Share To

Friday, 14 October 2016

ಸಯ್ಯಿದ್ ಪೋಸೋಟು ತಂಗಳ್ ಅನುಸ್ಮರಣೆ

ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧೀನದ ಅಲ್ ಅಮೀನ್ ರಿಲೀಫ್ ಫೌಂಡೇಶನ್ ವತಿಯಿಂದ ಅಸ್ಸಯ್ಯಿದ್ ಪೋಸೋಟು ತಂಗಳ್ ಅಲ್ ಬುಖಾರಿ ಖ.ಸಿ ಉರೂಸ್ ಪ್ರಚಾರಾರ್ಥ ಅಸ್ಸಯ್ಯಿದ್ ಪೋಸೋಟು ತಂಗಳ್ ಅನುಸ್ಮರಣಾ ಕಾರ್ಯಕ್ರಮ ತೊಕ್ಕೋಟು ಕ್ಲಿಕ್ ಅಡಿಟೋರಿಯಂ ಹಾಲ್ ನಲ್ಲಿ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಸ್ಮಾನ್ ಸಖಾಫಿ ಪೊಳಲಿ ದುವಾ ನೆರವೇರಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ ಸಿ ಎಫ್ ಜುಬೈಲ್ ಸೆಕ್ಟರ್ ಅಧ್ಯಕ್ಷ ಹನೀಫ್ ಸಅದಿ ಅಲ್ಲಾಹನ ಮಹಾತ್ಮರ ಸ್ಮರಣೆ ದ್ವಿಲೋಕ ವಿಜಯದ ಹಾದಿಯಾಗಿದೆ ಅಂದರು.ಸಯ್ಯಿದ್ ಪೋಸೋಟು ತಂಗಳ್ ಅನುಸ್ಮರಣಾ ಕಾರ್ಯಕ್ರಮದಲ್ಲಿ ತಹ್ಲೀಲ್ ಸಂಗಮಕ್ಕೆ ನೇತ್ರತ್ವ ನೀಡಿ ಮಾತನಾಡಿದ ಮಳ್ಹರ್ ನೂರುಲ್ ಇಸ್ಲಾಮೀ ತಅಲೀಂ ಇದರ ಪ್ರಧಾನ ಕಾರ್ಯದರ್ಶಿ ಅಸ್ಸಯ್ಯಿದ್ ಜಲಾಲುದ್ದೀನ್ ತಂಗಳ್ ಅಲ್ ಬುಖಾರಿ ಅಲ್ಲಾಹನ ಮಹಾತ್ಮರನ್ನು ಸ್ಮರಿಸುವುದು ಪಾಪ ವಿಮೋಚನೆಯ ದಾರಿಯಾಗಿದೆ.ಅಸ್ಸಯ್ಯಿದ್ ಪೋಸೋಟು ತಂಗಳ್ ಖ.ಸಿ ಅಗಾಧ ಜ್ಞಾನದ  ಒಡೆಯರಾಗಿದ್ದರು ಮತ್ತು ಅವರು ಶಿಕ್ಷಣವನ್ನು ತುಂಬಾ ಪ್ರೀತಿಸುತ್ತಿದ್ದರು.ಅವರು ಮಳ್ಹರ್ ವಿದ್ಯಾ ಸಂಸ್ಥೆಯ ಸಾರಥಿಯಾಗಿದ್ದರು.ಇಂದು ಧಾರ್ಮಿಕ ಹಾಗು ಲೌಕಿಕ ಶಿಕ್ಷಣ ನೀಡುವ ಮಾದರೀ ಸಂಸ್ಥೆಯಾಗಿ ಮಳ್ಹರ್ ಕಾರ್ಯಾಚರಿಸುತ್ತಿದೆ ಅಂದರು.ಎಸ್ ವೈ ಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆ ಸಿ ರೋಡ್ ಮುಖ್ಯ ಪ್ರಭಾಷಣ ಮಾಡಿ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಅಮೀನ್ ರಿಲೀಫ್ ಫೌಂಡೇಶನ್ ಇದರ ರಿಲೀಫ್ ಸೇವನೆಯು ಇಡೀ ಕರ್ನಾಟಕಕ್ಕೆ ಮಾದರಿಯಾಗಿದೆ ಅಂದರು.