ದಕ್ಷಿಣ ಕನ್ನಡ ಜಿಲ್ಲಾ ಜಂಇಯ್ಯತುಲ್ ಉಲಮಾ ಇದರ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ದಾರುಲ್ ಮುಸ್ತಫ ಮೋರಲ್ ಅಕಾಡೆಮಿ ಶಿಲ್ಫಿ,ಸುನ್ನೀವಾಣಿ ಮಾಸಿಕದ ಪ್ರಧಾನ ಸಂಪಾದಕ,ಮುಡಿಪು ಸಂಯುಕ್ತ ಜಮಾಅತ್ ಪ್ರಧಾನ ಕಾರ್ಯದರ್ಶಿ,ಎಸ್ ವೈ ಎಸ್ ರಾಜ್ಯ ಕಾರ್ಯದರ್ಶಿ,ಮಲ್ಜಹ್ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಾಗು ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಇದರ ನಿರ್ದೇಶಕರೂ ಆದ ಯುವ ವಿದ್ವಾಂಸ, ಸುನ್ನತ್ ಜಮಾಅತಿನ ಆದರ್ಶ ನಾಯಕ ಬಹು ಟಿ.ಎಂ.ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಇವರನ್ನು, ಉಳ್ಳಾಲದ ಖಾಸಗಿ ಇಲ್ಯಾಸ್ ಆಡಿಟೋರಿಯಂ ನಲ್ಲಿ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ವತಿಯಿಂದ ಶಾಲು ಹೊದಿಸಿ ಸನ್ಮಾನಿಸಲಾಯಿತು.
ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ನೇತ್ರತ್ವದಲ್ಲಿ ನಡೆದ ಪ್ರಸ್ತುತ ಕಾರ್ಯಕ್ರಮದಲ್ಲಿ ಬಶೀರ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿದರು.ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಅಲ್ ಅಮೀನ್ ರಿಲೀಫ್ ಚೇರಮಾನ್ ಮನ್ಸೂರ್ ಹಳೆಕೋಟೆ, ಎಸ್ ವೈ ಎಸ್ ಉಳ್ಳಾಲ ಸೆಂಟರ್ ಪ್ರಧಾನ ಕಾರ್ಯದರ್ಶಿ ತ್ವಾಹಿರ್ ಹಾಜಿ,ರಿಲೀಫ್ ಕೋಶಾಧಿಕಾರಿ ಹಿಬಾ ಫಾರೂಖ್,ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ,ಶಬೀರ್ ಪೇಟೆ,ಆಸಿಫ್ ಉಳ್ಳಾಲ ಮುಂತಾದವರು ಉಪಸ್ಥಿತರಿದ್ದರು.ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ವರದಿ: ಆಸಿಫ್ ಉಳ್ಳಾಲ
No comments:
Post a Comment