ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕ್ಯಾಂಪಸ್ ವಿದ್ಯಾರ್ಥಿಗಳು ಕ್ಯಾಂಪಸ್ ಕನ್ವೀನರ್ ಫಾಳಿಲ್ ಮೇಲಂಗಡಿ ಇವರ ನೇತ್ರತ್ವದಲ್ಲಿ ಮೈಸೂರು ಕ್ಯಾಂಪಿಗೆ ಉಳ್ಳಾಲ ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ದರ್ಗಾ ಝಿಯಾರತ್ ನಡೆಸಿ ಹೊರಟರು. ಎಸ್ಸೆಸ್ಸೆಫ್ ಕೋಟೆಪುರ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್ ಝಿಯಾರತಿಗೆ ನೇತ್ರತ್ವ ನೀಡಿದರು. ಉಳ್ಳಾಲ ಸೆಕ್ಟರಿನಿಂದ ಮೈಸೂರು ಕ್ಯಾಂಪಿಗೆ ತೆರಳುವ ಹದಿನಾಲ್ಕು ವಿದ್ಯಾರ್ಥಿಗಳು ಹಾಗು ಎಸ್ ವೈ ಎಸ್ ಅಕ್ಕರೆಕೆರೆ ಹಳೆಕೋಟೆ ಬ್ರಾಂಚ್ ಕೋಶಾಧಿಕಾರಿ ಅಬ್ದುರ್ರಹ್ಮಾನ್ ಹಾಜರಿದ್ದರು. ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಕ್ಯಾಂಪಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಿತೋಪದೇಶ ನೀಡಿ ಬೀಳ್ಕೊಟ್ಟರು. ಕ್ಯಾಂಪಸ್ ಚೇರಮಾನ್ ಮುಹಮ್ಮದ್ ಮದನಿ ಹಳೆಕೋಟೆ ಇವರ ವತಿಯಿಂದ ವಿದ್ಯಾರ್ಥಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು
No comments:
Post a Comment