Share To

Wednesday, 12 April 2017

ಮರ್ಹೂಂ ಶಹೀದ್ ರಿಯಾಝ್ ಉಸ್ತಾದರ ಹೆಸರಿನಲ್ಲಿ ಸಂಗ್ರಹಿಸಿದ ಹಣ ಹಸ್ತಾಂತರ

ಇತ್ತೀಚೆಗೆ ಕಾಸರಗೋಡಿನ ಚೂರಿ ಮಸೀದಿಯಲ್ಲಿ ದುಷ್ಕರ್ಮಿಗಳಿಂದ ಹತ್ಯೆಯಾದ ಕೊಟ್ಟಮುಡಿ ಆಝಾದ್ ನಗರದ ಮರ್ಹೂಂ ಶಹೀದ್ ರಿಯಾಝ್ ಉಸ್ತಾದರ ಹೆಸರಿನಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಸಂಗ್ರಹಿಸಿದ 18,000 ರೂಪಾಯಿಯನ್ನು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿಯಾದ ಶರೀಫ್ ಮುಡಿಪು ಹಾಗು ಉಳ್ಳಾಲ ಸೆಕ್ಟರ್ ಉಸ್ತುವಾರಿ ತೌಸೀಫ್ ಸಅದಿ ಹರೇಕಳ ಇವರಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಡಿವಿಷನ್ ಅಧ್ಯಕ್ಷ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ, ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್, ಸೆಕ್ಟರ್ ಕೋಶಾಧಿಕಾರಿ ಶಬೀರ್ ಪೇಟೆ, ಸೆಕ್ಟರ್ ಜೊತೆ ಕಾರ್ಯದರ್ಶಿ ಹಂಝ ಸುಂದರಿಭಾಗ್ ಹಾಗು ಮುಡಿಪು ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಮಧ್ಯನಡ್ಕ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಸಂಗ್ರಹಿಸಿದ ಒಂದು ಲಕ್ಷ ರೂಪಾಯಿಯನ್ನು ಎಸ್ಸೆಸ್ಸೆಫ್ ದ.ಕ ಜಿಲ್ಲಾ ಸಮಿತಿಗೆ ಹಸ್ತಾಂತರಿಸಲಾಯಿತು.

ವರದಿ : ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
Media secretary of sys ullala center

No comments:

Post a Comment