Share To

Thursday, 11 January 2018

ಶೈಖುನಾ ಅಹ್ಮದ್ ಬಾವ ಉಸ್ತಾದರಿಗೆ ತಾಜುಲ್ ಉಲಮಾ ಪ್ರಶಸ್ತಿ ಪ್ರಧಾನ



ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ಶಾಖಾ ಪ್ರಥಮ ವಾರ್ಷಿಕೋತ್ಸವ ಸಮಾರಂಭ ಹಾಗು ತಾಜುಲ್ ಉಲಮಾ ಅನುಸ್ಮರಣಾ ಪ್ರಯುಕ್ತ ಬ್ರಹತ್ ಬುರ್ದಾ ಮಜ್ಲಿಸ್ ಮತ್ತು ತಾಜುಲ್ ಉಲಮಾ ಖ.ಸಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಉಳ್ಳಾಲ ಮಾಸ್ತಿಕಟ್ಟೆ ಜಂಕ್ಷನಿನ ಮರ್ಹೂಮ್ ಕಬೀರ್ ವೇದಿಕೆಯಲ್ಲಿ ನಡೆಯಿತು.



ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಳ್ಳಾಲ ಸೆಕ್ಟರ್ ಅಧ್ಯಕ್ಷರಾದ ಸಯ್ಯಿದ್ ಖುಬೈಬ್ ತಂಗಳ್ ಉಳ್ಳಾಲ ವಹಿಸಿದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷರಾದ ಸಯ್ಯಿದ್ ಜಲಾಲ್ ತಂಗಳ್ ದುವಾ ನೆರವೇರಿಸಿದರು. ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಅಧ್ಯಕ್ಷರಾಗಿರುವ ಪಿ ಎಸ್ ಮುಹಮ್ಮದ್ ಶಿಹಾಬುದ್ದೀನ್ ಅಶ್ರಫಿ ಅಲ್ ಕಾಮಿಲ್ ಸಖಾಫಿ ಉಳ್ಳಾಲ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸುಂದರಭಾಗ್ ಜುಮಾ ಮಸೀದಿ ಖತೀಬರಾದ ಶರೀಫ್ ಸಅದಿ ಅನುಸ್ಮರಣಾ ಪ್ರಭಾಷಣ ನಡೆಸಿದರು. ಆಝಾದ್ ನಗರ ಜುಮಾ ಮಸೀದಿ ಖತೀಬರಾದ ಕಲಂದರ್ ಸಖಾಫಿ ಹಾಗು ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಅಧ್ಯಕ್ಷರಾದ ಮುನೀರ್ ಅಹ್ಮದ್ ಕಾಮಿಲ್ ಸಖಾಫಿ ಉಳ್ಳಾಲ ಪ್ರಾಸ್ತಾವಿಕವಾಗಿ ಮಾತನಾಡಿದರು. ಲದಲ್ ಹಬೀಬ್ ಬುರ್ದಾ ತಂಡ ಅಳೇಕಲ ಬುರ್ದಾ ಆಲಾಪನೆಗೈದರು. 



ಕಾರ್ಯಕ್ರಮದಲ್ಲಿ ದರ್ಸ್ ಸೇವಾ ರಂಗದಲ್ಲಿ ಸುದೀರ್ಘ ಐವತ್ತೈದು ವರ್ಷಗಳನ್ನು ಪೂರೈಸಿದ ಸಯ್ಯಿದ್ ಮದನಿ ಶರೀಅತ್ ಕಾಲೇಜು ಉಳ್ಳಾಲ ಇದರ ಪ್ರೊಫೆಸರ್ ಆಗಿರುವ ಶೈಖುನಾ ಅಹ್ಮದ್ ಬಾವಾ ಉಸ್ತಾದರಿಗೆ ತಾಜುಲ್ ಉಲಮಾ ಪ್ರಶಸ್ತಿ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರಿನ ನಾಯಕರುಗಳಾದ ಸಯ್ಯಿದ್ ಖುಬೈಬ್ ತಂಗಳ್ ಹಾಗು ಮುಝಮ್ಮಿಲ್ ಕೋಟೆಪುರ ಇವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ತಾಜುಲ್ ಉಲಮಾ ಖ.ಸಿ ಮೊಮ್ಮಗ ಸಯ್ಯಿದ್ ಜುನೈದ್ ಇಂಬಿಚ್ಚಿಕೋಯ ತಂಗಳ್ ಕೊಯ್ಲಾಂಡಿ ಸಮಾರೋಪ ಪ್ರಾರ್ಥನೆಗೆ ನೇತ್ರತ್ವ ವಹಿಸಿದರು.


ಪ್ರಸ್ತುತ ಕಾರ್ಯಕ್ರಮದಲ್ಲಿ ಎಸ್ ವೈ ಎಸ್ ಮೇಲಂಗಡಿ ಬ್ರಾಂಚ್ ಅಧ್ಯಕ್ಷರಾದ ಬಶೀರ್ ಸಖಾಫಿ ಉಳ್ಳಾಲ, ಸಯ್ಯಿದ್ ಮದನಿ ಮೊಹಲ್ಲಾ ಒಕ್ಕೂಟ ಉಳ್ಳಾಲ ಇದರ ಗೌರವಾಧ್ತಕ್ಷರಾಗಿರುವ ಯು ಎಸ್ ಹಂಝ ಹಾಜಿ, ದ.ಕ ಜಿಲ್ಲಾ ಎಸ್ ವೈ ಎಸ್ ಕೋಶಾಧಿಕಾರಿ ಬಿ ಜಿ ಹನೀಫ್ ಹಾಜಿ, ಉಳ್ಳಾಲ ನಗರ ಸಭಾ ಸದಸ್ಯ ಇಬ್ರಾಹಿಂ ಶೌಕತ್, ಮಿಅ್ರಾಜ್ ಗ್ರೂಒ್ ಮಾಲಕರಾದ ಉಮರ್ ಹಾಜಿ ಮಿಹರಾಜ್,  ಆಝಾದ್ ನಗರ ಎಸ್ ವೈ ಎಸ್ ನಾಯಕರಾದ ಎ. ಆರ್ ರಫೀಕ್, ಮುಹಮ್ಮದ್ ಫ್ಯಾನ್ಸಿ ಹಾಗು ಆಝಾದ್ ನಗರ ಶಾಖಾ ಪ್ರಧಾನ ಕಾರ್ಯದರ್ಶಿ ಮುಝಫ್ಫರ್ ಉಪಸ್ಥಿತರಿದ್ದರು. ಆಝಾದ್ ನಗರ ಶಾಖಾಧ್ತಕ್ಷರಾದ ಹಾಫಿಝ್ ಮುಈನ್ ರಝ್ವಿ ಉಳ್ಳಾಲ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

No comments:

Post a Comment