ಎಸ್ಸೆಸ್ಸೆಫ್ ಉಳ್ಳಾಲ ಸುಂದರಭಾಗ್ ಶಾಖೆಯ ಆಶ್ರಯದಲ್ಲಿ ರಜಬ್ ಸಂದೇಶ ಉದ್ಘಾಟನಾ ಕಾರ್ಯಕ್ರಮ ಹಾಗು ಎಸ್ ವೈ ಎಸ್ ನಾಯಕರಿಗೆ ಸನ್ಮಾನ ಸಮಾರಂಭ ಸುಂದರಭಾಗಿನ ಯೂಸುಫ್ ಮದನಿ ಪ್ಯಾಲೇಸ್ ನಲ್ಲಿ ಶಾಖಾಧ್ಯಕ್ಷ ಸಯೀದ್ ಅಬೂಬಕ್ಕರ್ ರವರ ಅಧ್ಯಕ್ಷತೆಯಲ್ಲಿ ಜರುಗಿತು.
ಕಾರ್ಯಕ್ರಮವನ್ನು ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಉದ್ಘಾಟಿಸಿದರು. ಸುನ್ನೀವಾಣಿ ಸಂಪಾದಕ ಯೂನುಸ್ ಇಮ್ದಾದಿ ಉಸ್ತಾದ್ ರಜಬ್ ಸಂದೇಶ ತರಗತಿ ನಡೆಸಿದರು. ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಯೂಸುಫ್ ಮದನಿ ಹಾಗು ಶಾಖಾ ಉಸ್ತುವಾರಿ ಸಿರಾಜುದ್ದೀನ್ ಅಕ್ಕರೆಕೆರೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ರಿಯಾಝ್ ಉಸ್ತಾದ್ ಹಾಗು ಸುಂದರಭಾಗಿನ ಫಾರೂಖ್ ರವರ ತಂದೆಯ ಮೇಲೆ ತಹ್ಲೀಲ್ ಸಮರ್ಪಿಸಲಾಯಿತು. ಬಳಿಕ ನಡೆದ ಸನ್ಮಾನ ಸಮಾರಂಭದಲ್ಲಿ ಎಸ್ ವೈ ಎಸ್ ಗೆ ಪಾದಾರ್ಪಣೆ ಮಾಡಿದ ಫಾರೂಖ್ ಗೋವ ಹಾಗು ಫೈಝಲ್ ಇವರಿಗೆ ಎಸ್ ವೈ ಎಸ್ ಬ್ರಾಂಚ್ ಅಧ್ಯಕ್ಷರಾದ ಸೀದಿಯಬ್ಬ ಇಸ್ಮಾಯಿಲ್ ಹಾಗು ಇತರ ಗಣ್ಯರ ಸಮ್ಮುಖದಲ್ಲಿ ಶಾಖೆಯ ವತಿಯಿಂದ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ, ಸೆಕ್ಟರ್ ಉಪಾಧ್ಯಕ್ಷ ಅತೀಖ್ ಕೋಡಿ, ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಫಾಳಿಲ್ ಮೇಲಂಗಡಿ, ಸೆಕ್ಟರ್ ಜೊತೆ ಕಾರ್ಯದರ್ಶಿ ಹಫೀಝ್ ಬೊಟ್ಟು ಉಪಸ್ಥಿತರಿದ್ದರು. ಶಾಖಾ ಪ್ರಧಾನ ಕಾರ್ಯದರ್ಶಿ ಸಯೀದ್ ಅಫ್ರಿದಿ ಸ್ವಾಗತಿಸಿದರು. ಶಾಖಾ ಜೊತೆ ಕಾರ್ಯದರ್ಶಿ ಸೈಫುದ್ದೀನ್ ವಂದಿಸಿದರು. ಸೆಕ್ಟರ್ ಜೊತೆ ಕಾರ್ಯದರ್ಶಿ ಹಂಝ ಯು ಬಿ ಕಾರ್ಯಕ್ರಮ ನಿರೂಪಿಸಿದರು.
( ವರದಿ : ನವಾಝ್ ಸಖಾಫಿ ಉಳ್ಳಾಲ )
No comments:
Post a Comment