ಎಸ್ಸೆಸ್ಸೆಫ್ ಮೇಲಂಗಡಿ ಶಾಖೆ ಹಾಗು ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಜಂಟಿ ಆಶ್ರಯದಲ್ಲಿ ಮಾಸಿಕ ಜಲಾಲಿಯ್ಯಃ ರಾತೀಬ್ ಹಾಗು ರಜಬ್ ಸಂದೇಶ ಕಾರ್ಯಕ್ರಮ ಶಾಖಾಧ್ಯಕ್ಷ ಜಮಾಲುದ್ದೀನ್ ಮುಸ್ಲಿಯಾರ್ ರವರ ಅಧ್ಯಕ್ಷತೆಯಲ್ಲಿ ಮೇಲಂಗಡಿಯ ಫಿರ್ದೌಸ್ ಅಪಾರ್ಟ್ ಮೆಂಟ್ ನಲ್ಲಿ ನಡೆಯಿತು. ಬ್ರಾಂಚ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಜಲಾಲಿಯ್ಯಃ ರಾತೀಬ್ ಮಜ್ಲಿಸಿನ ನೇತ್ರತ್ವವನ್ನು ಸಯ್ಯಿದ್ ಮುಷ್ತಾಕುರ್ರಹ್ಮಾನ್ ತಂಗಳ್ ವಹಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ರಜಬ್ ಸಂದೇಶ ತರಗತಿ ನಡೆಸಿದರು.
ಕಾರ್ಯಕ್ರಮದಲ್ಲಿ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್, ಯೂಸುಫ್ ಹಾಜಿ, ಅಬ್ದುಲ್ ಖಾದರ್, ನವಾಝ್, ಸತ್ತಾರ್, ಸಮದ್, ಶಫೀಕ್, ಸಫ್ವಾನ್, ಸಿರಾಜುದ್ದೀನ್ ಅಕ್ಕರೆಕೆರೆ, ರಶೀದ್ ಹಾಗು ಇನ್ನಿತರ ಎಸ್ಸೆಸ್ಸೆಫ್, ಎಸ್ ವೈ ಎಸ್ ಕಾರ್ಯಕರ್ತರು ಉಪಸ್ಥಿತರಿದ್ದರು. ಶಾಖಾ ಪ್ರಧಾನ ಕಾರ್ಯದರ್ಶಿ ತಶ್ರೀಫ್ ಸ್ವಾಗತಿಸಿ ಕೊನೆಗೆ ವಂದಿಸಿದರು.
( ವರದಿ : ತಶ್ರೀಫ್ )
ಪ್ರಧಾನ ಕಾರ್ಯದರ್ಶಿ SSF ಮೇಲಂಗಡಿ ಶಾಖೆ
No comments:
Post a Comment