Share To

Saturday, 22 April 2017

ಉಳ್ಳಾಲ ಸೆಕ್ಟರ್ : ಇಮಾಮ್ ಶಾಫಿಈ ರ .ಅ ಅನುಸ್ಮರಣೆ ಹಾಗು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಜಲೀಲ್ ಕರೋಪಾಡಿ ಇವರ ಮೇಲೆ ತಹ್ಲೀಲ್ ಸಮರ್ಪಣೆ

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಇಮಾಮ್ ಶಾಫಿಈ ರ .ಅ ಅನುಸ್ಮರಣೆ ಹಾಗು ದುಷ್ಕರ್ಮಿಗಳಿಂದ ಹತ್ಯೆಗೀಡಾದ ಜಲೀಲ್ ಕರೋಪಾಡಿ ಇವರ ಮೇಲೆ ತಹ್ಲೀಲ್ ಸಮರ್ಪಣೆ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಎಸ್ಸೆಸ್ಸೆಫ್ ಕೋಡಿ ದೋಟ ಶಾಖಾ ಕಛೇರಿಯಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಮೇಲಂಗಡಿ ಶಾಖಾಧ್ಯಕ್ಷರಾದ ಅನಸ್ ಝಿಯಾರತ್ ಟೂರ್ಸ್ ಮಾಲಕ ಅಬೂ ಅನಸ್ ಜಮಾಲ್ ಉಸ್ತಾದ್ ದುವಾ ನೆರವೇರಿಸಿದರು. ಕಾರ್ಯಕ್ರಮವನ್ನು ಉಳ್ಳಾಲ ಸೆಕ್ಟರ್ ಕ್ಯಾಂಪಸ್ ಚೇರಮಾನ್ ಮುಹಮ್ಮದ್ ಮದನಿ ಹಳೆಕೋಟೆ ಉದ್ಘಾಟಿಸಿದರು. ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ತಹ್ಲೀಲ್ ಕಾರ್ಯಕ್ರಮಕ್ಕೆ ನೇತ್ರತ್ವ ನೀಡಿ ಅನುಸ್ಮರಣಾ ಭಾಷಣ ಮಾಡಿದರು.
ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಉಪಾಧ್ಯಕ್ಷ ಅತೀಖ್ ಕೋಡಿ, ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ, ಸೆಕ್ಟರ್ ಕ್ಯಾಂಪಸ್ ಕನ್ವೀನರ್ ಫಾಳಿಲ್ ಮೇಲಂಗಡಿ, ಎಸ್ ಬಿ ಎಸ್ ಉಳ್ಳಾಲ ಝೋನ್ ಸಂಚಾಲಕ ಮುಹಾಝ್ ಬಂಡಿಕೊಟ್ಯ, ಎಸ್ಸೆಸ್ಸೆಫ್ ಆಝಾದ್ ನಗರ ಪ್ರಧಾನ ಕಾರ್ಯದರ್ಶಿ ಮುಝಫ್ಫರ್ ಮಾಸ್ತಿಕಟ್ಟೆ, ಕೋಟೆಪುರ ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ, ಒಂಭತ್ತುಕೆರೆ ಶಾಖಾಧ್ಯಕ್ಷ ತೌಸೀಫ್ ಒಂಭತ್ತುಕೆರೆ, ಒಂಭತ್ತುಕೆರೆ ಪ್ರಧಾನ ಕಾರ್ಯದರ್ಶಿ ನಿಝಾಂ ಒಂಭತ್ತುಕೆರೆ, ಮುಕ್ಕಚ್ಚೇರಿ ಶಾಖಾಧ್ಯಕ್ಷ ಅಹ್ಸನ್, ಉಳ್ಳಾಲಬೈಲು ಜೊತೆ ಕಾರ್ಯದರ್ಶಿ ಅರಫಾತ್  ಉಳ್ಳಾಲಬೈಲು ಹಾಗು ಮುಹಮ್ಮದ್ ಕೈಕೋ ಉಪಸ್ಥಿತರಿದ್ದರು. ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿ ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಧನ್ಯವಾದಗೈದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಇಕ್ಬಾಲ್ ಒಂಭತ್ತುಕೆರೆ ನಿರೂಪಿಸಿದರು.

ವರದಿ : ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
ಮಾಧ್ಯಮ ಕಾರ್ಯದರ್ಶಿ ಎಸ್ ವೈ ಎಸ್ ಉಳ್ಳಾಲ ಸೆಂಟರ್

No comments:

Post a Comment