Share To

Monday, 3 April 2017

ಎಸ್ಸೆಸ್ಸೆಫ್ ಉಳ್ಳಾಲ : ಕ್ಯಾಂಪಸ್ ನಾಯಕರ ಸಂಗಮ 

ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಇದರ ಕ್ಯಾಂಪಸ್ ನಾಯಕರ ಸಂಗಮ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಮಾಸ್ತಿಕಟ್ಟೆಯ ಹಾಶಿಂ ಟವರ್ ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಡಿವಿಷನ್ ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಟೋಳಿಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಕಾರ್ಯದರ್ಶಿ ಮನ್ಸೂರ್ ಹಳೆಕೋಟೆ ಆಶಂಶಾಭಾಷಣ ಮಾಡಿದರು. ಮುಸ್ತಫ ಮಾಸ್ಟರ್ ಬೆಂಗಳೂರು ತರಗತಿ ನಡೆಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ಹನೀಫ್ ಹಾಜಿ ಹಾಗು ತೊಕ್ಕೋಟು ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಬಾತಿಷ ಮಂಚಿಲ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು. ಬಳಿಕ ಕ್ಯಾಂಪಸ್ ನೂತನ ಉಪ ಸಮಿತಿಯನ್ನು ಆರಿಸಲಾಯಿತು.
ಚೇರಮೆನ್ ಆಗಿ ಮುಹಮ್ಮದ್ ಮದನಿ ಹಳೆಕೋಟೆ, ಕನ್ವೀನರಾಗಿ ಫಾಳಿಲ್ ಮೇಲಂಗಡಿ, ಸದಸ್ಯರುಗಳಾಗಿ ಹಫೀಝ್ ಬೊಟ್ಟು, ತಾಜುದ್ದೀನ್ ಹಳೆಕೋಟೆ, ನೌಫಲ್ ಕೋಟೆಪುರ, ಹಫೀಝ್ ಕೋಡಿ, ಫಾಶಿರ್ ಪೇಟೆ, ಮುಝಮ್ಮಿಲ್ ಉಸ್ತಾದ್ ಕೋಟೆಪುರ ಇವರನ್ನು ಆರಿಸಲಾಯಿತು.
ಈ ಸಂದರ್ಭದಲ್ಲಿ ಸೆಕ್ಟರ್ ಜೊತೆ ಕಾರ್ಯದರ್ಶಿಗಳಾದ ಯು ಬಿ ಹಂಝ ಸುಂದರಭಾಗ್ ಹಾಗು ಇಕ್ಬಾಲ್ ಒಂಭತ್ತುಕೆರೆ, ಕೋಶಾಧಿಕಾರಿ ಶಬೀರ್ ಪೇಟೆ ಹಾಗು ಸೆಕ್ಟರ್ ಅಧೀನದ ಎಲ್ಲಾ ಶಾಖೆಗಳ ಕ್ಯಾಂಪಸ್ ಕಾರ್ಯದರ್ಶಿಗಳು ಉಪಸ್ಥಿತರಿದ್ದರು. ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ಫಾಳಿಲ್ ಮೇಲಂಗಡಿ ಸ್ವಾಗತಿಸಿ ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಧನ್ಯವಾದಗೈದರು.

( ವರದಿ : ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ )
ಎಸ್ ವೈ ಎಸ್ ಉಳ್ಳಾಲ ಸೆಂಟರ್ ಮಾಧ್ಯಮ ಕಾರ್ಯದರ್ಶಿ

No comments:

Post a Comment