Share To

Saturday, 15 April 2017

ವೈವಾಹಿಕ ಬದುಕಿಗೆ ಪಾದಾರ್ಪಣೆಗೈದ ಶಾಹುಲ್ ಹಮೀದ್ ಜೌಹರಿಗೆ ಸನ್ಮಾನ

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕಾರ್ಯಕಾರಿ ಸಮಿತಿ ಸದಸ್ಯ, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಉಪಾಧ್ಯಕ್ಷ ಹಾಗು ಎಸ್ಸೆಸ್ಸೆಫ್ ಉಳ್ಳಾಲಬೈಲು ಬೊಟ್ಟು ಶಾಖಾ ಉಸ್ತುವಾರಿ ಶಾಹುಲ್ ಹಮೀದ್ ಜೌಹರಿ SYS ಮುಡಿಪು ಸೆಂಟರ್ ಆಶ್ರಯದಲ್ಲಿ ಸುಲ್ತಾನುಲ್ ಉಲಮಾ ಎಪಿ ಉಸ್ತಾದರ ನೇತ್ರತ್ವದಲ್ಲಿ ನಡೆದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ವೈವಾಹಿಕ ಸುರ ಸುಂದರ ಬದುಕಿಗೆ ಪಾದಾರ್ಪಣೆಗೈದರು. ನಿಕಾಹ್ ಸಂಭ್ರಮದ ಬಳಿಕ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ವತಿಯಿಂದ ಶಾಹುಲ್ ಹಮೀದ್ ಜೌಹರಿ ಇವರಿಗೆ ವೈವಾಹಿಕ ಮಂಗಳಾಶಂಶೆಯನ್ನು ಅರ್ಪಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಉಳ್ಳಾಲ, ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ನಿಕಟಪೂರ್ವ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ, ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಕೋಶಾಧಿಕಾರಿ ಅಬ್ದುರ್ರಹ್ಮಾನ್ ಅಕ್ಕರೆಕೆರೆ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ನಾಝಿಂ ಮುಕ್ಕಚ್ಚೇರಿ, ಅಝೀಝ್ ಸಖಾಫಿ ಅಕ್ಕರೆಕೆರೆ, ಇಮ್ರಾನ್ ಕೋಟೆಪುರ ಉಪಸ್ಥಿತರಿದ್ದರು.

2 comments: