ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ಶಾಖಾ ರಚನಾ ಕಾರ್ಯಕ್ರಮ ಹಾಗು ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ಎಸ್ಸೆಸ್ಸೆಫ್ ಉಳ್ಳಾಲ ಸೆಕ್ಟರ್ ಅಧ್ಯಕ್ಷ ಸಯ್ಯಿದ್ ಖುಬೈಬ್ ತಂಗಳ್ ರವರ ಅಧ್ಯಕ್ಷತೆಯಲ್ಲಿ ಆಝಾದ್ ನಗರ ಮುಸ್ತಫ ಪ್ಯಾಲೇಸ್ ನಲ್ಲಿ ಇತ್ತೀಚೆಗೆ ನಡೆಯಿತು.
ಎಸ್ಸೆಸ್ಸೆಫ್ ಉಳ್ಳಾಲ ಡಿವಿಷನ್ ಪ್ರಧಾನ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಕಾರ್ಯಕ್ರಮವನ್ನು ಉದ್ಘಾಟಿಸಿದರು.ಸೆಕ್ಟರ್ ಉಪಾಧ್ಯಕ್ಷರುಗಳಾದ ಮುಹಮ್ಮದ್ ಮದನಿ, ನವಾಝ್ ಸಖಾಫಿ, ದ.ಕ ವಕ್ಫ್ ಸಲಹಾ ಸಮಿತಿ ಸದಸ್ಯರಾದ ಹನೀಫ್ ಹಾಜಿ, ಆಝಾದ್ ನಗರ ಕೌನ್ಸಿಲರ್ ಶೌಕತ್ ಪ್ರಾಸ್ತಾವಿಕವಾಗಿ ಮಾತನಾಡಿದರು.ಶರೀಫ್ ಸಅದಿ ಸುಂದರಭಾಗ್ ತರಗತಿ ನಡೆಸಿದರು.ಬಳಿಕ ಎಸ್ಸೆಸ್ಸೆಫ್ ಆಝಾದ್ ನಗರ ಶಾಖೆಗೆ ಚಾಲನೆ ನೀಡಿ ನೂತನ ಸಮಿತಿಯನ್ನು ಆರಿಸಲಾಯಿತು.
ಅಧ್ಯಕ್ಷರಾಗಿ ಹಾಫಿಝ್ ಮುಈನ್ ಉಸ್ತಾದ್ ಉಳ್ಳಾಲ, ಉಪಾಧ್ಯಕ್ಷರಾಗಿ ಸುಹೈಲ್, ಪ್ರಧಾನ ಕಾರ್ಯದರ್ಶಿಯಾಗಿ ಮುಝಫ್ಫರ್, ಜೊತೆ ಕಾರ್ಯದರ್ಶಿಗಳಾಗಿ ಸೈಫುಲ್ಲಾಹ್ ಹಾಗು ಅತಾವುಲ್ಲಾಹ್, ಕೋಶಾಧಿಕಾರಿಯಾಗಿ ಹಾಶಿಂ, ಕ್ಯಾಂಪಸ್ ಕಾರ್ಯದರ್ಶಿಯಾಗಿ ಶಫೀಉಲ್ಲಾಹ್ ಮತ್ತು ಹದಿನೇಳು ಮಂದಿ ಕಾರ್ಯಕಾರಿ ಸಮಿತಿ ಸದಸ್ಯರನ್ನು ಹಾಗು ನಾಲ್ಕು ಮಂದಿ ಸೆಕ್ಟರ್ ಕೌನ್ಸಿಲರ್ ಗಳಾಗಿ ಆಯ್ಕೆ ಮಾಡಲಾಯಿತು.
ಈ ಸಂದರ್ಭದಲ್ಲಿ ಸೆಕ್ಟರ್ ಕಾರ್ಯದರ್ಶಿ ಮುಝಮ್ಮಿಲ್ ಕೋಟೆಪುರ,ಸೆಕ್ಟರ್ ಕೋಶಾಧಿಕಾರಿ ಇಲ್ಯಾಸ್,ಮುಝಮ್ಮಿಲ್ ಉಸ್ತಾದ್,ಎ.ಆರ್ ರಫೀಖ್,ಸಯ್ಯಿದ್ ಜವಾದ್,ಶಫೀಖ್ ಮೇಲಂಗಡಿ ಉಪಸ್ಥಿತರಿದ್ದರು.ಚುನಾವಣಾ ವೀಕ್ಷಕರಾಗಿ ಸಿರಾಜ್ ಹಾಗು ಅಹ್ಸನ್ ಆಗಮಿಸಿದ್ದರು.ಕೊನೆಗೆ ಮುಝಫ್ಫರ್ ಧನ್ಯವಾದಗೈದರು.
Saturday, 31 December 2016
ಎಸ್ಸೆಸ್ಸೆಫ್ ಉಳ್ಳಾಲ ಆಝಾದ್ ನಗರ ನೂತನ ಶಾಖೆ ರಚನೆ ಹಾಗು ನೂತನ ಸಮಿತಿ ಆಯ್ಕೆ ಪ್ರಕ್ರಿಯೆ ಕಾರ್ಯಕ್ರಮ
Subscribe to:
Post Comments (Atom)
No comments:
Post a Comment