ಸಯ್ಯಿದ್ ಖುಬೈಬ್ ತಂಗಳ್ ರವರ ಸಾರಥ್ಯದಲ್ಲಿ ಮುನ್ನಡೆಯುತ್ತಿರುವ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ನಡೆಸಿದ ಕಾರ್ಯಕ್ರಮಗಳು*
����������������������
ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಇದರ ವಿಶೇಷ ಕೌನ್ಸಿಲ್ ಸಭೆಯು ಸ್ಟೂಡೆಂಟ್ಸ್ ಹೌಸ್ ಹಳೆಕೋಟೆ ಕಛೇರಿಯಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಜರುಗಿತು.
ಹಳೆಕೋಟೆ ಶಾಖಾಧ್ಯಕ್ಷ ಮುಹಮ್ಮದ್ ಮದನಿ ನಾರಿಯತ್ ಸ್ವಲಾತ್ ಮಜ್ಲಿಸ್ ಗೆ ನೇತ್ರತ್ವ ನೀಡಿ ದುವಾ ಮಾಡಿದರು.ಖುಬೈಬ್ ತಂಗಳ್ ಸ್ವಾಗತಿಸಿದರು.ಮನ್ಸೂರ್ ಹಳೆಕೋಟೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.ಬಳಿಕ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಇದರ ನೂತನ ಸಮಿತಿಗೆ ಆಯ್ಕೆ ಪ್ರಕ್ರಿಯೆ ನಡೆಯಿತು.
ಅಧ್ಯಕ್ಷರಾಗಿ ಖುಬೈಬ್ ತಂಗಳ್,ಉಪಾಧ್ಯಕ್ಷರುಗಳಾಗಿ ಮುಹಮ್ಮದ್ ಮದನಿ ಹಳೆಕೋಟೆ,ಮೌಲಾನ ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ ಹಾಗೂ ಶಬೀರ್ ಪೇಟೆ,ಪ್ರಧಾನ ಕಾರ್ಯದರ್ಶಿಯಾಗಿ ಮುಝಮ್ಮಿಲ್ ಕೋಟೆಪುರ,ಕಾರ್ಯದರ್ಶಿಗಳಾಗಿ ಸಿರಾಜುದ್ದೀನ್ ಅಕ್ಕರೆಕೆರೆ,ತಾಜುದ್ದೀನ್ ಹಳೆಕೋಟೆ ಹಾಗೂ ಹಫೀಝ್ ಕೋಡಿ,ಕೋಶಾಧಿಕಾರಿಯಾಗಿ ಇಲ್ಯಾಸ್ ಕೈಕೋ,ಎಸ್ ಎಸ್ ಎಫ್ ಉಳ್ಳಾಲ ಕ್ಯಾಂಪಸ್ ಕಾರ್ಯದರ್ಶಿಯಾಗಿ ನೌಫಲ್ ಕೋಟೆಪುರ,ಎಸ್ ಬಿ ಎಸ್ ಉಸ್ತುವಾರಿ ಅಹ್ಸನ್,ಇಶಾರ ನಿರ್ವಾಹಕರಾಗಿ ಅಬ್ದುಲ್ ಘನಿ ಹಳೆಕೋಟೆ,ರೀಡ್ ಪ್ಲಸ್ ನಿರ್ವಾಹಕರಾಗಿ ಹನೀಫ್ ಬೊಟ್ಟು,ಅಲ್ ಅಮೀನ್ ರಿಲೀಫ್ ಫೌಂಡೇಶನ್ ಚೇರಮಾನ್ ಆಗಿ ಮನ್ಸೂರ್ ಹಳೆಕೋಟೆ ಹಾಗೂ 40 ಮಂದಿ ಕಾರ್ಯಕಾರಿ ಸಮಿತಿಯನ್ನು ಆರಿಸಲಾಯಿತು.
ಬಶೀರ್ ಅಹ್ಸನಿ ತೋಡಾರ್ ಸಂಘಟನೆಯ ಕುರಿತು ತರಗತಿ ನಡೆಸಿದರು.ಬಳಿಕ ನೂತನಾಧ್ಯಕ್ಷ ಖುಬೈಬ್ ತಂಗಳ್ ಅಧ್ಯಕ್ಷ ಭಾಷಣ ಮಾಡಿದರು.ಕೊನೆಗೆ ಜೊತೆ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಧನ್ಯವಾದ ಮಾಡಿದರು
����������������������
*ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಹಾಗು ಎಸ್ ಎಸ್ ಎಫ್ ಮೇಲಂಗಡಿ ಶಾಖೆ ಆಶ್ರಯದಲ್ಲಿ ಸ್ವಾತಂತ್ರ್ಯೋತ್ಸವ ಹಾಗೂ ಪ್ರತಿಜ್ಞಾ ವಿಧಿ ಸ್ವೀಕಾರ*
******************************
ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಹಾಗು ಎಸ್ ಎಸ್ ಎಫ್ ಮೇಲಂಗಡಿ ಶಾಖೆ ಜಂಟಿ ಆಶ್ರಯದಲ್ಲಿ ಶಾಖಾಧ್ಯಕ್ಷ ಅಬ್ದುಸ್ಸಮದ್ ರವರ ನೇತ್ರತ್ವದಲ್ಲಿ ಮೇಲಂಗಡಿ ಫಿರ್ದೌಸ್ ಅಪಾರ್ಟ್ ಮೆಂಟ್ ವರಾಂಡದಲ್ಲಿ ಆಗಸ್ಟ್ 15 ಬೆಳಿಗ್ಗೆ 10 ಗಂಟೆಗೆ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು.ಉಸ್ಮಾನ್ ಸಖಾಫಿ ದುವಾ ನೆರವೇರಿಸಿದರು.ನವಾಝ್ ಸಖಾಫಿ ಉಳ್ಳಾಲ ಉದ್ಘಾಟಿಸಿದರು.ಎಸ್ ಎಸ್ ಎಫ್ ಹಾವೇರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮುಸ್ತಫ ನಯೀಮಿ ಹಾವೇರಿ ಸ್ವಾತಂತ್ರ್ಯ ಸಂದೇಶ ಭಾಷಣ ಮಾಡಿದರು.ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಧ್ವಜಾರೋಹಣ ಮಾಡಿದರು.
