Share To

Friday, 14 October 2016

ಸ್ವಾತಂತ್ರ್ಯೋತ್ಸವ,ಪ್ರತಿಜ್ಞಾ ವಿಧಿ ಸ್ವೀಕಾರ

ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಹಾಗು ಎಸ್ ಎಸ್ ಎಫ್ ಮೇಲಂಗಡಿ ಶಾಖೆ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ*

******************************

ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಹಾಗು ಎಸ್ ಎಸ್ ಎಫ್ ಮೇಲಂಗಡಿ ಶಾಖೆ ಜಂಟಿ ಆಶ್ರಯದಲ್ಲಿ ಶಾಖಾಧ್ಯಕ್ಷ ಅಬ್ದುಸ್ಸಮದ್ ರವರ ನೇತ್ರತ್ವದಲ್ಲಿ ಮೇಲಂಗಡಿ ಫಿರ್ದೌಸ್ ಅಪಾರ್ಟ್ ಮೆಂಟ್ ವರಾಂಡದಲ್ಲಿ ಆಗಸ್ಟ್ 15 ಬೆಳಿಗ್ಗೆ 10 ಗಂಟೆಗೆ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.ಉಸ್ಮಾನ್ ಸಖಾಫಿ ದುವಾ ನೆರವೇರಿಸಿದರು.ನವಾಝ್ ಸಖಾಫಿ ಉಳ್ಳಾಲ ಉದ್ಘಾಟಿಸಿದರು.ಎಸ್ ಎಸ್ ಎಫ್ ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫ ನಯೀಮಿ ಹಾವೇರಿ ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು.ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಧ್ವಜಾರೋಹಣ ಮಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ರಿಲೀಫ್ ಚೇರಮಾನ್ ಮನ್ಸೂರ್ ಹಳೆಕೋಟೆ,ಉಳ್ಳಾಲ ದರ್ಗಾ ಸಮಿತಿ ಅಬ್ದುಲ್ ಅಝೀಝ್ ಕೋಡಿ,ಸತ್ತಾರ್ ಮೇಲಂಗಡಿ,ಅಬ್ದುಲ್ ಘನಿ,ನವಾಝ್ ಮೇಲಂಗಡಿ,ತಶ್ರೀಫ್ ಹಾಗೂ ಎಸ್ ಎಸ್ ಎಫ್ ಉಳ್ಳಾಲ ಕಾರ್ಯಕರ್ತರು ಭಾಗವಹಿಸಿದರು.

***********----------**********

  *ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ*

ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಇದರ ನೂತನ ಸಮಿತಿಯು ಆಗಸ್ಟ್ 15 ಮಗ್ರಿಬ್ ನಮಾಜು ಬಳಿಕ ಹಳೆಕೋಟೆ ಉಳ್ಳಾಲ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್,ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಕೋಶಾಧಿಕಾರಿ ಇಲ್ಯಾಸ್ ಕೈಕೋ ಹಾಗೂ ಉಪಾಧ್ಯಕ್ಷರುಗಳಾದ ಮುಹಮ್ಮದ್ ಮದನಿ ಹಳೆಕೋಟೆ,ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ,ಶಬೀರ್ ಪೇಟೆ,ಕಾರ್ಯದರ್ಶಿಗಳಾದ ಸಿರಾಜ್ ಮೇಲಂಗಡಿ,ತಾಜುದ್ದೀನ್ ಹಳೆಕೋಟೆ,ಹಫೀಝ್ ಕೋಡಿ,ನೌಫಲ್ ಕೋಟೆಪುರ ಇವರು ಪ್ರಾರಂಭದಲ್ಲಿ ಬೇರೆಬೇರೆಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಬಳಿಕ ಎಲ್ಲರೂ ಒಟ್ಟಿಗೆ ಪ್ರತಿಜ್ಞೆಗೈದರು.ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.

******************************
               *ಪ್ರತಿಜ್ಞೆ*

ಪ್ರಾಪಂಚಿಕ ಸುನ್ನೀ ನೇತಾರ ಶೈಖುನಾ ತಾಜುಲ್ ಉಲಮಾ ಅಲ್ ಬುಖಾರಿ ಖ.ಸಿ ಮತ್ತು ಸುಲ್ತಾನುಲ್ ಎಪಿ ಉಸ್ತಾದ್ ರವರ ನಾಯಕತ್ವವನ್ನು ಸಂಪೂರ್ಣವಾಗಿ ಅಂಗೀಕರಿಸಿ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ರವರು ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಉಳ್ಳಾಲದ ಮಣ್ಣಿನಲ್ಲಿ 1984 ರಲ್ಲಿ ಜನ್ಮ ತಾಳಿ ಸುಮಾರು 32 ವರ್ಷಗಳಿಂದ ಧಾರ್ಮಿಕ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ರಂಗದಲ್ಲಿ ಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಇದರ 2016 ನೇ ಸಾಲಿನಲ್ಲಿ ನನಗೆ ಅರ್ಪಿತವಾದ ಹುದ್ದೆಯನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಲು ಶೇಕಡಾ ನೂರರಷ್ಟು ಪ್ರಯತ್ನಿಸುವೆನೆಂದು ಸಂಘಟನೆಯ ಸೇವೆಯ ಅಂಗವಾಗಿ ನೇತಾರರು ಸಲಹಾ ಸಮಿತಿಯ ನಾಯಕರು ಕರೆದಾಗಲೆಲ್ಲಾ ನನ್ನ ವೈಯಕ್ತಿಕ ಅಗತ್ಯಗಳನ್ನು ಬದಿಗಿರಿಸಿ ಸಂಘಟನೆಯ ಆವಶ್ಯಕತೆಗಳಿಗೆ ಆದ್ಯತೆ ನೀಡಿ ಹಾಜರಾಗುವೆನೆಂದು ನಾನು ಮನದಾಳದಿಂದ ಪ್ರತಿಜ್ಞೆ ಮಾಡುತ್ತಿದ್ದೇನೆ.
"ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿಗಳಿವೆ. ಹಾಗೂ ಅವುಗಳ ಕುರಿತು ನೀವು ಕೇಳಲ್ಪಡುವಿರಿ" ಎಂಬ ಹದೀಸ್ ವಚನವು ನನ್ನಲ್ಲಿ ಅರ್ಪಿತವಾದ ಹುದ್ದೆಯಲ್ಲಿ ಕ್ರಿಯಾಶೀಲವಾಗುವಂತೆ ಸದಾ ನನ್ನನ್ನು ಪ್ರೇರೇಪಿಸುವುದು ಎಂದು ನಾನು ನಂಬುತ್ತೇನೆ ಹಾಗು ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆಶಯಗಳಿಗೆ ಬದ್ಧನಾಗಿ ಜೀವಿಸುವೆನೆಂದೂ ಯಾವುದೇ ಕಾರಣಕ್ಕೂ ಸುನ್ನೀ ವಿರುದ್ಧ ಆಶಯಗಳೊಂದಿಗೆ ಹಾಗೂ ಅದರ ಅನುಯಾಯಿಗಳೊಂದಿಗೂ ಯಾವುದೇ ರೀತಿಯ ಸ್ನೇಹ ಸಂಬಂಧಗಳನ್ನು ಬೆಳೆಸಲಾರೆನೆಂದೂ ದ್ರಢ ಪ್ರತಿಜ್ಞೆ ಮಾಡುತ್ತಿದ್ದೇನೆ.

"""""""""""""""""""""""""""""""""""""
ವರದಿ ; ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ

No comments:

Post a Comment