ದ.ಕ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟ ಕರೆ ನೀಡಿದ ಪ್ರತಿಭಟನೆ ಯಶಸ್ವಿಗೆ ಕರೆ.
ಶರೀಅತ್ ಕಾನೂನು ಹಸ್ತಕ್ಷೇಪ ಮತ್ತು ಏಕ ರೂಪ ನಾಗರಿಕ ಸಂಹಿತೆ ವಿರುದ್ಧ ದ.ಕ ಜಿಲ್ಲಾ ಸುನ್ನೀ ಸಂಘಟನೆಗಳ ಒಕ್ಕೂಟ ಶುಕ್ರವಾರ ಸಾಯಂಕಾಲ 3 ಗಂಟೆಗೆ ಮಂಗಳೂರು ಜಿಲ್ಲಾಧಿಕಾರಿಗಳ ಕಛೇರಿ ಎದುರು ಹಮ್ಮಿಕೊಂಡ ಪ್ರತಿಭಟನೆ ಯಶಸ್ವಿಗೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕರೆ ನೀಡಿದೆ.
ಏಕರೂಪ ನಾಗರಿಕ ಸಂಹಿತೆ ಜಾರಿ ಮತ್ತು ತ್ರಿವಳಿ ತ್ವಲಾಖ್ ವಿಷಯದಲ್ಲಿ ಕೇಂದ್ರಸರಕಾರದ ನಡೆ ಇಸ್ಲಾಂ ಶರೀಅತಿಗೆ ವಿರುದ್ಧವಾಗಿದೆ.ಇದು ಮುಸ್ಲಿಂ ಸಮುದಾಯಕ್ಕೆ ನಿಜಕ್ಕೂ ಅನ್ಯಾಯವಾಗುವಂತಹ ಕಾನೂನಾಗಿದೆ. ಆದ್ದರಿಂದ ಪ್ರತಿಯೋರ್ವ ಮುಸಲ್ಮಾನನೂ ಪ್ರತಿಭಟನೆಯಲ್ಲಿ ಭಾಗವಹಿಸಿ ಇಸ್ಲಾಂ ಧರ್ಮದ ಸುಂದರವಾದ ಶರೀಅತ್ತನ್ನು ಉಳಿಸಿ ಪ್ರತಿಭಟನೆ ಸಂಪೂರ್ಣ ಯಶಸ್ವಿಗೊಳಿಸಬೇಕೆಂದು ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಕರೆ ನೀಡಿದೆ.
No comments:
Post a Comment