ಅಲ್ ಅಮೀನ್ ರಿಲೀಫ್ ಫೌಂಡೇಶನ್ ವತಿಯಿಂದ ಬೀಳ್ಕೊಡುಗೆ.
ವಿದೇಶ ಪ್ರಯಾಣ ಹೊರಡುತ್ತಿರುವ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಸಮಿತಿ ಸದಸ್ಯ,ಉಳ್ಳಾಲ ಸೆಕ್ಟರ್ ಇಶಾರ ಕಾರ್ಯದರ್ಶಿ ಹಾಗು ರಿಲೀಫ್ ಪ್ರತಿನಿಧಿ ಆದ ಅಬ್ದುಲ್ ಘನಿ ಹಳೆಕೋಟೆ ಇವರನ್ನು ಇತ್ತೀಚೆಗೆ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಅಮೀನ್ ರಿಲೀಫ್ ಫೌಂಡೇಶನ್ ವತಿಯಿಂದ ಹಳೆಕೋಟೆ ಸ್ಟೂಡೆಂಟ್ಸ್ ಹೌಸ್ ನಲ್ಲಿ ಶಾಲು ಹೊದಿಸಿ ಬೀಳ್ಕೊಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಮುನೀರ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿದರು.ರಿಲೀಫ್ ಚೇರಮಾನ್ ಮನ್ಸೂರ್ ಹಳೆಕೋಟೆ ಉದ್ಘಾಟಿಸಿ ಮಾತನಾಡಿದರು.ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್ ಅಧ್ಯಕ್ಷತೆ ವಹಿಸಿದರು.ನವಾಝ್ ಸಖಾಫಿ ಉಳ್ಳಾಲ,ಬಶೀರ್ ಸಖಾಫಿ,ಇಲ್ಯಾಸ್ ಕೈಕೋ,ಫಾರೂಖ್ ಬೊಟ್ಟು,ಅಶ್ರಫ್ ಸುಂದರಿಭಾಗ್,ಹಂಝ ಸುಂದರಿಭಾಗ್ ಹಾಗು ಹೈದರ್ ಮುಕ್ಕಚ್ಚೇರಿ ಉಪಸ್ಥಿತರಿದ್ದರು.ರಿಲೀಫ್ ಕಾರ್ಯದರ್ಶಿ ಅತೀಖ್ ಕೋಡಿ ಸ್ವಾಗತಿಸಿ ಧನ್ಯವಾದಗೈದರು.
*ಅಲ್ ಅಮೀನ್ ರಿಲೀಫ್ ಫೌಂಡೇಶನ್ ಸಮಿತಿ ಸಭೆ*
ಸಯ್ಯಿದ್ ಪೋಸೋಟು ತಂಗಳ್ ಖ.ಸಿ ಪ್ರಥಮ ಉರೂಸ್ ಪ್ರಯುಕ್ತ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಅಮೀನ್ ರಿಲೀಫ್ ಫೌಂಡೇಶನ್ ಆಶ್ರಯದಲ್ಲಿ ನಡೆಯಲಿರುವ ಸಯ್ಯಿದ್ ಪೋಸೋಟು ತಂಗಳ್ ಅನುಸ್ಮರಣಾ ಕಾರ್ಯಕ್ರಮ ಇದರ ಪೂರ್ವಭಾವಿ ಸಭೆ ನಡೆಯಿತು.
ಇತ್ತೀಚೆಗೆ ಕ್ಯಾಲಿಕಟ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಹೆಸರು ತಂದ ಎಸ್ ಎಸ್ ಎಫ್ ಉಳ್ಳಾಲ ಪೇಟೆ ಶಾಖೆಯ ಕಾರ್ಯಕರ್ತ ಫಾಝಿಲ್ ಇದೀಗ ಅಕ್ಟೋಬರ್ ನಲ್ಲಿ ಮೆಕ್ಸಿಕೋ ದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.ಅಲ್ಲಾಹು ಅವರಿಗೆ ಯಶಸ್ಸು ನೀಡಲಿ ಎಂದು ಪ್ರಾರ್ಥಿಸುವ ಮೂಲಕ ಹಾರೈಸುವ.
No comments:
Post a Comment