ಪ್ರಸ್ತುತ ಕಾರ್ಯಕ್ರಮದಲ್ಲಿ ರಿಲೀಫ್ ಚೇರಮಾನ್ ಮನ್ಸೂರ್ ಹಳೆಕೋಟೆ,ಉಳ್ಳಾಲ ದರ್ಗಾ ಸಮಿತಿ ಅಬ್ದುಲ್ ಅಝೀಝ್ ಕೋಡಿ,ಸತ್ತಾರ್ ಮೇಲಂಗಡಿ,ಅಬ್ದುಲ್ ಘನಿ,ನವಾಝ್ ಮೇಲಂಗಡಿ,ತಶ್ರೀಫ್ ಹಾಗೂ ಎಸ್ ಎಸ್ ಎಫ್ ಉಳ್ಳಾಲ ಕಾರ್ಯಕರ್ತರು ಭಾಗವಹಿಸಿದರು.
***********----------**********
*ಪ್ರತಿಜ್ಞಾ ವಿಧಿ ಸ್ವೀಕಾರ ಸಮಾರಂಭ*
ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಇದರ ನೂತನ ಸಮಿತಿಯು ಆಗಸ್ಟ್ 15 ಮಗ್ರಿಬ್ ನಮಾಜು ಬಳಿಕ ಹಳೆಕೋಟೆ ಉಳ್ಳಾಲ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆದ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್,ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಕೋಶಾಧಿಕಾರಿ ಇಲ್ಯಾಸ್ ಕೈಕೋ ಹಾಗೂ ಉಪಾಧ್ಯಕ್ಷರುಗಳಾದ ಮುಹಮ್ಮದ್ ಮದನಿ ಹಳೆಕೋಟೆ,ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ,ಶಬೀರ್ ಪೇಟೆ,ಕಾರ್ಯದರ್ಶಿಗಳಾದ ಸಿರಾಜ್ ಮೇಲಂಗಡಿ,ತಾಜುದ್ದೀನ್ ಹಳೆಕೋಟೆ,ಹಫೀಝ್ ಕೋಡಿ,ನೌಫಲ್ ಕೋಟೆಪುರ ಇವರು ಪ್ರಾರಂಭದಲ್ಲಿ ಬೇರೆಬೇರೆಯಾಗಿ ಪ್ರತಿಜ್ಞಾ ವಿಧಿ ಸ್ವೀಕರಿಸಿದರು.ಬಳಿಕ ಎಲ್ಲರೂ ಒಟ್ಟಿಗೆ ಪ್ರತಿಜ್ಞೆಗೈದರು.ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಪ್ರತಿಜ್ಞಾ ವಿಧಿ ಬೋಧಿಸಿದರು.
******************************
*ಪ್ರತಿಜ್ಞೆ*
ಪ್ರಾಪಂಚಿಕ ಸುನ್ನೀ ನೇತಾರ ಶೈಖುನಾ ತಾಜುಲ್ ಉಲಮಾ ಅಲ್ ಬುಖಾರಿ ಖ.ಸಿ ಮತ್ತು ಸುಲ್ತಾನುಲ್ ಎಪಿ ಉಸ್ತಾದ್ ರವರ ನಾಯಕತ್ವವನ್ನು ಸಂಪೂರ್ಣವಾಗಿ ಅಂಗೀಕರಿಸಿ ಖುತುಬುಝ್ಝಮಾನ್ ಅಸ್ಸಯ್ಯಿದ್ ಮುಹಮ್ಮದ್ ಶರೀಫುಲ್ ಮದನಿ ಖ.ಸಿ ರವರು ಅಂತ್ಯ ವಿಶ್ರಾಂತಿ ಹೊಂದುತ್ತಿರುವ ಉಳ್ಳಾಲದ ಮಣ್ಣಿನಲ್ಲಿ 1984 ರಲ್ಲಿ ಜನ್ಮ ತಾಳಿ ಸುಮಾರು 32 ವರ್ಷಗಳಿಂದ ಧಾರ್ಮಿಕ ಶೈಕ್ಷಣಿಕ ಮತ್ತು ಸಾಮಾಜಿಕ ಸೇವಾ ರಂಗದಲ್ಲಿ ಪೂರ್ಣವಾಗಿ ತನ್ನನ್ನು ತೊಡಗಿಸಿಕೊಂಡ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಇದರ 2016 ನೇ ಸಾಲಿನಲ್ಲಿ ನನಗೆ ಅರ್ಪಿತವಾದ ಹುದ್ದೆಯನ್ನು ಜವಾಬ್ದಾರಿಯುತವಾಗಿ ನಿರ್ವಹಣೆ ಮಾಡಲು ಶೇಕಡಾ ನೂರರಷ್ಟು ಪ್ರಯತ್ನಿಸುವೆನೆಂದು ಸಂಘಟನೆಯ ಸೇವೆಯ ಅಂಗವಾಗಿ ನೇತಾರರು ಸಲಹಾ ಸಮಿತಿಯ ನಾಯಕರು ಕರೆದಾಗಲೆಲ್ಲಾ ನನ್ನ ವೈಯಕ್ತಿಕ ಅಗತ್ಯಗಳನ್ನು ಬದಿಗಿರಿಸಿ ಸಂಘಟನೆಯ ಆವಶ್ಯಕತೆಗಳಿಗೆ ಆದ್ಯತೆ ನೀಡಿ ಹಾಜರಾಗುವೆನೆಂದು ನಾನು ಮನದಾಳದಿಂದ ಪ್ರತಿಜ್ಞೆ ಮಾಡುತ್ತಿದ್ದೇನೆ.
"ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿಗಳಿವೆ. ಹಾಗೂ ಅವುಗಳ ಕುರಿತು ನೀವು ಕೇಳಲ್ಪಡುವಿರಿ" ಎಂಬ ಹದೀಸ್ ವಚನವು ನನ್ನಲ್ಲಿ ಅರ್ಪಿತವಾದ ಹುದ್ದೆಯಲ್ಲಿ ಕ್ರಿಯಾಶೀಲವಾಗುವಂತೆ ಸದಾ ನನ್ನನ್ನು ಪ್ರೇರೇಪಿಸುವುದು ಎಂದು ನಾನು ನಂಬುತ್ತೇನೆ ಹಾಗು ಅಹ್ಲುಸ್ಸುನ್ನತಿ ವಲ್ ಜಮಾಅತಿನ ಆಶಯಗಳಿಗೆ ಬದ್ಧನಾಗಿ ಜೀವಿಸುವೆನೆಂದೂ ಯಾವುದೇ ಕಾರಣಕ್ಕೂ ಸುನ್ನೀ ವಿರುದ್ಧ ಆಶಯಗಳೊಂದಿಗೆ ಹಾಗೂ ಅದರ ಅನುಯಾಯಿಗಳೊಂದಿಗೂ ಯಾವುದೇ ರೀತಿಯ ಸ್ನೇಹ ಸಂಬಂಧಗಳನ್ನು ಬೆಳೆಸಲಾರೆನೆಂದೂ ದ್ರಢ ಪ್ರತಿಜ್ಞೆ ಮಾಡುತ್ತಿದ್ದೇನೆ.
"""""""""""""""""""""""""""""""""""""
ವರದಿ ; ನವಾಝ್ ಸಖಾಫಿ ಅಲ್ ಅಮ್ಜದಿ ಉಳ್ಳಾಲ
����������������������
ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಸೆಕ್ಟರ್ ನೂತನಾಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಉಳ್ಳಾಲ ಪೇಟೆ ಸಮುದಾಯ ಭವನದಲ್ಲಿ ಈ ವರ್ಷ ಪವಿತ್ರ ಹಜ್ ಯಾತ್ರೆ ಕೈಗೊಳ್ಳುವ ಉಳ್ಳಾಲದ ಹಜ್ಜಾಜ್ ಗಳಿಗೆ ಬೀಳ್ಕೊಡುಗೆ ಸಮಾರಂಭ ಮತ್ತು ಹಜ್ ತರಬೇತಿ ಶಿಬಿರ ನಡೆಯಿತು.ಎಸ್ ಎಸ್ ಎಫ್ ಉಳ್ಳಾಲ ಅಕ್ಕರೆಕೆರೆ ನಾಯಕ ಬಶೀರ್ ಸಖಾಫಿ ಉಳ್ಳಾಲ ದುವಾ ನಿರ್ವಹಿಸಿದರು.ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಪವಿತ್ರ ಹಜ್ ಯಾತ್ರೆ ಪುಣ್ಯದಾಯಕವಾದ ಸತ್ಕರ್ಮವಾಗಿದ್ದು ಮುಸ್ಲಿಮನ ಮೂಲಭೂತ ಕಾರ್ಯಗಳಲ್ಲೊಂದಾಗಿದೆ ಎಂದು ತಿಳಿಸಿದರು.ಎಸ್ ಎಸ್ ಎಫ್ ತೊಕ್ಕೋಟು ಸೆಕ್ಟರ್ ರಿಲೀಫ್ ಚೇರಮಾನ್ ಅಲ್ತಾಫ್ ಕುಂಪಲ ಮತ್ತು ಸುಲ್ತಾನ್ ಅಬೂಬಕರ್ ಮದನಿ ಪ್ರಾಸ್ತಾವಿಕ ಭಾಷಣ ಮಾಡಿದರು.ಬಳಿಕ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಈ ವರ್ಷ ಪವಿತ್ರ ಹಜ್ ಗೆ ತೆರಳುವ ತೊಕ್ಕೋಟು ಹಿದಾಯ ಮಸೀದಿ ಸಮಿತಿ ಸದಸ್ಯ ರಝ್ಝಾಖ್ ತೊಕ್ಕೋಟು,ಉಳ್ಳಾಲ ಕೇಂದ್ರ ಜುಮಾ ಮಸೀದಿ ಸಿಬ್ಬಂದಿ ಅಬೂಬಕರ್ ಮದನಿ,ಉಳ್ಳಾಲ ದರ್ಗಾ ಮಾಜಿ ಸಮಿತಿ ಸದಸ್ಯರಾದ ಅಹಮದ್ ಬಾವ,ಖಾದರ್ ಮಾರ್ಗತಲೆ,ಉಳ್ಳಾಲ ದರ್ಗಾ ಸಮಿತಿ ಸದಸ್ಯರಾದ ಹನೀಫ್ ಮಾರ್ಗತಲೆ,ಫಾರೂಖ್ ಮಾರ್ಗತಲೆ ಹಾಗೂ ಹೈದರ್ ಸುಂದರಿಭಾಗ್ ಇವರನ್ನು ಶಾಲುಹೊದಿಸಿ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು.ಸೆಕ್ಟರ್ ನೂತನಾಧ್ಯಕ್ಷರಾಗಿ ಆಯ್ಕೆಯಾದ ಸಯ್ಯಿದ್ ಖುಬೈಬ್ ತಂಗಳ್,ದ.ಕ ಜಿಲ್ಲಾ ಕೋಶಾಧಿಕಾರಿ ಅಲ್ತಾಫ್ ಕುಂಪಲ ಹಾಗೂ ವಿದೇಶ ಯಾತ್ರೆ ಹೊರಡುತ್ತಿರುವ ಉಸ್ಮಾನ್ ಕೋಡಿ ಇವರುಗಳನ್ನು ಗಣ್ಯರ ಸಮ್ಮುಖದಲ್ಲಿ ಸನ್ಮಾನಿಸಲಾಯಿತು.
