ಅಲ್ ಅಮೀನ್ ರಿಲೀಫ್ ಫೌಂಡೇಶನ್ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಉಳ್ಳಾಲ ಅಳೇಕಲ ಮದ್ರಸದಲ್ಲಿ ಸುದೀರ್ಘ 50 ವರ್ಷಗಳ ಕಾಲ ಸದರ್ ಉಸ್ತಾದ್ ಆಗಿ ಸೇವೆ ಸಲ್ಲಿಸಿದ್ದ ಮರ್ಹೂಂ ಎಸ್ ಎಂ ತಂಗಳ್ ಅನುಸ್ಮರಣಾ ಪ್ರಯುಕ್ತ ಅರ್ಹ ಬಡ ಕುಟುಂಬಗಳಿಗೆ 7 ಕ್ವಿಂಟಾಲ್ ಅಕ್ಕಿ ಮೇಲಂಗಡಿ ಫಿರ್ದೌಸ್ ಆಡಿಟೋರಿಯಂ ನಲ್ಲಿ ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್ ರವರ ನೇತ್ರತ್ವದಲ್ಲಿ ವಿತರಿಸಲಾಯಿತು.
ಬಶೀರ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿದರು.ಹಾಫಿಝ್ ಮುಈನ್ ಉಳ್ಳಾಲ ಉದ್ಘಾಟಿಸಿದರು.ಸಿರಾಜ್ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಯೂಸುಫ್ ಮಿಲ್ಲತ್ ನಗರ,ಅಶ್ರಫ್ ಸುಂದರಿಭಾಗ್,ಸತ್ತಾರ್ ಮೇಲಂಗಡಿ ಉಪಸ್ಥಿತರಿದ್ದರು.ಮೌಲಾನ ನವಾಝ್ ಸಖಾಫಿ ಸ್ವಾಗತಿಸಿ ಫಾರೂಖ್ ಬೊಟ್ಟು ಧನ್ಯವಾದಗೈದರು
Friday, 14 October 2016
ಎಸ್ ಎಂ ತಂಗಳ್ ಅನುಸ್ಮರಣೆ..ಏಳು ಕ್ವಿಂಟಲ್ ಅಕ್ಕಿ ವಿತರಣೆ
Subscribe to:
Post Comments (Atom)
No comments:
Post a Comment