ಎಸ್ಸೆಸ್ಸೆಫ್ ಉಳ್ಳಾಲ ಕೋಟೆಪುರ ಶಾಖೆಯ ಆಶ್ರಯದಲ್ಲಿ ಮೆಸೇಜ್ ಆಫ್ ಹೋಲಿ ರಜಬ್ ಸಂಗಮ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್ ಕೋಟೆಪುರ ಇವರ ಅಧ್ಯಕ್ಷತೆಯಲ್ಲಿ ಶಾಖಾ ಕಛೇರಿಯಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉಳ್ಳಾಲ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಉದ್ಘಾಟಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಉಪಾಧ್ಯಕ್ಷರಾದ ಬಶೀರ್ ಅಹ್ಸನಿ ತೋಡಾರ್ ರಜಬ್ ಸಂದೇಶ ತರಗತಿ ನಡೆಸಿದರು. ಉತ್ಸಾಹಿ ಯುವ ವಾಗ್ಮಿ ಹಾಫಿಝ್ ಉವೈಸ್ ಕೊಟೆಪುರ ಪ್ರಾಸ್ತಾವಿಕವಾಗಿ ಮಾತನಾಡಿದರು. ಕೋಟೆಪುರ ಶಾಖಾ ನೂತನ ಉಸ್ತುವಾರಿ ನವಾಝ್ ಮೇಲಂಗಡಿ ಇವರಿಗೆ ಕೋಟೆಪುರ ಶಾಖಾ ವತಿಯಿಂದ ಸನ್ಮಾನಿಸಲಾಯಿತು. ಬಳಿಕ ಇತ್ತೀಚೆಗೆ ದುಷ್ಕರ್ಮಿಗಳಿಂದ ಹತ್ಯೆಗೈಯಲ್ಪಟ್ಟ ರಿಯಾಝ್ ಉಸ್ತಾದರ ಮೇಲೆ ತಹ್ಲೀಲ್ ಸಮರ್ಪಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಕೋಡಿ ಕೋಟೆಪುರ ದೋಟ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ನೌಷಾದ್ ಕೋಡಿ, ಎಸ್ಸೆಸ್ಸೆಫ್ ಕೋಡಿ ದೋಟ ಶಾಖೆ ಪ್ರಧಾನ ಕಾರ್ಯದರ್ಶಿ ಹಫೀಝ್ ಕೋಡಿ, ಕೋಟೆಪುರ ಶಾಖಾ ಉಪಾಧ್ಯಕ್ಷರುಗಳಾದ ಇರ್ಫಾನ್ ಹಾಗು ಫೈಝಲ್, ಜೊತೆ ಕಾರ್ಯದರ್ಶಿಗಳಾದ ಸಾಹಿಲ್ ಹಾಗು ಸಹದ್, ಕೋಶಾಧಿಕಾರಿ ಯಾಸರ್ ಹಾಗು ಇತರರು ಉಪಸ್ಥಿತರಿದ್ದರು. ಶಾಖಾ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
( ವರದಿ - ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ )
ಮಾಧ್ಯಮ ಕಾರ್ಯದರ್ಶಿ : SYS ಉಳ್ಳಾಲ ಸೆಂಟರ್
No comments:
Post a Comment