*SSFಜಿಲ್ಲಾದ್ಯಕ್ಷ ಹಾಫಿಳ್ ಯಾಕೂಬ್ ಸಅದಿ @ತೊಕ್ಕೊಟ್ಟು*
ಮಂಗಳೂರು: ಇಂದು ಉಳ್ಳಾಲ ಡಿವಿಷನ್ ವತಿಯಿಂದ ತಲಪಾಡಿ to ತೊಕ್ಕೊಟ್ಟು ನಡೆದ ಬೈಕ್ ರ್ಯಾಲಿಯ ಸಮಾರೋಪ ಸಮಾರಂಭದಲ್ಲಿ ಮಾಡಿದ ಭಾಷಣದಲ್ಲಿ ಶರೀಅತ್ ಕಾನೂನಿನಲ್ಲಿ ಹಸ್ತಕ್ಷೇಪ,ತ್ರಿವಳಿ ತಲಾಖ್,ಗೋವಧೆ ,ಸ್ಕಾರ್ಪ್ ವಿವಾದ ಮುಂತಾದ ಪ್ರಚಲಿತ ವಿಷಯಗಳನ್ನು ಪ್ರತಿಪಾದಿಸಿದರು.
*ಭಾಷಣದ ಕೆಲವೊಂದು ತುಣುಕುಗಳು*
1)ಸಮಾನ ನಾಗರಿಕ ಸಂಹಿತೆ ಜಾರಿಯು ಭಾರತದ ಅನೇಕತೆಯಲ್ಲಿ ಏಕತೆ ಎನ್ನುವ ಆಶಯಕ್ಕೆ ಧಕ್ಕೆಯಾಗಲಿದೆ.
2)ಏಕಸಿವಿಲ್ ಕೋಡ್ ಯಾವ ಧರ್ಮದ ಆಧಾರದಲ್ಲಿ ಜಾರಿಗೊಳಿಸುತ್ತೀರಿ?ಅಥವಾ ಬೆಲ್ಲಗಂಜಿ (ಚಕ್ಕರಕಂಞಿ )ಯಂತೆ ಎಲ್ಲ ಧರ್ಮದಿಂದ ಸ್ವಲ್ಪ ಸ್ವಲ್ಪ ಸೇರಿಸಿ ಕೊಂಡು ಮಾಡುತ್ತೀರಾ? ?
3)ಮೋದಿ ಸರ್ಕಾರದ ಆಡಳಿತ ವೈಫಲ್ಯಗಳನ್ನು ಮುಚ್ಚಿ ಹಾಕಲು ಮಾಡಿರುವ ರಾಜಕೀಯ ಗಿಮಿಕ್ಕು ಶರೀಅತ್ ಕಾನೂನಿನಲ್ಲಿನ ಹಸ್ತಕ್ಷೇಪ
4)ಸಂವಿಧಾನದಲ್ಲಿ ಸಮಾನ ನಾಗರಿಕ ಸಂಹಿತೆ ಜಾರಿಯು ನಿರ್ದೇಶಕ ತತ್ತ್ವ ಗಳಲ್ಲಿ ಮಾತ್ರ ಸೇರಿಸಲಾಗಿದ್ದು ಇದಕ್ಕಿಂತ ಪರಿಚ್ಚೇದ 25,26 ಗಳಲ್ಲಿ ಹೇಳಲಾಗಿರುವ ಧಾರ್ಮಿಕ ಸ್ವಾತಂತ್ರ್ಯವು ಮಿಗಿಲಾದುದು.