ಉಳ್ಳಾಲ ದರ್ಗಾ ಸಮಿತಿ ಸದಸ್ಯರಾದ ತ್ವಾಹಿರ್ ಹಾಜಿ ಮುಕ್ಕಚ್ಚೇರಿ,ಅಬ್ದುಲ್ ಖಾದರ್ ಕೋಡಿ,ಆಬ್ದುಲ್ ಅಝೀಝ್ ಕೋಡಿ,ಎಸ್ ವೈ ಎಸ್ ಅಳೇಕಲ ಬ್ರಾಂಚ್ ಅಧ್ಯಕ್ಷ ಸಯ್ಯಿದ್ ಜಲಾಲುದ್ದೀನ್ ತಂಗಳ್,ಉಳ್ಳಾಲ ಅಲ್ ಅಮೀನ್ ರಿಲೀಫ್ ಫೌಂಡೇಶನ್ ಕಾರ್ಯದರ್ಶಿ ಅತೀಖ್ ಕೋಡಿ,ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ,ರೀಡ್ ಪ್ಲಸ್ ಪ್ರತಿನಿಧಿ ಹನೀಫ್ ಬೊಟ್ಟು,ಇಶಾರ ಕಾರ್ಯದರ್ಶಿ ಅಬ್ದುಲ್ ಘನಿ,ಮದೀನ ಇಸ್ಮಾಯಿಲ್,ಶಿಹಾಬ್ ಪೇಟೆ,ಎಸ್ ವೈ ಎಸ್ ಮುಕ್ಕಚ್ಚೇರಿ ಬ್ರಾಂಚ್ ಕೋಶಾಧಿಕಾರಿ ಹೈದರ್ ಮುಕ್ಕಚ್ಚೇರಿ,ಎಸ್ ಎಸ್ ಎಫ್ ಕ್ಯಾಂಪಸ್ ಪ್ರಧಾನ ಕಾರ್ಯದರ್ಶಿ ನೌಫಲ್ ಕೋಟೆಪುರ,ಸೆಕ್ಟರ್ ಕಾರ್ಯದರ್ಶಿಗಳಾದ ಹಫೀಝ್ ಕೋಡಿ ಹಾಗೂ ತಾಜುದ್ದೀನ್ ಹಳೆಕೋಟೆ,ಮುಕ್ಕಚ್ಚೇರಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಹಾಗೂ ಯೂಸುಫ್ ಮಿಲ್ಲತ್ ಉಪಸ್ಥಿತರಿದ್ದರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿದರು.ಸೆಕ್ಟರ್ ಕಾರ್ಯದರ್ಶಿ ಸಿರಾಜ್ ಮೇಲಂಗಡಿ ಕಾರ್ಯಕ್ರಮ ನಿರೂಪಿಸಿದರು.ಸೆಕ್ಟರ್ ಉಪಾಧ್ಯಕ್ಷ ಮುಹಮ್ಮದ್ ಮದನಿ ಧನ್ಯವಾದ ಮಾಡಿದರು.
����������������������
ಅಲ್ ಅಮೀನ್ ರಿಲೀಫ್ ಫೌಂಡೇಶನ್ ವತಿಯಿಂದ ಬೀಳ್ಕೊಡುಗೆ.
ವಿದೇಶ ಪ್ರಯಾಣ ಹೊರಡುತ್ತಿರುವ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಸಮಿತಿ ಸದಸ್ಯ,ಉಳ್ಳಾಲ ಸೆಕ್ಟರ್ ಇಶಾರ ಕಾರ್ಯದರ್ಶಿ ಹಾಗು ರಿಲೀಫ್ ಪ್ರತಿನಿಧಿ ಆದ ಅಬ್ದುಲ್ ಘನಿ ಹಳೆಕೋಟೆ ಇವರನ್ನು ಇತ್ತೀಚೆಗೆ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಅಮೀನ್ ರಿಲೀಫ್ ಫೌಂಡೇಶನ್ ವತಿಯಿಂದ ಹಳೆಕೋಟೆ ಸ್ಟೂಡೆಂಟ್ಸ್ ಹೌಸ್ ನಲ್ಲಿ ಶಾಲು ಹೊದಿಸಿ ಬೀಳ್ಕೊಡಲಾಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಮುನೀರ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿದರು.ರಿಲೀಫ್ ಚೇರಮಾನ್ ಮನ್ಸೂರ್ ಹಳೆಕೋಟೆ ಉದ್ಘಾಟಿಸಿ ಮಾತನಾಡಿದರು.ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್ ಅಧ್ಯಕ್ಷತೆ ವಹಿಸಿದರು.ನವಾಝ್ ಸಖಾಫಿ ಉಳ್ಳಾಲ,ಬಶೀರ್ ಸಖಾಫಿ,ಇಲ್ಯಾಸ್ ಕೈಕೋ,ಫಾರೂಖ್ ಬೊಟ್ಟು,ಅಶ್ರಫ್ ಸುಂದರಿಭಾಗ್,ಹಂಝ ಸುಂದರಿಭಾಗ್ ಹಾಗು ಹೈದರ್ ಮುಕ್ಕಚ್ಚೇರಿ ಉಪಸ್ಥಿತರಿದ್ದರು.ರಿಲೀಫ್ ಕಾರ್ಯದರ್ಶಿ ಅತೀಖ್ ಕೋಡಿ ಸ್ವಾಗತಿಸಿ ಧನ್ಯವಾದಗೈದರು.
*ಅಲ್ ಅಮೀನ್ ರಿಲೀಫ್ ಫೌಂಡೇಶನ್ ಸಮಿತಿ ಸಭೆ*
ಸಯ್ಯಿದ್ ಪೋಸೋಟು ತಂಗಳ್ ಖ.ಸಿ ಪ್ರಥಮ ಉರೂಸ್ ಪ್ರಯುಕ್ತ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಅಮೀನ್ ರಿಲೀಫ್ ಫೌಂಡೇಶನ್ ಆಶ್ರಯದಲ್ಲಿ ನಡೆಯಲಿರುವ ಸಯ್ಯಿದ್ ಪೋಸೋಟು ತಂಗಳ್ ಅನುಸ್ಮರಣಾ ಕಾರ್ಯಕ್ರಮ ಇದರ ಪೂರ್ವಭಾವಿ ಸಭೆ ನಡೆಯಿತು.
ಇತ್ತೀಚೆಗೆ ಕ್ಯಾಲಿಕಟ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಹೆಸರು ತಂದ ಎಸ್ ಎಸ್ ಎಫ್ ಉಳ್ಳಾಲ ಪೇಟೆ ಶಾಖೆಯ ಕಾರ್ಯಕರ್ತ ಫಾಝಿಲ್ ಇದೀಗ ಅಕ್ಟೋಬರ್ ನಲ್ಲಿ ಮೆಕ್ಸಿಕೋ ದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.ಅಲ್ಲಾಹು ಅವರಿಗೆ ಯಶಸ್ಸು ನೀಡಲಿ ಎಂದು ಪ್ರಾರ್ಥಿಸುವ ಮೂಲಕ ಹಾರೈಸುವ.