ಶರೀಫ್ ಸಅದಿ ಸುಂದರಿಭಾಗ್ ಹಾಗೂ ಡಿಕೆಎಸ್ಸಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಅರಮಿಕ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ರಿಲೀಫ್ ಚೇರಮಾನ್ ಮನ್ಸೂರು ಹಳೆಕೋಟೆ ಅಲ್ ಅಮೀನ್ ರಿಲೀಫ್ ಫೌಂಡೇಶನ್ ಇದರ ಬ್ರೌಶರನ್ನು ಸಯ್ಯಿದ್ ಜಲಾಲುದ್ದೀನ್ ತಂಗಳ್ ರವರಿಗೆ ನೀಡಿ ಬಿಡುಗಡೆಗೊಳಿಸಿದರು.ಬಳಿಕ ಅರ್ಹ ಬಡ ಮುಅಲ್ಲಿಮರಿಗೆ ಗೌರವ ಧನ ಮತ್ತು ಅರ್ಹ ಬಡ ಕುಟುಂಬದ ವ್ರದ್ಧರಿಗೆ ವ್ರದ್ಧಾಪ್ಯ ವೇತನ ಇದರ ಚೆಕ್ಕನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.ಸಯ್ಯಿದ್ ಪೋಸೋಟು ತಂಗಳ್ ಉರೂಸಿಗೆ ಅಲ್ ಅಮೀನ್ ರಿಲೀಫ್ ಫೌಂಡೇಶನ್ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲದಿಂದ ಅಕ್ಕಿ ಸಂದಲ್ ಮೆರವಣಿಗೆಯ ಮೂಲಕ ಹಸ್ತಾಂತರಿಸಲಾಗುವುದೆಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
      ಪ್ರಸ್ತುತ ಈ ಕಾರ್ಯಕ್ರಮದಲ್ಲಿ ಮಳ್ಹರ್ ಅಕಾಡೆಮಿಕ್ ಆಫ್ ಜನರಲ್ ಎಜ್ಯುಕೇಶನಲ್ ಟ್ರಸ್ಟ್ ಇದರ ಕಾರ್ಯದರ್ಶಿ ಫಾರೂಖ್ ಕಲ್ಲಾಪು,ರಿಲೀಫ್ ಕೋಶಾಧಿಕಾರಿ ಫಾರೂಖ್ ಹಿಬಃ, ಫಾರೂಖ್ ಬೊಟ್ಟು,ಬಶೀರ್ ಸಖಾಫಿ ಉಳ್ಳಾಲ,ಅಶ್ರಫ್ ಅಕ್ಕರೆಕೆರೆ,ಉಪಾಧ್ಯಕ್ಷರುಗಳಾದ ಮುಹಮ್ಮದ್ ಮದನಿ ಹಳೆಕೋಟೆ,ನವಾಝ್ ಸಖಾಫಿ ಉಳ್ಳಾಲ,ಶಬೀರ್ ಪೇಟೆ,ಕಾರ್ಯದರ್ಶಿಗಳಾದ ತಾಜುದ್ದೀನ್ ಹಳೆಕೋಟೆ,ಹಫೀಝ್ ಕೋಡಿ,ನೌಫಲ್ ಕೋಟೆಪುರ,ಹಾಗು ಸತ್ತಾರ್ ಮೇಲಂಗಡಿ ಉಪಸ್ಥಿತರಿದ್ದರು.ರಿಲೀಫ್ ಕಾರ್ಯದರ್ಶಿ ಅತೀಖ್ ಕೋಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಮುನೀರ್ ಸಖಾಫಿ ಉಳ್ಳಾಲ ಧನ್ಯವಾದಗೈದರು.

No comments:

Post a Comment