5)ಕೇಂದ್ರ ಆಡಳಿತದಲ್ಲಿರುವ ಪಕ್ಷವು ಕಳೆದ ಚುನಾವಣಾ ಪ್ರಣಾಳಿಕೆಯಲ್ಲಿ ಸಮಾನ ಶ್ರೇಣಿ, ಸಮಾನ ವೇತನ ಜಾರಿಗೊಳಿಸುತ್ತೇವೆಂದು ಹೇಳಿದರು ಇಷ್ಟರ ತನಕ ಅದನ್ನು ಮಾಡಿಲ್ಲ .ಸಮಾನ ನಾಗರಿಕ ಸಂಹಿತೆ ಜಾರಿಯನ್ನು ಬಿಟ್ಟು ಸಮಾನ ಶ್ರೇಣಿ ಸಮಾನ ವೇತನ ಜಾರಿಗೊಳಿಸಿ
6)ತ್ರಿವಳಿ ತಲಾಖ್ ನಿಂದಾಗಿ ಮುಸ್ಲಿಂ ಮಹಿಳೆಯರಿಗೆ ಅನ್ಯಾಯವಾಗುತ್ತಿದೆ ಎನ್ನುವವರು ಮೋದಿಯವರು ಗುಜರಾತ್ ಮುಖ್ಯ ಮಂತ್ರಿಯಾಗಿದ್ದಾಗ ಅಲ್ಲಿನ ಎಷ್ಟೋ ಮಹಿಳೆಯರಿಗೆ ಅನ್ಯಾಯವಾಗಿದ್ದರೂ ಇಷ್ಟರ ತನಕ ಅವರಿಗೆ ಯಾಕೆ ನ್ಯಾಯ ಕೊಟ್ಟಿಲ್ಲ? ?
7)ಪ್ರಧಾನ ಮಂತ್ರಿಯವರೇ ಕನಿಷ್ಠ ಪಕ್ಷ ಕಳೆದ ಪಾರ್ಲಿಮೆಂಟ್ ವೋಟ್ ಸಮಯದಲ್ಲಿ ತನ್ನನ್ನು ಮತ್ತೆ ಕರೆದರೆ ಪತಿಯೊಂದಿಗೆ ಸಂಸಾರ ನಡೆಸಲು ಸಿದ್ಧ ಎಂದಿದ್ದ ಯಶೋಧಬೆನ್ಗಾದರೂ ಯಾಕೆ ನ್ಯಾಯ ಕೊಟ್ಟಿಲ್ಲ? ? ಸಾದ್ಯವಿದ್ದರೆ ಈ ದೇಶದ ಜನತೆಯಲ್ಲಿ ಡೈವೋರ್ಸ್, ತಲಾಖ್, ಕುಟುಂಬ ಕಲಹದಿಂದಾಗಿ ಆತ್ಮಹತ್ಯೆ, ಇದರ ಬಗ್ಗೆ ಅಧ್ಯಯನ ನಡೆಸಿ ಆಗ ಗೊತ್ತಾಗುತ್ತದೆ ಯಾರಿಗೆ ಅನ್ಯಾಯ ಆಗಿದೆ ಯಾರು ನೆಮ್ಮದಿಯಿಂದ ಇದ್ದಾರೆ.
8)ಇಸ್ಲಾಮಿಕ್ ಶರೀಅತ್ ನಲ್ಲಿ ಎಲ್ಲ ಕಾನೂನು ವಿಧಿಗಳು ಸಂಪೂರ್ಣವಾಗಿದೆ.ಅದರಲ್ಲಿ ತಿದ್ದುಪಡಿ ಮಾಡಲು ಉಲಮಾಗಳಿಗು ಕೂಡ ಅವಕಾಶ ಇಲ್ಲದಂತೆ ಅಷ್ಟೊಂದು ಸುಭದ್ರವಾಗಿದೆ.ಆದುದರಿಂದ ಶರೀಅತ್ ಕಾನೂನಿನಲ್ಲಿ ಯಾರಿಗೂ ಹಸ್ತಕ್ಷೇಪ ಮಾಡಲು ನಮ್ಮ ಕೊನೆಯುಸಿರಿನ ತನಕ ಬಿಡುವುದಿಲ್ಲ.
9) ಮುಸ್ಲಿಂ ವಿಧ್ಯಾರ್ಥಿನಿಯರು ಸ್ಕಾರ್ಪ್ ಧರಿಸುವ ವಿಚಾರವನ್ನು ಮುಂದಿಟ್ಟು ಆಗಾಗ ಸಮಸ್ಯೆಗಳು ಸೃಷ್ಟಿಯಾಗುತ್ತಿದ್ದು ಸ್ಕಾರ್ಪ್ ಬುರ್ಖಾವನ್ನು ಯಾವುದೋ ಲಾಭಕ್ಕಾಗಿ ಅಥವಾ ಹಠಮಾರಿತನಕ್ಕಾಗಿ ಮುಸ್ಲಿಂ ಮಹಿಳೆಯರು ಧರಿಸುತ್ತಿಲ್ಲ ಬದಲು ಧರ್ಮದ ಆಚರಣೆಯನ್ನು ಪಾಲಿಸುತ್ತಿದ್ದಾರಷ್ಟೆ.ಅದಕ್ಕೆ ಭಾರತದ ಸಂವಿಧಾನವು ಸ್ವಾತಂತ್ರ್ಯ ವನ್ನು ನೀಡಿದೆ ಇದನ್ನು ಯಾರಿಂದಲೂ ಕಬಳಿಸಲು ಸಾಧ್ಯವಿಲ್ಲ.