����������������������
ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ವತಿಯಿಂದ ಇತ್ತೀಚೆಗೆ ಹೊಸ ದಿಗಂತ ಪತ್ರಿಕೆಯಲ್ಲಿ ಇಸ್ಲಾಮಿನ ಕುರಿತು ಪ್ರಕಟವಾದ ಆಕ್ಷೇಪಾರ್ಹ ಲೇಖನಕ್ಕೆ ಸಂಬಂಧಿಸಿ ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್ ರವರ ನೇತ್ರತ್ವದಲ್ಲಿ ಬ್ರಹತ್ ಖಂಡನಾ ಸಭೆ ಹಳೆಕೋಟೆ ಸ್ಟೂಡೆಂಟ್ಸ್ ಹೌಸ್ ನಲ್ಲಿ ನಡೆಯಿತು.
ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅಕ್ಕರೆಕೆರೆ ಶಾಖಾಧ್ಯಕ್ಷ ನವಾಝ್ ಸಖಾಫಿ ಉಳ್ಳಾಲ ರೋಹಿತ್ ಚಕ್ರತೀರ್ಥ ಎಂಬವ ಹೊಸ ದಿಗಂತ ಪತ್ರಿಕೆಯಲ್ಲಿ ಇಸ್ಲಾಮಿನ ಕುರಿತು ಕಪೋಲ ಕಲ್ಪಿತ ವರದಿಯನ್ನು ಪ್ರಕಟಿಸಿ ಮುಸ್ಲಿಂ ಸಮುದಾಯವನ್ನು ಭಾವನಾತ್ಮಕವಾಗಿ ಘಾಸಿಗೊಳಿಸುವ ಪ್ರಯತ್ನ ಮಾಡಿರುವುದು ಖಂಡನೀಯ ಎಂದರು.ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್ ಮಾತನಾಡಿ ಭಯೋತ್ಪಾದನಾ ಸಂಘಟನೆಯಾದ ಐಸಿಸನ್ನು ಇಸ್ಲಾಮಿನೊಂದಿಗೆ ತಳಕು ಹಾಕಿಕೊಂಡು ಇಸ್ಲಾಮನ್ನು ಭಯೋತ್ಪಾದನಾ ಧರ್ಮವಾಗಿ ಚಿತ್ರಿಸಿರುವುದು ಖೇದಕರವೆಂದರು.ಇಸ್ಲಾಂ ಶಾಂತಿ ಸೌಹಾರ್ದತೆಯ ಧರ್ಮವಾಗಿದ್ದು ,ನಿನ್ನ ನೆರೆಕರೆಯವನನ್ನು ಗೌರವಿಸು. ಅವನು ಯಾವುದೇ ಜಾತಿ ಧರ್ಮದವನಾಗಿರಲಿ ಅವನನ್ನು ಗೌರವಿಸು ಎಂದು ಕಲಿಸಿದ ಮಾನವೀಯ ಸಂದೇಶವನ್ನು ಸಾರುವ ಧರ್ಮವಾಗಿದೆ ಎಂದು ತಿಳಿಸಿದರು.ಹಳೆಕೋಟೆ ಶಾಖಾಧ್ಯಕ್ಷ ಮುಹಮ್ಮದ್ ಮದನಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪ್ರಸ್ತುತ ಸಭೆಯಲ್ಲಿ ಸೆಕ್ಟರ್ ಕಾರ್ಯದರ್ಶಿಗಳಾದ ತಾಜುದ್ದೀನ್ ಹಳೆಕೋಟೆ,ಸಿರಾಜ್ ಮೇಲಂಗಡಿ,ಹಫೀಝ್ ಕೋಡಿ,ಉಳ್ಳಾಲ ಕ್ಯಾಂಪಸ್ ಕಾರ್ಯದರ್ಶಿ ನೌಫಲ್ ಕೋಟೆಪುರ,ಸೆಕ್ಟರ್ ಉಪಾಧ್ಯಕ್ಷ ಶಬೀರ್ ಪೇಟೆ,ಕೋಶಾಧಿಕಾರಿ ಇಲ್ಯಾಸ್ ಕೈಕೋ,ಅಬ್ದುಲ್ ಘನಿ ಹಳೆಕೋಟೆ,ಹನೀಫ್ ಬೊಟ್ಟು, ಶಿಹಾಬುದ್ದೀನ್ ಪೇಟೆ,ಎಸ್ ಬಿ ಎಸ್ ನಿರ್ದೇಶಕ ಅಬ್ದುಲ್ ಅಹ್ಸನ್ ಉಪಸ್ಥಿತರಿದ್ದರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಕಾರ್ಯಕ್ರಮ ನಿರೂಪಿಸಿದರು
����������������������
ಎಸ್ ಎಸ್ ಎಫ್ ಎಂಬುದು ಮಾದರೀ ಸಂಘಟನೆಯಾಗಿದೆ.ಒಬ್ಬ ಮುಸ್ಲಿಮನು ಮೈಗೂಡಿಸಿಕೊಳ್ಳಬೇಕಾದ ಪ್ರತಿಯೊಂದು ವಿಷಯಗಳು ಎಸ್ ಎಸ್ ಎಫ್ ತಿಳಿಸಿಕೊಡುತ್ತದೆ.ಅದರಲ್ಲಿ ಸೇರಿದವನು ಒಮ್ಮೆಯೂ ದಾರಿತಪ್ಪಲಾರ ಎಂದು ಮಳ್ಹರ್ ದಅವಾ ಕಾಲೇಜು ಪ್ರಾಂಶುಪಾಲರಾದ ಅನಸ್ ಸಖಾಫಿ ಸಿದ್ದೀಖಿ ಶಿರಿಯ ತಿಳಿಸಿದರು.ಅವರು ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಉಳ್ಳಾಲ ಪೇಟೆ ಸಮುದಾಯ ಭವನದಲ್ಲಿ ಹಮ್ಮಿಕೊಂಡ ಮುಲಾಖಾತ್ ಕ್ಯಾಂಪ್ ನಲ್ಲಿ ಭಾಗವಹಿಸಿ ಸಾಂಘಿಕ ತರಗತಿ ನಡೆಸಿದರು.ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ಅಧ್ಯಕ್ಷತೆ ವಹಿಸಿದರು.ಕೋಟೆಪುರ ಶಾಖಾ ಕಾರ್ಯದರ್ಶಿ ಮುಝಮ್ಮಿಲ್ ಉಸ್ತಾದ್ ಕೋಟೆಪುರ ಖಿರಾಅತ್ ಪಠಿಸಿದರು.ಸೆಕ್ಟರ್ ಉಪಾಧ್ಯಕ್ಷ ಮೌಲಾನ ನವಾಝ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿದರು.ನಮ್ಮ ಪ್ರತೀ ಚಲನವಲನ, ನಡೆನುಡಿಗಳಲ್ಲಿ ಇಸ್ಲಾಮಿನ ಸುಂದರ ಆಶಯಾದರ್ಶಗಳನ್ನು ಆಂತರಿಕವಾಗಿಯೂ ಬಾಹ್ಯವಾಗಿಯೂ ಪ್ರಕಟಗೊಳಿಸಬೇಕೆಂದು ಡಿಕೆಎಸ್ಸಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಅರಮಿಕ್ಸ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇಶಾರ ಸಂಪಾದಕ ಅಬ್ದುಲ್ ಹಮೀದ್ ಬಜ್ಪೆ ಹಾಗೂ ಎಸ್ ಎಸ್ ಎಫ್ ಉಳ್ಳಾಲ ಡಿವಿಶನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಪ್ರಾಸ್ತಾವಿಕವಾಗಿ ಮಾತನಾಡಿ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ನ ಕಾರ್ಯವೈಖರಿ ಇಡೀ ರಾಜ್ಯಕ್ಕೆ ಮಾದರಿಯಾಗಿದೆ.ಇಶಾರ ಪಾಕ್ಷಿಕದ ಅಭಿಯಾನ ರಾಜ್ಯದಾದ್ಯಂತ ನಡೆಯುತ್ತಿದ್ದು ಅದನ್ನು ಉಳ್ಳಾಲದ ಪ್ರತಿಯೋರ್ವನಿಗೂ ತಲುಪುವ ಕಾರ್ಯವನ್ನು ಕೈಗೊಳ್ಳಬೇಕೆಂದು ತಿಳಿಸಿದರು.ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಬಶೀರ್ ಅಹ್ಸನಿ ತೋಡಾರ್,ಪ್ರಧಾನ ಕಾರ್ಯದರ್ಶಿ ತ್ವಾಹಿರ್ ಹಾಜಿ ರಿಲೀಫ್ ಫೌಂಡೇಶನ್ ಇದರ ಚಾರಿಟಿ ಬಾಕ್ಸ್ ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್ ಕೈಕೋ,ರಿಲೀಫ್ ಕೋಶಾಧಿಕಾರಿ ಫಾರೂಖ್ ಹಿಬ,ಇಶಾರ ಕಾರ್ಯದರ್ಶಿ ಅಬ್ದುಲ್ ಘನಿ ಹಾಗು ರೀಡ್ ಪ್ಲಸ್ ಕಾರ್ಯನಿರ್ವಾಹಕ ಹನೀಫ್ ಬೊಟ್ಟುಗೆ ನೀಡಿ ಬಿಡುಗಡೆಗೊಳಿಸಿದರು.
ಅಲ್ ಅಮೀನ್ ರಿಲೀಫ್ ಫೌಂಡೇಶನ್ ಇದರ ಚೇರಮಾನ್ ಮನ್ಸೂರ್ ಹಳೆಕೋಟೆ,ಮುಕ್ಕಚ್ಚೇರಿ ಮಸೀದಿ ಅಧ್ಯಕ್ಷ ಇಸ್ಮಾಯಿಲ್ ಮುಕ್ಕಚ್ಚೇರಿ,ಉಳ್ಳಾಲ ಡಿವಿಷನ್ ಉಪಾಧ್ಯಕ್ಷ ಮುಸ್ತಫ ಮಾಸ್ಟರ್ ಉಳ್ಳಾಲ,ಸೆಕ್ಟರ್ ಉಪಾಧ್ಯಕ್ಷರುಗಳಾದ ಮುಹಮ್ಮದ್ ಮದನಿ ಹಾಗು ಶಬೀರ್ ಪೇಟೆ,ಸೆಕ್ಟರ್ ಕಾರ್ಯದರ್ಶಿಗಳಾದ ಸಿರಾಜ್ ಮೇಲಂಗಡಿ ಹಾಗು ಹಫೀಝ್ ಕೋಡಿ,ಸೆಕ್ಟರ್ ಕ್ಯಾಂಪಸ್ ಕಾರ್ಯದರ್ಶಿ ನೌಫಲ್ ಕೋಟೆಪುರ,ಎಸ್ ಬಿ ಎಸ್ ನಿರ್ದೇಶಕ ಅಹ್ಸನ್ ಒಂಭತ್ತುಕೆರೆ,ತ್ವಾಹ ಕೋಟೆಪುರ,ತೌಸೀಫ್ ಒಂಭತ್ತುಕೆರೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.ಸೆಕ್ಟರ್ ಪ್ರಧಾನ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ ಸ್ವಾಗತಿಸಿ ಸೆಕ್ಟರ್ ಜತೆ ಕಾರ್ಯದರ್ಶಿ ತಾಜುದ್ದೀನ್ ಹಳೆಕೋಟೆ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
