Share To

Monday, 24 April 2017

ಎಸ್ಸೆಸ್ಸೆಫ್ ಮುಕ್ಕಚ್ಚೇರಿ : ದಶ ವಾರ್ಷಿಕ ಸಂಭ್ರಮದ ಪ್ರಯುಕ್ತ ಗಡಿಯಾರ ವಿತರಣೆ

ಎಸ್ಸೆಸ್ಸೆಫ್ ಮುಕ್ಕಚ್ಚೇರಿ ಶಾಖೆಯ ದಶ ವಾರ್ಷಿಕ ಸಂಭ್ರಮದ ಪ್ರಯುಕ್ತ ಸರಕಾರಿ ಶಾಲೆ, ಆಸ್ಪತ್ರೆ, ಪೋಲೀಸ್ ಸ್ಟೇಶನ್ ಹಾಗು ಇನ್ನಿತರ ಸ್ಥಳಗಳಿಗೆ ಗಡಿಯಾರ ವಿತರಣಾ ಕಾರ್ಯಕ್ರಮ ಶಾಖಾಧ್ಯಕ್ಷ ಅಹ್ಸನ್ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಕ್ಕಚ್ಚೇರಿ ಮಸೀದಿಯ ಇಮಾಮರಾದ ಅಬ್ದುರ್ರಹ್ಮಾನ್ ಸಅದಿ ಗಡಿಯಾರ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಮೇಲಂಗಡಿ ಶಾಖಾಧ್ಯಕ್ಷರಾದ ಅಬೂ ಅನಸ್ ಜಮಾಲ್ ಉಸ್ತಾದ್ ಹಾಗು ಮುಸ್ತಫ ಮಾಸ್ಟರ್ ಮುಕ್ಕಚ್ಚೇರಿ ಮಾತನಾಡಿದರು.
ಈ ಸಂದರ್ಭದಲ್ಲಿ ಮುಕ್ಕಚ್ಚೇರಿ ಜುಮಾ ಮಸ್ಜಿದ್ ಅಧ್ಯಕ್ಷರಾದ ಇಸ್ಮಾಯಿಲ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಸಂಚಾಲಕ ಅಶ್ರಫ್ ಹಾಜಿ ಬಳ್ಳಾರಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷ ಹೈದರ್ ಮುಕ್ಕಚ್ಚೇರಿ, ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಮಿಕ್ದಾದ್ ಮುಕ್ಕಚ್ಚೇರಿ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಾರ್ಯಕಾರಿ ಸಮಿತಿ ಸದಸ್ಯ ಖಲೀಲ್ ಉಳ್ಳಾಲಬೈಲು ಹಾಗು ಫಾರೂಖ್ ಮುಕ್ಕಚ್ಚೇರಿ ಉಪಸ್ಥಿತರಿದ್ದರು.

No comments:

Post a Comment