Share To

Sunday, 23 October 2016

ಶಾಖಾ ಮಟ್ಟದ ಅಸ್ಸುಫ್ಫ ತರಗತಿಗೆ ಎಸ್ ಎಸ್ ಎಫ್ ಉಳ್ಳಾಲ ಅಕ್ಕರೆಕೆರೆ ಶಾಖೆಯಿಂದ ಚಾಲನೆ

ಎಸ್ ಎಸ್ ಎಫ್ ಉಳ್ಳಾಲ ಅಕ್ಕರೆಕೆರೆ ಶಾಖೆಯ ಶಾಖಾ ಮಟ್ಟದ ಅಸ್ಸುಫ್ಫ ತರಗತಿಯ ಉದ್ಘಾಟನಾ ಸಮಾರಂಭ ಶಾಖಾಧ್ಯಕ್ಷ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ರವರ ಅಧ್ಯಕ್ಷತೆಯಲ್ಲಿ ಅಕ್ಕರೆಕೆರೆಯ ಎಸ್ಸೆಸ್ಸೆಫ್ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಬಶೀರ್ ಸಖಾಫಿ ಉಳ್ಳಾಲ ಇಸ್ಲಾಮಿನ ಸುಂದರವಾದ ಆಶಯಾದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಲು ಅಸ್ಸುಫ್ಫ ತರಗತಿ ಸಹಾಯಕವಾಗಲಿದೆ ಎಂದರು.ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ಸ್ ಫೆಡರೇಶನ್ ಅಧೀನದ ರಾಜ್ಯಾದ್ಯಂತವಿರುವ ಪ್ರತಿಯೊಂದು ಶಾಖೆಗಳಲ್ಲಿಯೂ ವ್ಯವಸ್ಥಿತವಾಗಿ ವಿವಿಧ ವಿಷಯಗಳಲ್ಲಿ ಅಸ್ಸುಫ್ಫ ತರಗತಿ ನಡೆಯಲಿದೆ ಎಂದು ಉಳ್ಳಾಲ ಡಿವಿಷನ್ ಅಸ್ಸುಫ್ಫ ನಿರ್ದೇಶಕ ಮುನೀರ್ ಸಖಾಫಿ ಉಳ್ಳಾಲ ತಿಳಿಸಿದರು.ಅವರು ಕಾರ್ಯಕ್ರಮದಲ್ಲಿ ಮುಖ್ಯ ಪ್ರಭಾಷಣ ಮಾಡಿದರು.ಪ್ರತಿಯೊಂದು ಸತ್ಕರ್ಮವು ಸ್ವೀಕಾರಾರ್ಹವಾಗುವುದು ನಿಯ್ಯತ್ತಿನಿಂದಾಗಿದೆ.ಆದುದರಿಂದ ನಮ್ಮ ಪ್ರತಿಯೊಂದು ಚಲನವಲನ ನಡೆ ನುಡಿಗಳು ನಿಷ್ಕಲಂಕತಾ ಮನೋಭಾವದಿಂದ ಕೂಡಿರಬೇಕು ಎಂದು ಎಸ್ ವೈ ಎಸ್ ಅಕ್ಕರೆಕೆರೆ ಬ್ರಾಂಚ್ ಅಧ್ಯಕ್ಷರಾದ ಉಸ್ಮಾನ್ ಸಖಾಫಿ ಪೊಳಲಿ ತರಗತಿ ನೀಡಿ ಅಸ್ಸುಫ್ಫ ತರಗತಿಗೆ ಅಧಿಕ್ರತ ಚಾಲನೆ ನೀಡಿದರು.ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್,ಸೆಕ್ಟರ್ ಅಮೀರ್ ಮುಝಮ್ಮಿಲ್ ಉಸ್ತಾದ್ ಪ್ರಾಸ್ತಾವಿಕ ಭಾಷಣ ಮಾಡಿದರು.
ಬಳಿಕ ಎಸ್ ಎಸ್ ಎಫ್ ಅಕ್ಕರೆಕೆರೆ ಶಾಖಾ ಕಾರ್ಯಕರ್ತ ಅಬ್ದುಲ್ ಮಜೀದ್ ಇವರ ದೊಡ್ಡಪ್ಪ ಹಾಗು ಪೊನ್ಮಳ ಉಸ್ತಾದರ ಮಗಳ ಪತಿಯ ತಂದೆ ಮಂಗಳೂರು ವೆಲೆನ್ಸಿಯದ ಫಖ್ರುದ್ದೀನ್ ಬಾವಾ ರವರು ಇತ್ತೀಚೆಗೆ ಮರಣ ಹೊಂದಿದ್ದರು.ಅವರ ಮೇಲೆ ಹಾಗು ಅಕ್ಟೋಬರ್ 23 -2016 ಆದಿತ್ಯವಾರ ಮರಣ ಹೊಂದಿದ ಎಸ್ ವೈ ಎಸ್ ಉಳ್ಳಾಲ ಸುಂದರಿಭಾಗ್ ಬ್ರಾಂಚ್ ಸದಸ್ಯರು ಹಾಗು ಎಸ್ ಎಸ್ ಎಫ್ ಸುಂದರಿಭಾಗ್ ಶಾಖಾ ಕಾರ್ಯಕರ್ತ ಕಬೀರ್ ರವರ ತಂದೆಯೂ ಆದ ಹಸನಾಕ ನವರ ಮೇಲೆ ತಹ್ಲೀಲ್ ಹದಿಯ ಮಾಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಹಳೆಕೋಟೆ,ಅಲ್ ಅಮೀನ್ ರಿಲೀಫ್ ಚೇರಮಾನ್ ಮನ್ಸೂರ್ ಹಳೆಕೋಟೆ,ಸೆಕ್ಟರ್ ಪ್ರ.ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ,ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ,ಹೈದರ್ ಮುಕ್ಕಚ್ಚೇರಿ,ಖಾಲಿದ್ ಅಕ್ಕರೆಕೆರೆ,ಮಜೀದ್ ಅಕ್ಕರೆಕೆರೆ,ಮನ್ಸೂರ್ ಅಕ್ಕರೆಕೆರೆ ಹಾಗು ಮುಝಯ್ಯಿನ್ ಅಕ್ಕರೆಕೆರೆ ಉಪಸ್ಥಿತರಿದ್ದರು.ಶಾಖಾ ಕಾರ್ಯದರ್ಶಿ ಶರೀಫ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಸಿರಾಜ್ ಅಕ್ಕರೆಕೆರೆ ಧನ್ಯವಾದ ಗೈದರು.

1 comment: