Share To

Sunday, 30 April 2017

ವೈವಾಹಿಕ ಬದುಕಿಗೆ ಪಾದಾರ್ಪಣೆಗೈದ ಶಿಹಾಬುದ್ದೀನ್ ಅಕ್ಕರೆಕೆರೆ ಇವರಿಗೆ ಸನ್ಮಾನ

ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಪ್ರಧಾನ ಕಾರ್ಯದರ್ಶಿ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಇವರ ತಮ್ಮ ಶಿಹಾಬುದ್ದೀನ್ ಅಕ್ಕರೆಕೆರೆ ಸುರಸುಂದರ ಕೋಟ್ಯಾನುಕೋಟಿ ನಿರೀಕ್ಷೆಯೊಂದಿಗೆ ವೈವಾಹಿಕ ಬದುಕಿಗೆ ಪಾದಾರ್ಪಣೆಗೈದರು. ಅಕ್ಕರೆಕೆರೆಯ ಅಬೂಬಕರ್ ಸಿದ್ದೀಖ್ ಮಸ್ಜಿದ್ ನಲ್ಲಿ ನಿಕಾಹ್ ಕಾರ್ಯಕ್ರಮ ನೆರವೇರಿತು.
ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆ ಹಾಗು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ವತಿಯಿಂದ ವೈವಾಹಿಕ ಬದುಕಿಗೆ ಪಾದಾರ್ಪಣೆಗೈದ ಶಿಹಾಬುದ್ದೀನ್ ಇವರಿಗೆ ಮಂಗಳಾಶಂಶೆಯನ್ನು ತಿಳಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ನಿಕಟಪೂರ್ವ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ, ಪಟ್ಲ ಮಸೀದಿಯ ಮುದರ್ರಿಸ್ ಶರೀಫ್ ಕಾಮಿಲ್ ಸಖಾಫಿ, ಎಸ್ ವೈ ಎಸ್ ಉಪಾಧ್ಯಕ್ಷ ಅಬ್ದುಲ್ಲತೀಫ್ ಅಕ್ಕರೆಕೆರೆ, ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖಾ ಪ್ರಧಾನ ಕಾರ್ಯದರ್ಶಿ ಆಸಿಫ್ ಅಕ್ಕರೆಕೆರೆ, ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಕಾರ್ಯಕಾರಿ ಸಮಿತಿ ಸದಸ್ಯರು ಹಾಗು ಶಿಹಾಬುದ್ದೀನ್ ಇವರ ತಂದೆ ಹಸನ್ ಬಾವ ಹಾಜಿ ಉಪಸ್ಥಿತರಿದ್ದರು.

No comments:

Post a Comment