Share To

Friday, 14 October 2016

ನೂತನ ಸಮಿತಿ ಅಸ್ತಿತ್ವಕ್ಕೆ.

ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಇದರ ವಿಶೇಷ ಕೌನ್ಸಿಲ್ ಸಭೆಯು ಸ್ಟೂಡೆಂಟ್ಸ್ ಹೌಸ್ ಹಳೆಕೋಟೆ ಕಛೇರಿಯಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.
ಹಳೆಕೋಟೆ ಶಾಖಾಧ್ಯಕ್ಷ ಮುಹಮ್ಮದ್ ಮದನಿ ನಾರಿಯತ್ ಸ್ವಲಾತ್ ಮಜ್ಲಿಸ್ ಗೆ ನೇತ್ರತ್ವ ನೀಡಿ ದುವಾ ಮಾಡಿದರು.ಖುಬೈಬ್ ತಂಗಳ್ ಸ್ವಾಗತಿಸಿದರು.ಮನ್ಸೂರ್ ಹಳೆಕೋಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಳಿಕ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಇದರ ನೂತನ ಸಮಿತಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.
       ಅಧ್ಯಕ್ಷರಾಗಿ ಖುಬೈಬ್ ತಂಗಳ್,ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಮದನಿ ಹಳೆಕೋಟೆ,ಮೌಲಾನ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಹಾಗೂ ಶಬೀರ್ ಪೇಟೆ,ಪ್ರಧಾನ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಕೋಟೆಪುರ,ಕಾರ್ಯದರ್ಶಿಗಳಾಗಿ ಸಿರಾಜುದ್ದೀನ್ ಅಕ್ಕರೆಕೆರೆ,ತಾಜುದ್ದೀನ್ ಹಳೆಕೋಟೆ ಹಾಗೂ ಹಫೀಝ್ ಕೋಡಿ,ಕೋಶಾಧಿಕಾರಿಯಾಗಿ ಇಲ್ಯಾಸ್ ಕೈಕೋ,ಎಸ್ ಎಸ್ ಎಫ್ ಉಳ್ಳಾಲ ಕ್ಯಾಂಪಸ್ ಕಾರ್ಯದರ್ಶಿಯಾಗಿ ನೌಫಲ್ ಕೋಟೆಪುರ,ಎಸ್ ಬಿ ಎಸ್ ಉಸ್ತುವಾರಿ ಅಹ್ಸನ್,ಇಶಾರ ನಿರ್ವಾಹಕರಾಗಿ ಅಬ್ದುಲ್ ಘನಿ ಹಳೆಕೋಟೆ,ರೀಡ್ ಪ್ಲಸ್ ನಿರ್ವಾಹಕರಾಗಿ ಹನೀಫ್ ಬೊಟ್ಟು,ಅಲ್ ಅಮೀನ್ ರಿಲೀಫ್ ಫೌಂಡೇಶನ್ ಚೇರಮಾನ್ ಆಗಿ ಮನ್ಸೂರ್ ಹಳೆಕೋಟೆ ಹಾಗೂ 40 ಮಂದಿ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ಬಶೀರ್ ಅಹ್ಸನಿ ತೋಡಾರ್ ಸಂಘಟನೆಯ ಕುರಿತು ತರಗತಿ ನಡೆಸಿದರು.ಬಳಿಕ ನೂತನಾಧ್ಯಕ್ಷ ಖುಬೈಬ್ ತಂಗಳ್ ಅಧ್ಯಕ್ಷ ಭಾಷಣ ಮಾಡಿದರು.ಕೊನೆಗೆ ಜೊತೆ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಧನ್ಯವಾದ ಮಾಡಿದರು

No comments:

Post a Comment