Share To

Saturday, 13 May 2017

ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಆಶ್ರಯದಲ್ಲಿ ಡ್ರೀಮ್ ಜಿಕೆ 2017 ಕಾರ್ಯಕ್ರಮ

ಎಸ್ಸೆಸ್ಸೆಫ್ ಅಕ್ಕರೆಕೆರೆ ಶಾಖೆಯ ಆಶ್ರಯದಲ್ಲಿ ಡ್ರೀಮ್ ಜಿಕೆ 2017 ಎಸ್ಸೆಸ್ಸೆಫ್ ಅಕ್ಕರೆಕೆರೆ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು. ಶಾಖಾ ಉಪಾಧ್ಯಕ್ಷ ಶಾಹುಲ್ ಹಮೀದ್ ಜೌಹರಿ ಅಧ್ಯಕ್ಷತೆ ವಹಿಸಿದರು. ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಹಾಗು ಎಸ್ ಬಿ ಎಸ್ ಉಳ್ಳಾಲ ಝೋನ್ ಸಂಚಾಲಕ ಮುಹಾಝ್ ತರಗತಿ ನಡೆಸಿದರು. ಬಳಿಕ ಎಸ್ ಬಿ ಎಸ್ ಅಕ್ಕರೆಕೆರೆ ಶಾಖೆಯ ನೂತನ ಸಮಿತಿಯನ್ನು ಆರಿಸಲಾಯಿತು. ನೂತನಾಧ್ಯಕ್ಷರಾಗಿ ಸಯ್ಯಿದ್ ಶಬೀಬ್ ತಂಗಳ್ ರವರು ಆಯ್ಕೆಯಾದರು. ಡ್ರೀಂ ಜಿಕೆಯ ಅಂಗವಾಗಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಿ ವಿಜೇತ ಮಕ್ಕಳಿಗೆ ಬಹುಮಾನ ವಿತರಿಸಲಾಯಿತು.
ಈ ಸಂದರ್ಭದಲ್ಲಿ ಶಾಖಾ ಪ್ರಧಾನ ಕಾರ್ಯದರ್ಶಿ ಆಸಿಫ್ ಅಕ್ಕರೆಕೆರೆ, ಎಸ್ ಬಿ ಎಸ್ ಅಕ್ಕರೆಕೆರೆ ಸಂಚಾಲಕ ಇರ್ಫಾನ್, ಆಸಿಂ ಹಾಗು ಇನ್ನಿತರ ಕಾರ್ಯಕರ್ತರು ಭಾಗವಹಿಸಿದರು

No comments:

Post a Comment