ಎಸ್ಸೆಸ್ಸೆಫ್ ಕೋಟೆಪುರ ಶಾಖೆಯ ಆಶ್ರಯದಲ್ಲಿ ಡ್ರೀಂ ಜಿಕೆ 2017 ಕಾರ್ಯಕ್ರಮ ಶಾಖಾಧ್ಯಕ್ಷ ಮುಝಮ್ಮಿಲ್ ಉಸ್ತಾದ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಸಂಘಟನೆಯ ಮಹತ್ವ ತಿಳಿಸಿ ಕಾರ್ಯಕ್ರಮ ಉದ್ಘಾಟಿಸಿದರು. ಸೈಫುಲ್ಲಾಹ್ ಉಸ್ತಾದ್ ಇಸ್ಲಾಮಿಕ್ ಚರಿತ್ರೆಯನ್ನು ಮಕ್ಕಳಿಗೆ ತಿಳಿಸಿದರು. ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ನಿಕಟಪೂರ್ವ ಅಧ್ಯಕ್ಷ ಉಸ್ಮಾನ್ ಸಖಾಫಿ ಪೊಳಲಿ ಆಶಂಶಾ ಭಾಷಣ ಮಾಡಿದರು. ನಮ್ಮ ಬದುಕು ಎಂಬ ವಿಷಯದಲ್ಲಿ ಹಾಫಿಝ್ ಉವೈಸ್ ತರಗತಿ ನಡೆಸಿದರು. ಬಳಿಕ ಎಸ್ ಬಿ ಎಸ್ ಮಕ್ಕಳಿಗೆ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನ ವಿತರಿಸಲಾಯಿತು. ಕ್ವಿಝ್ ಸ್ಪರ್ಧೆಯಲ್ಲಿ ಹಸನ್ ಝಿಯಾದ್ ಪ್ರಥಮ ಹಾಗು ನವಾಫ್ ದ್ವಿತೀಯ ಸ್ಥಾನ ಪಡೆದರು. ಸ್ಟ್ರಾವ್ ಗೇಮ್ ನಲ್ಲಿ ಹಕೀತ್ ಪ್ರಥಮ ಹಾಗು ತಸ್ವೀರ್ ದ್ವಿತೀಯ ಗಳಿಸಿದರು. ಪಿರಮಿಡ್ ಆಟದಲ್ಲಿ ಹಸನ್ ಝಿಯಾದ್ ಪ್ರಥಮ ಹಾಗು ಅಫಾಕ್ ದ್ವಿತೀಯ ಗಳಿಸಿದರು. ಕಾಯಿನ್ ಆಟದಲ್ಲಿ ನಾಝಿಂ ಪ್ರಥಮ ಹಾಗು ರಮೀಝ್ ದ್ವಿತೀಯ ಸ್ಥಾನ ಪಡೆದರು. ಶಾಖಾ ಪ್ರಧಾನ ಕಾರ್ಯದರ್ಶಿ ಸ್ವಾಗತಿಸಿ ಕೊನೆಗೆ ಧನ್ಯವಾದಗೈದರು.
Thursday, 11 May 2017
ಎಸ್ಸೆಸ್ಸೆಫ್ ಕೋಟೆಪುರ ಶಾಖೆಯ ಆಶ್ರಯದಲ್ಲಿ ಡ್ರೀಂ ಜಿಕೆ 2017 ಕಾರ್ಯಕ್ರಮ
Subscribe to:
Post Comments (Atom)
No comments:
Post a Comment