10)ಗೋಮಾಂಸದ ವಿಚಾರವನ್ನು ಮುಂದಿಟ್ಟು ರಾಜಕೀಯ ಬೇಳೆ ಬೇಯಿಸುತ್ತಿರುವ ಪಕ್ಷದವರೇ ತಾಕತ್ತಿದ್ದರೆ ವಿದೇಶಕ್ಕೆ ಗೋಮಾಂಸ ರಫ್ತು ಮಾಡುವುದನ್ನು ನಿಲ್ಲಿಸಿ ಆಗ ನಿಮ್ಮ ಅಸಲಿಯತ್ತು ಗೊತ್ತಾಗುತ್ತದೆ.
11) ಟಿಪ್ಪು ಜಯಂತಿ ಆಚರಣೆ ಯನ್ನು ಅವರೊಬ್ಬ ವಿದೇಶಿಯಾಗಿದ್ದರು ಎನ್ನುವಂತಹ ಕಾರಣಗಳನ್ನು ಮುಂದಿಟ್ಟು ವಿರೋಧಿಸುವವರೇ ನಿಮ್ಮ ಪಕ್ಷದ ರಾಷ್ಟ್ರೀಯ ನಾಯಕರಲ್ಲಿ ಕೆಲವರು ಎಲ್ಲಿ ಹುಟ್ಟಿದವರೆಂದು ಅವಲೋಕನ ಮಾಡಿಕೊಳ್ಳುವುದು ಒಳ್ಳೆಯದು.
12) ಇಷ್ಟಕ್ಕೂ ಮುಸಲ್ಮಾನರ ಮೇಲೆ ಆಗಾಗ ದಾಳಿ ಮಾಡುತ್ತಿರಲು ಕಾರಣವಾದರೂ ಏನು? ಅವರು ನಮ್ಮ ಜಲ ನೆಲಕ್ಕೆ ಗೌರವ ಕೊಡುತ್ತಿಲ್ಲವೇ? ನೈಜ ಮುಸಲ್ಮಾನನೊಬ್ಬ ದಿನವೊಂದಕ್ಕೆ 5 ಬಾರಿ ನಮಾಝಿನಲ್ಲಿ 34 ಸಲ ತನ್ನ ಪವಿತ್ರ ಶಿರಸ್ಸನ್ನು ಭೂಮಿ ಮೇಲಿಡುತ್ತಾನೆ.ಮತ್ಯಾರು ಇದನ್ನು ಮಾಡುತ್ತಾರೆ ?
13)ಮರಣ ಹೊಂದಿರುವ ವ್ಯಕ್ತಿಯನ್ನು ಧಫನ ಮಾಡುವಾಗಲು ಮುಸ್ಲಿಮರ ಮಂತ್ರ ನೀನು ಇದೇ ಮಣ್ಣಿಣಿಂದ ಹುಟ್ಟಿ ಇದೇ ಮಣ್ಣಲ್ಲಿ ಮರಳಿ ಹೋಗುತ್ತಿದ್ದೀಯಾ ಎನ್ನುವುದಾಗಿದೆ...
ಆದುದರಿಂದ ಯಾರು ಮುಸ್ಲಿಮರ ದೇಶಪ್ರೇಮದ ಬಗ್ಗೆ ಡೌಟ್ ಮಾಡುವ ಅಗತ್ಯವಿಲ್ಲ.
ಸಂಕ್ಷಿಪ್ತ ಸಂಗ್ರಹ ವೋಯ್ಸಿನಿಂದ
No comments:
Post a Comment