����������������������
ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧೀನದ ಅಲ್ ಅಮೀನ್ ರಿಲೀಫ್ ಫೌಂಡೇಶನ್ ವತಿಯಿಂದ ಅಸ್ಸಯ್ಯಿದ್ ಪೋಸೋಟು ತಂಗಳ್ ಅಲ್ ಬುಖಾರಿ ಖ.ಸಿ ಉರೂಸ್ ಪ್ರಚಾರಾರ್ಥ ಅಸ್ಸಯ್ಯಿದ್ ಪೋಸೋಟು ತಂಗಳ್ ಅನುಸ್ಮರಣಾ ಕಾರ್ಯಕ್ರಮ ತೊಕ್ಕೋಟು ಕ್ಲಿಕ್ ಅಡಿಟೋರಿಯಂ ಹಾಲ್ ನಲ್ಲಿ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಉಸ್ಮಾನ್ ಸಖಾಫಿ ಪೊಳಲಿ ದುವಾ ನೆರವೇರಿಸಿದರು.ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕೆ ಸಿ ಎಫ್ ಜುಬೈಲ್ ಸೆಕ್ಟರ್ ಅಧ್ಯಕ್ಷ ಹನೀಫ್ ಸಅದಿ ಅಲ್ಲಾಹನ ಮಹಾತ್ಮರ ಸ್ಮರಣೆ ದ್ವಿಲೋಕ ವಿಜಯದ ಹಾದಿಯಾಗಿದೆ ಅಂದರು.ಸಯ್ಯಿದ್ ಪೋಸೋಟು ತಂಗಳ್ ಅನುಸ್ಮರಣಾ ಕಾರ್ಯಕ್ರಮದಲ್ಲಿ ತಹ್ಲೀಲ್ ಸಂಗಮಕ್ಕೆ ನೇತ್ರತ್ವ ನೀಡಿ ಮಾತನಾಡಿದ ಮಳ್ಹರ್ ನೂರುಲ್ ಇಸ್ಲಾಮೀ ತಅಲೀಂ ಇದರ ಪ್ರಧಾನ ಕಾರ್ಯದರ್ಶಿ ಅಸ್ಸಯ್ಯಿದ್ ಜಲಾಲುದ್ದೀನ್ ತಂಗಳ್ ಅಲ್ ಬುಖಾರಿ ಅಲ್ಲಾಹನ ಮಹಾತ್ಮರನ್ನು ಸ್ಮರಿಸುವುದು ಪಾಪ ವಿಮೋಚನೆಯ ದಾರಿಯಾಗಿದೆ.ಅಸ್ಸಯ್ಯಿದ್ ಪೋಸೋಟು ತಂಗಳ್ ಖ.ಸಿ ಅಗಾಧ ಜ್ಞಾನದ ಒಡೆಯರಾಗಿದ್ದರು ಮತ್ತು ಅವರು ಶಿಕ್ಷಣವನ್ನು ತುಂಬಾ ಪ್ರೀತಿಸುತ್ತಿದ್ದರು.ಅವರು ಮಳ್ಹರ್ ವಿದ್ಯಾ ಸಂಸ್ಥೆಯ ಸಾರಥಿಯಾಗಿದ್ದರು.ಇಂದು ಧಾರ್ಮಿಕ ಹಾಗು ಲೌಕಿಕ ಶಿಕ್ಷಣ ನೀಡುವ ಮಾದರೀ ಸಂಸ್ಥೆಯಾಗಿ ಮಳ್ಹರ್ ಕಾರ್ಯಾಚರಿಸುತ್ತಿದೆ ಅಂದರು.ಎಸ್ ವೈ ಎಸ್ ಕರ್ನಾಟಕ ರಾಜ್ಯಾಧ್ಯಕ್ಷ ಹುಸೈನ್ ಸಅದಿ ಕೆ ಸಿ ರೋಡ್ ಮುಖ್ಯ ಪ್ರಭಾಷಣ ಮಾಡಿ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ಅಮೀನ್ ರಿಲೀಫ್ ಫೌಂಡೇಶನ್ ಇದರ ರಿಲೀಫ್ ಸೇವನೆಯು ಇಡೀ ಕರ್ನಾಟಕಕ್ಕೆ ಮಾದರಿಯಾಗಿದೆ ಅಂದರು.ಶರೀಫ್ ಸಅದಿ ಸುಂದರಿಭಾಗ್ ಹಾಗೂ ಡಿಕೆಎಸ್ಸಿ ಕಾರ್ಯಾಧ್ಯಕ್ಷ ಅಬ್ದುಲ್ ಹಮೀದ್ ಅರಮಿಕ್ಸ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಈ ಸಂದರ್ಭದಲ್ಲಿ ರಿಲೀಫ್ ಚೇರಮಾನ್ ಮನ್ಸೂರು ಹಳೆಕೋಟೆ ಅಲ್ ಅಮೀನ್ ರಿಲೀಫ್ ಫೌಂಡೇಶನ್ ಇದರ ಬ್ರೌಶರನ್ನು ಸಯ್ಯಿದ್ ಜಲಾಲುದ್ದೀನ್ ತಂಗಳ್ ರವರಿಗೆ ನೀಡಿ ಬಿಡುಗಡೆಗೊಳಿಸಿದರು.ಬಳಿಕ ಅರ್ಹ ಬಡ ಮುಅಲ್ಲಿಮರಿಗೆ ಗೌರವ ಧನ ಮತ್ತು ಅರ್ಹ ಬಡ ಕುಟುಂಬದ ವ್ರದ್ಧರಿಗೆ ವ್ರದ್ಧಾಪ್ಯ ವೇತನ ಇದರ ಚೆಕ್ಕನ್ನು ಗಣ್ಯರ ಸಮ್ಮುಖದಲ್ಲಿ ಹಸ್ತಾಂತರಿಸಲಾಯಿತು.ಸಯ್ಯಿದ್ ಪೋಸೋಟು ತಂಗಳ್ ಉರೂಸಿಗೆ ಅಲ್ ಅಮೀನ್ ರಿಲೀಫ್ ಫೌಂಡೇಶನ್ ಉಳ್ಳಾಲ ಇದರ ಆಶ್ರಯದಲ್ಲಿ ಉಳ್ಳಾಲದಿಂದ ಅಕ್ಕಿ ಸಂದಲ್ ಮೆರವಣಿಗೆಯ ಮೂಲಕ ಹಸ್ತಾಂತರಿಸಲಾಗುವುದೆಂದು ಈ ಸಂದರ್ಭದಲ್ಲಿ ತಿಳಿಸಲಾಯಿತು.
