post a Comment