ಪ್ರಸ್ತುತ ಈ ಕಾರ್ಯಕ್ರಮದಲ್ಲಿ ಮಳ್ಹರ್ ಅಕಾಡೆಮಿಕ್ ಆಫ್ ಜನರಲ್ ಎಜ್ಯುಕೇಶನಲ್ ಟ್ರಸ್ಟ್ ಇದರ ಕಾರ್ಯದರ್ಶಿ ಫಾರೂಖ್ ಕಲ್ಲಾಪು,ರಿಲೀಫ್ ಕೋಶಾಧಿಕಾರಿ ಫಾರೂಖ್ ಹಿಬಃ, ಫಾರೂಖ್ ಬೊಟ್ಟು,ಬಶೀರ್ ಸಖಾಫಿ ಉಳ್ಳಾಲ,ಅಶ್ರಫ್ ಅಕ್ಕರೆಕೆರೆ,ಉಪಾಧ್ಯಕ್ಷರುಗಳಾದ ಮುಹಮ್ಮದ್ ಮದನಿ ಹಳೆಕೋಟೆ,ನವಾಝ್ ಸಖಾಫಿ ಉಳ್ಳಾಲ,ಶಬೀರ್ ಪೇಟೆ,ಕಾರ್ಯದರ್ಶಿಗಳಾದ ತಾಜುದ್ದೀನ್ ಹಳೆಕೋಟೆ,ಹಫೀಝ್ ಕೋಡಿ,ನೌಫಲ್ ಕೋಟೆಪುರ,ಹಾಗು ಸತ್ತಾರ್ ಮೇಲಂಗಡಿ ಉಪಸ್ಥಿತರಿದ್ದರು.ರಿಲೀಫ್ ಕಾರ್ಯದರ್ಶಿ ಅತೀಖ್ ಕೋಡಿ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.ಮುನೀರ್ ಸಖಾಫಿ ಉಳ್ಳಾಲ ಧನ್ಯವಾದಗೈದರು.
����������������������
ಎಸ್ ಎಸ್ ಎಫ್ ಉಳ್ಳಾಲ ಅಕ್ಕರೆಕೆರೆ ಶಾಖೆ ವತಿಯಿಂದ ಇಶಾರ ಚಂದಾ ಅಭಿಯಾನವು ಸಯ್ಯಿದ್ ಮದನಿ ಸುನ್ನೀ ಸೆಂಟ್ರಲ್ ಕಮಿಟಿ ಉಳ್ಳಾಲ ಇದರ ಅಧ್ಯಕ್ಷ ಹುಸೈನ್ ಮೋನು ಇವರಿಗೆ ಇಶಾರ ಚಂದಾ ನೀಡುವ ಮೂಲಕ ಅಭಿಯಾನಕ್ಕೆ ಮಹತ್ವದ ಚಾಲನೆ ನೀಡಲಾಯಿತು.ನವಾಝ್ ಸಖಾಫಿ ಉಳ್ಳಾಲ ದುವಾ ನಡೆಸಿಕೊಟ್ಟರು.ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್,ಸೆಂಟ್ರಲ್ ಕಮಿಟಿ ಅಧ್ಯಕ್ಷ ಹುಸೈನ್ ಮೋನು ಈ ಸಂದರ್ಭದಲ್ಲಿ ಮಾತನಾಡಿದರು.
ಸೆಂಟ್ರಲ್ ಕಮಿಟಿ ಕಾರ್ಯದರ್ಶಿ ಅಬ್ದುಲ್ ಸತ್ತಾರ್,ಉಪಾಧ್ಯಕ್ಷ ಉಮರಾಕ,ನಝೀರ್,ಖಾಲಿದ್,ಮಜೀದ್ ಹಾಗು ಸಿರಾಜ್ ಉಪಸ್ಥಿತರಿದ್ದರು.
�����������������������
ಅಲ್ ಅಮೀನ್ ರಿಲೀಫ್ ಫೌಂಡೇಶನ್ ಎಸ್ ಎಸ್ ಎಫ್ ಉಳ್ಳಾಲ ಸೆಕ್ಟರ್ ಆಶ್ರಯದಲ್ಲಿ ಉಳ್ಳಾಲ ಅಳೇಕಲ ಮದ್ರಸದಲ್ಲಿ ಸುದೀರ್ಘ 50 ವರ್ಷಗಳ ಕಾಲ ಸದರ್ ಉಸ್ತಾದ್ ಆಗಿ ಸೇವೆ ಸಲ್ಲಿಸಿದ್ದ ಮರ್ಹೂಂ ಎಸ್ ಎಂ ತಂಗಳ್ ಅನುಸ್ಮರಣಾ ಪ್ರಯುಕ್ತ ಅರ್ಹ ಬಡ ಕುಟುಂಬಗಳಿಗೆ 7 ಕ್ವಿಂಟಾಲ್ ಅಕ್ಕಿ ಮೇಲಂಗಡಿ ಫಿರ್ದೌಸ್ ಆಡಿಟೋರಿಯಂ ನಲ್ಲಿ ಸೆಕ್ಟರ್ ಅಧ್ಯಕ್ಷ ಖುಬೈಬ್ ತಂಗಳ್ ರವರ ನೇತ್ರತ್ವದಲ್ಲಿ ವಿತರಿಸಲಾಯಿತು.
ಬಶೀರ್ ಸಖಾಫಿ ಉಳ್ಳಾಲ ದುವಾ ನೆರವೇರಿಸಿದರು.ಹಾಫಿಝ್ ಮುಈನ್ ಉಳ್ಳಾಲ ಉದ್ಘಾಟಿಸಿದರು.ಸಿರಾಜ್ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಯೂಸುಫ್ ಮಿಲ್ಲತ್ ನಗರ,ಅಶ್ರಫ್ ಸುಂದರಿಭಾಗ್,ಸತ್ತಾರ್ ಮೇಲಂಗಡಿ ಉಪಸ್ಥಿತರಿದ್ದರು.ಮೌಲಾನ ನವಾಝ್ ಸಖಾಫಿ ಸ್ವಾಗತಿಸಿ ಫಾರೂಖ್ ಬೊಟ್ಟು ಧನ್ಯವಾದಗೈದರು.
����������������������
No comments:
Post a Comment